₹100 ಕೋಟಿ ವೆಚ್ಚದಲ್ಲಿ ರಾಜ್ಯದ ಈ ಜಿಲ್ಲೆಗೆ ಸಿಕ್ತು 'ಬಯೊಚಾರ್ ತಯಾರಿಕಾ ಘಟಕ', ಏನಿದು?

ಬೆಂಗಳೂರು, ಜೂನ್ 21: ಭಾರತದಲ್ಲಿ ಮೊದಲ ಅತ್ಯಾಧುನಿಕ ತಂತ್ರಜ್ಞಾನದ ಬಯೊಚಾರ್ ತಯಾರಿಕಾ ಘಟಕ ಸ್ಥಾಪನೆಯು ಅದು ಕರ್ನಾಟಕ ಪ್ರಮುಖ ಜಿಲ್ಲೆಯಲ್ಲಿ ಆಗುತ್ತಿರುವುದು ಸಂತಸದ ವಿಚಾರ. ಇಂತಹ ಪರಿಸರ ಸ್ನೇಹಿ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿರುವ ಕಂಪನಿಯ ಪ್ರಯತ್ನಳಿಗೆ, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವದಕ್ಕೆ ಹರ್ಷ ವ್ಯಕ್ತಪಡಿಸಿದ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಸರ್ಕಾರದಿಂದ ಎಲ್ಲ ವಿಧದ ಸಹಕಾರ ನೀಡುವುದಾಗಿ ತಿಳಿಸಿದರು.

ಹೌದು 'ಸುಸ್ಥಿರ ಇಂಧನ ಪರಿಹಾರಗಳಲ್ಲಿ ಮುಂಚೂಣಿಯಲ್ಲಿ ಇರುವ ಡೆನ್ಮಾರ್ಕ್‌ನ ಮಾಷ್ ಮೇಕ್ಸ್ ಕಂಪನಿಯು ಕರ್ನಾಟಕದಲ್ಲಿ ಹೂಡಿಕೆಗೆ ಮುಂದಾಗಿದೆ. ರಾಜ್ಯದ ಉಡುಪಿಯಲ್ಲಿ ಅಂದಾಜು ₹100 ಕೋಟಿ ವೆಚ್ಚದಲ್ಲಿ 'ಬಯೊಚಾರ್ ತಯಾರಿಸುವ ಘಟಕ' ಸ್ಥಾಪಿಸಲಿದೆ. ಇದರೊಂದಿಗೆ ಬೇರೆ ಬೇರೆ ಕಂಪನಿಯಗಳು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಾಡಲಿರುವ ಹೂಡಿಕೆ ಕುರಿತು ಅವರು ವಿವರಿಸಿದರು.

Biochar Manufacturing Unit to Be Set Up in Udupi district of Karnataka at a Cost 100 crore

ಮೊದಲಿಗೆ 'ಬಯೊಚಾರ್ ತಯಾರಿಸುವ ಘಟಕ'ದ ಬಗ್ಗೆ ನೋಡುವುದಾದರೆ, ಮಣ್ಣಿನ ಫಲವತ್ತತೆ ಸುಧಾರಿಸುವ ಗೋಡಂಬಿ ಸಂಸ್ಕರಣೆಯ ತ್ಯಾಜ್ಯ ಬಳಸಿ ಸಮೃದ್ಧ ಇಂಗಾಲ ಹೊಂದಿರುವ ಬಯೊಚಾರ್ ತಯಾರಿಸುವ ಘಟಕ ಇದಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಈ ಘಟಕ ಭಾರತದಲ್ಲಿ ಮೊದಲು ಕರಾವಳಿ ಜಿಲ್ಲೆಯಲ್ಲಿ ಸ್ಥಾಪನೆಯಾಗಲಿದೆ ಎಂದು ಕಂಪನಿ ಪರ ಸಚಿವರು ಮಾಹಿತಿ ನೀಡಿದರು.

ಬಯೊಚಾರ್ ತಯಾರಿಕಾ ಘಟಕವು ಪರಿಸರ ಸ್ನೇಹಿ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿರುವ ಕಂಪನಿಯ ಮುಖ್ಯ ಪ್ರಯತ್ನಗಳಲ್ಲಿ ಒಂದಾಗಿದೆ. ಉಡುಪಿಯ ಈ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.

ಕರ್ನಾಟಕದಲ್ಲಿ ಎಪಿರಾಕ್ ₹1,000 ಹೂಡಿಕೆ..

ಶುದ್ಧ ಇಂಧನ, ನಾವೀನ್ಯತೆ, ಸಂಶೋಧನೆ ಮತ್ತು ಅತ್ಯಾಧುನಿಕ ತಯಾರಿಕಾ ವಲಯಗಳಲ್ಲಿ ಕರ್ನಾಟಕದ ಕೈಗಾರಿಕಾ ಸಾಮರ್ಥ್ಯ ಬಲಪಡಿಸಲು ಹಾಗೂ ವಾಣಿಜ್ಯ ಸಹಯೋಗ ವೃದ್ಧಿಸುವ ಸಂಬಂಧ ರಾಜ್ಯದ ನಿಯೋಗ ಸ್ವೀಡನ್‌ ಮತ್ತು ಡೆನ್ಮಾರ್ಕ್‌ಗೆ ಭೇಟಿ ನೀಡುತ್ತಿದ್ದು, ಎಪಿರಾಕ್, ಮಾಷ್ ಮೇಕ್ಸ್ ಮತ್ತು ಡಬ್ಲ್ಯುಎಸ್‌ ಆಡಿಯೊಲೊಜಿ ಕಂಪನಿಗಳ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿತು.

ಕರ್ನಾಟಕದಲ್ಲಿನ ಕಂಪನಿಯ ಹೂಡಿಕೆ ಯೋಜನೆ ಹಾಗೂ ದೀರ್ಘಾವಧಿಯ ಉದ್ದೇಶಗಳನ್ನು ಎಪಿರಾಕ್ ಕಂಪನಿಯ ಭಾರತ ಕಾರ್ಯಾಚರಣೆಯ ಮುಖ್ಯಸ್ಥ ಅರುಣ್‌ ಕುಮಾರ್‌ ಅವರು ಸಚಿವರ ಜತೆ ಹಂಚಿಕೊಂಡರು. ಪ್ರಸಕ್ತ ಸಾಲಿನಲ್ಲಿ ₹500 ಕೋಟಿ ಮತ್ತು 2030ರ ವೇಳೆಗೆ ಹೆಚ್ಚುವರಿಯಾಗಿ ₹1,000 ಕೋಟಿ ಹೂಡಿಕೆಯ ಯೋಜನೆಗಳನ್ನು ಅವರು ವಿವರಿಸಿದರು.

ಬೆಂಗಳೂರಿನಲ್ಲಿ ಶ್ರವಣ ಸಾಧನ ತಯಾರಿಕಾ ಘಟಕ

ಕರ್ನಾಟಕದಲ್ಲಿನ ಕೈಗಾರಿಕಾ ಸಾಮರ್ಥ್ಯ, ಕುಶಲ ಮಾನವ ಸಂಪನ್ಮೂಲದ ಲಭ್ಯತೆ ಹಾಗೂ ಪೂರಕ ಮೂಲಸೌಲಭ್ಯಗಳು ಎಪಿರಾಕ್‌ನ ಭವಿಷ್ಯದ ತಯಾರಿಕಾ ಸಾಮರ್ಥ್ಯ ವಿಸ್ತರಣೆಗೆ ಕರ್ನಾಟಕವು ಸೂಕ್ತ ತಾಣವಾಗಿದೆ. ಕಂಪನಿಯ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರ್ಕಾರವು ಅಗತ್ಯ ಬೆಂಬಲ ನೀಡಲಿದೆ.

ಶ್ರವಣ ಸಾಧನಗಳನ್ನು ತಯಾರಿಸುವ ಭಾರತದಲ್ಲಿನ ಮೊದಲ ಘಟಕವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿರುವ ಡಬ್ಲ್ಯುಎಸ್ ಆಡಿಯೊಲೊಜಿ ಕಂಪನಿಯು ತನ್ನ ಸದ್ಯದ ಹಾಗೂ ಭವಿಷ್ಯದ ವಹಿವಾಟು ವಿಸ್ತರಿಸಲು ಮುಂದಾಗಬೇಕು ಎಂದು ಸಚಿವರು ಮನವಿ ಮಾಡಿದರು. ಕಂಪನಿಯ ಅಗತ್ಯಕ್ಕೆ ತಕ್ಕಂತೆ ಅಗತ್ಯ ಉತ್ತೇಜನಾ ಕ್ರಮಗಳನ್ನು ಒದಗಿಸುವುದಾಗಿ ಸಚಿವರು ತಿಳಿಸಿದರು.

'ಶ್ರವಣ ಸಾಧನಗಳು ದುರ್ಬಲ ವರ್ಗದವರಿಗೆ ಕೈಗೆಟುಕುವ ಬೆಲೆಗೆ ದೊರೆಯುವಂತಾಗಬೇಕು. ಅದಕ್ಕಾಗಿ ಕಡಿಮೆ ವೆಚ್ಚದ ಶ್ರವಣ ಸಾಧನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು' ಎಂದು ಸಚಿವರು ಸಲಹೆ ಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+