ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಹೊಸ ಮೇಯರ್ ಸ್ವಾಗತಿಸಿದ ಹಳೇ ಕಸದ ಸಮಸ್ಯೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 12 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್‌ಗೆ ಹಳೆಯ ಸಮಸ್ಯೆ ಸ್ವಾಗತ ಕೋರಿದೆ. ಬಿಂಗೀಪುರದಲ್ಲಿ ಕಸ ಡಂಪಿಂಗ್‍ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಕಸದ ಲಾರಿಗಳನ್ನು ತಡೆದಿದ್ದಾರೆ.

ಮಂಜುನಾಥ ರೆಡ್ಡಿ ಅವರು ಬಿಬಿಎಂಪಿ ಮೇಯರ್ ಆಗಿ ಅಧಿಕಾರ ವಹಿಸಿಕೊಂಡು 24 ಗಂಟೆ ಪೂರೈಸುವುದಕ್ಕೂ ಮೊದಲೇ ಕಸ ವಿಲೇವಾರಿ ಸಮಸ್ಯೆ ಎದುರಾಗಿದೆ. ಗ್ರಾಮಸ್ಥರು ಕಸದ ಲಾರಿಗಳನ್ನು ತಡೆದಿದ್ದರಿಂದ ಬೆಂಗಳೂರು ದಕ್ಷಿಣ ಭಾಗದಲ್ಲಿ ಕಸ ವಿಲೇವಾರಿಗೆ ಸಮಸ್ಯೆ ಎದುರಾಗಿದೆ. [ನೂತನ ಮೇಯರ್ ಮುಂದಿರುವ 10 ಸವಾಲುಗಳು]

bbmp

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆನೇಕಲ್ ಬಳಿ ಇರುವ ಬಿಂಗೀಪುರದಲ್ಲಿ ಕಸ ಡಂಪಿಂಗ್‍ ಮಾಡುತ್ತಿದೆ. ಆದರೆ, ಈಗ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ, ಬನಶಂಕರಿ, ಜಯನಗರ, ಲಕ್ಕಸಂದ್ರ, ಪದ್ಮನಾಭನಗರ ಸೇರಿದಂತೆ ಹಲವು ಕಡೆ ಕಸ ರಸ್ತೆಯಲ್ಲೇ ಉಳಿದಿದೆ. [ಮತ್ತೆ ಕಸ ಗಲಾಟೆ, ಎಲ್ಲಿ ಹೋಯ್ತು ಸ್ವಚ್ಛಭಾರತ?]

ಬಿಬಿಎಂಪಿ ಬಿಂಗೀಪುರದಲ್ಲಿ ಸುಮಾರು 20 ಎಕರೆ ಜಾಗದಲ್ಲಿ ಕಸವನ್ನು ಸುರಿಯುತ್ತಿದೆ. ಸುಮಾರು ಎರಡು ವರ್ಷಗಳಿಂದ ಪ್ರತಿನಿತ್ಯ ಇಲ್ಲಿಗೆ 40 ಟನ್ ಕಸವನ್ನು ತಂದು ಸುರಿಯಾಗುತ್ತದೆ. ಬೊಮ್ಮನಹಳ್ಳಿ, ಬಿಟಿಎಂ, ಜಯನಗರ, ಚಿಕ್ಕಪೇಟೆ, ಪದ್ಮನಾಭನಗರ ಸೇರಿದಂತೆ ಬೆಂಗಳೂರು ದಕ್ಷಿಣ ಭಾಗದ ಕಸವನ್ನು ಇಲ್ಲಿಗೆ ಸಾಗಣೆ ಮಾಡಲಾಗುತ್ತದೆ. [ಇದೆಲ್ಲ ಇಲ್ಲದಿದ್ದರೆ ಬೆಂಗಳೂರನ್ನು ಬೆಂಗಳೂರು ಅಂತಾರಾ?]

2014ರಲ್ಲಿಯೂ ಇಲ್ಲಿನ ಗ್ರಾಮಸ್ಥರು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು. ಆಗ ಬಿಬಿಎಂಪಿ ಆಯುಕ್ತರು ಸ್ಥಳಕ್ಕೆ ತೆರಳಿ ಜನರ ಮನವೊಲಿಸಿದ್ದರು. ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸುತ್ತೇವೆ, ಆರೋಗ್ಯ ಶಿಬಿರ ನಡೆಸುತ್ತೇವೆ, ಗ್ರಾಮದ ರಸ್ತೆ ರಿಪೇರಿ ಮಾಡಿಸುತ್ತೇವೆ ಎಂದು ಭರವಸೆ ನೀಡಿದ್ದರು.

English summary
Anekal taluk Bingipura villagers stopped the garbage trucks and said, they will not allow to dump Bengaluru garbage neat their village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X