ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂವಿವಿ ಸಿಬ್ಬಂದಿ ಚೆಕ್ಕರ್‌ ಹೊಡೆಯುವಂತಿಲ್ಲ: ಬಯೋಮೆಟ್ರಿಕ್‌ ಬಂತಲ್ಲ

By Nayana
|
Google Oneindia Kannada News

ಬೆಂಗಳೂರು, ಜು.4: ಇನ್ನುಮುಂದೆ ಬೋಧಕ, ಬೋಧಕೇತರರು ಚೆಕ್ಕರ್‌ ಹೊಡೆಯುವಂತಿಲ್ಲ ಏಕೆಂದರೆ ಬಯೋಮೆಟ್ರಿಕ್‌ ಅಳವಡಿಸಲು ಬೆಂಗಳೂರು ವಿಶ್ವವಿದ್ಯಾಲಯ ಸಜ್ಜಾಗಿದೆ.

ಕಾಲೇಜುಗಳಲ್ಲಿ ಅಧ್ಯಾಪಕರಿಂದಲೇ ಕೆಲವು ಅಹಿತಕರ ಘಟನೆ ಸಂಭವಿಸಿದಲ್ಲಿ ಅಥವಾ ಅಧ್ಯಾಪಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಬಯೋಮೆಟ್ರಿಕ್‌ ಅಳವಡಿಸಲು ಚಿಂತನೆ ನಡೆಸಿದೆ.

ವರ್ಷದ ಹಿಂದೆ ಕೋಲಾರ ಪಿಜಿ ಕೇಂದ್ರದ ವಿದ್ಯಾರ್ಥಿನಿಗೆ ಕನ್ನಡ ಅಧ್ಯಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿದರು ಎಂಬ ಆರೋಪ ಕೇಳಿಬಂದಾಗ ಅಧ್ಯಾಪರು ಯಾವ ಸಮಯದಲ್ಲಿ ಎಲ್ಲಿದ್ದರು ಎಂಬ ಪ್ರಶ್ನೆ ಉದ್ಭವವಾಗಿತ್ತು. ಆಗಲೇ ಬಯೋಮೆಟ್ರಿಕ್‌ ಅಳವಡಿಸಲು ವಿವಿ ಮುಂದಾಗಿತ್ತು.

ಶಿಕ್ಷಕರ ಹಾಜರಿ ಮೇಲೆ ನಿಗಾ: ಶಾಲೆಗಳಲ್ಲಿ ಬಯೊಮೆಟ್ರಿಕ್ ಜಾರಿಶಿಕ್ಷಕರ ಹಾಜರಿ ಮೇಲೆ ನಿಗಾ: ಶಾಲೆಗಳಲ್ಲಿ ಬಯೊಮೆಟ್ರಿಕ್ ಜಾರಿ

ಕೆಲವು ವಿಭಾಗಗಳಲ್ಲಿ ಮಾತ್ರ ಇದುವರೆಗೂ ಅಳವಡಿಸಲಾಗಿದೆ. ಪರಿಣಾಮಕಾರಿಯಾಗಿ ಅನುಷ್ಠಾನವಾಗದಿದ್ದರಿಂದ ವಿವಿ ಸುಮ್ಮನಾಗಿತ್ತು. ವಿಶ್ವವಿದ್ಯಾಲಯಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸಬೇಕೆಂದು ಉನ್ನತ ಶಿಕ್ಷಣ ಇಲಾಖೆ ಕಳೆದ ಎರಡು ವರ್ಷಗಳ ಹಿಂದೆಯೇ ಸೂಚನೆ ನೀಡಿತ್ತು.

1200 ಎಕರೆ ಪ್ರದೇಶದಲ್ಲಿರುವ ಜ್ಞಾನಭಾರತಿ ಬೆಂಗಳೂರು ವಿವಿ ಆವರಣದಲ್ಲಿ 39 ಸ್ನಾತಕೋತ್ತರ ಪದವಿ ವಿಭಾಗಗಳಿವೆ. ಇದರಲ್ಲಿ 2 ಸಾವಿರ ಬೋಧಕರು ಮತ್ತು ಬೋಧಕೇತರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎಲ್ಲೆಲ್ಲಿ ಬಯೋಮೆಟ್ರಿಕ್‌ ಅಳವಡಿಕೆಯಾಗಿದೆ

ಎಲ್ಲೆಲ್ಲಿ ಬಯೋಮೆಟ್ರಿಕ್‌ ಅಳವಡಿಕೆಯಾಗಿದೆ

ಶಿವಮೊಗ್ಗದಲ್ಲಿರುವ ಕುವೆಂಪು ವಿಶ್ವವಿದ್ಯಾಲಯ, ಮೈಸೂರಿನ ರಾಜ್ಯ ಮುಕ್ತ ವಿಶ್ವವಿಸ್ಯಾಲಯ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಹುಬ್ಬಳ್ಳಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯ ಬಯೋಮೆಟ್ರಿಕ್‌ ಪದ್ಧತಿ ಅಳವಡಿಸಿಕೊಂಡಿದೆ.

ವೇತನ ಹೆಚ್ಚಳಕ್ಕೂ ಮಾನದಂಡ

ವೇತನ ಹೆಚ್ಚಳಕ್ಕೂ ಮಾನದಂಡ

ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಪ್ರಾಧ್ಯಾಪಕರ ವೇತನ ಹೆಚ್ಚಳಕ್ಕೂ ಮಾನದಂಡವಾಗಲಿದೆ. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ವೇತನ ಹೆಚ್ಚಳಕ್ಕೆ ಬಯೋಮೆಟ್ರಿಕ್‌ ಹಾಜರಾತಿ ಪರಿಗಣನೆಗೆ ತೆಗೆದುಕೊಳ್ಳುತ್ತದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

ಬಯೋಮೆಟ್ರಿಕ್‌ ಅಳವಡಿಕೆಗೆ ಪ್ರಾಧ್ಯಾಪಕರ ವಿರೋಧ

ಬಯೋಮೆಟ್ರಿಕ್‌ ಅಳವಡಿಕೆಗೆ ಪ್ರಾಧ್ಯಾಪಕರ ವಿರೋಧ

ವಿವಿಯಲ್ಲಿ ಪ್ರೊಫೆಸರ್‌ ಮಾಸಿಕ 1.30 ಲಕ್ಷ ರೂ. ರೀಡರ್‌ 1 ಲಕ್ಷ ರೂ. ಪ್ರಾಧ್ಯಾಪಕರು 60 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ವಿವಿಯಲ್ಲಿರುವ ಪ್ರಾಧ್ಯಾಪಕರು ಈಗಾಗಲೇ ಮೂವ್‌ಮೆಂಟ್‌ ರಿಜಿಸ್ಟರ್‌ನಲ್ಲಿ ಸಹಿ ಮಾಡುತ್ತಿದ್ದಾರೆ. ಪ್ರಾಧ್ಯಾಪಕರು ಬೋಧನೆ ಸಂಬಂಧ ಹಲವಾರು ಬಾರಿ ಗ್ರಂಥಾಲಯಕ್ಕೆ ಹೋಗುತ್ತಾರೆ. ಪ್ರತಿಸಲವೂ ಬಯೋಮೆಟ್ರಿಕ್‌ ಎಂಟ್ರಿ ಮಾಡಬೇಕು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಯುಜಿಸಿ ನಿಯಮವೇನಿದೆ?

ಯುಜಿಸಿ ನಿಯಮವೇನಿದೆ?

ಯುಜಿಸಿ ನಿಯಮದ ಪ್ರಕಾರ ಪ್ರಾಧ್ಯಾಪಕರು ವಾರಕ್ಕೆ ಕನಿಷ್ಠ 16 ತಾಸು ಕೆಲಸ ಮಾಡಬೇಕು, ರೀಡರ್‌ ಮತ್ತು ಸಹಾಯಕ ಪ್ರಾಧ್ಯಾಪಕರು ವಾರಕ್ಕೆ 16 ಗಂಟೆ ಕೆಲಸ ಮಾಡಬೇಕು. ರಜೆ ಬೇಕಾದಲ್ಲಿ ವಿಭಾಗದ ಮುಖ್ಯಸ್ಥರಿಗೆ ಪತ್ರ ಬರೆದು ಪಡೆಯಬೇಕು.

English summary
Bangalore university has installed and made mandatory for lecturers and staff to attend duties with punctual as biometric system installed. There were huge complaints about lecturers on this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X