ಬೆಂಗಳೂರಿನಲ್ಲಿ ಗಗನಸಖಿ ಮೇಲುಡುಪು ಹರಿದು ದುರುಳ ಪರಾರಿ
ಬೆಂಗಳೂರಿನ ಎಚ್ ಆರ್ ಬಿಆರ್ ಲೇಔಟ್ ನಲ್ಲಿ ಈಚೆಗೆ ಗಗನಸಖಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಬೈಕ್ ನಲ್ಲಿ ಬಂದ ವ್ಯಕ್ತಿ ಆಕೆಯ ಟಾಪ್ ಹರಿದು, ಹಲ್ಲೆ ನಡೆಸಿದ್ದಾನೆ. ಆದರೆ ಈವರೆಗೆ ಯಾವುದೇ ಬಂಧನವಾಗಿಲ್ಲ
ಬೆಂಗಳೂರು, ಫೆಬ್ರವರಿ 19: ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲೇ ಗಗನ ಸಖಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಫೆಬ್ರವರಿ 12ರಂದು ಈ ಘಟನೆ ನಡೆದಿದ್ದು, ಅದಾದ ಎರಡು ದಿನಕ್ಕೆ ಅಂದರೆ ಫೆಬ್ರವರಿ 14ರಂದು ಪೊಲೀಸರ ಬಳಿ ದೂರು ದಾಖಲಿಸಲಾಗಿದೆ. ಅದಾಗಿ ಆರು ದಿನ ಕಳೆದರೂ ಪ್ರಕರಣದ ಸಂಬಂಧ ಯಾವುದೇ ಮಹತ್ವದ ಬೆಳವಣಿಗೆ ಆಗಿಲ್ಲ.
ಫೆಬ್ರವರಿ 12ರಂದು ರಾತ್ರಿ 10 ಗಂಟೆ ವೇಳೆಯಲ್ಲಿ ಎಚ್ ಆರ್ ಬಿಆರ್ ಲೇಔಟ್ ನಲ್ಲಿರುವ ತಮ್ಮ ಮನೆಗೆ ಸ್ನೇಹಿತೆ ಜತೆಗೂಡಿ ಆ ಗಗನಸಖಿ ತೆರಳುತ್ತಿದ್ದ ವೇಳೆ ಹೆಲ್ಮೆಟ್ ನಿಂದ ಮುಖ ಮುಚ್ಚಿಕೊಂಡಿದ್ದ ಬೈಕ್ ಸವಾರನೊಬ್ಬ ಆಕೆಯ ಟಾಪ್ ಹರಿದು, ಹಲ್ಲೆ ಕೂಡ ಮಾಡಿದ್ದಾನೆ. ಈ ದಾಳಿಯಲ್ಲಿ ಆಕೆಗೆ ಗಾಯಗಳಾಗಿವೆ.[ಅತ್ಯಾಚಾರ ಎಸಗುವವರ ವಿರುದ್ಧ ಗೂಂಡಾ ಕಾಯ್ದೆ: ಜಿ. ಪರಮೇಶ್ವರ]

ಯಾವಾಗ ಇಬ್ಬರು ಮಹಿಳೆಯರು ಕಿರುಚಾಡಲು ಆರಂಭಿಸಿದರೋ ತಕ್ಷಣವೇ ಅಲ್ಲಿಂದ ಬೈಕ್ ಸವಾರ ಹೊರಟುಹೋಗಿದ್ದಾನೆ. ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ದೂರು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಆದರೆ ಈ ವರೆಗೆ ಯಾರನ್ನೂ ಪೊಲೀಸರು ಬಂಧಿಸಿಲ್ಲ ಎಂದು ತಿಳಿದುಬಂದಿದೆ.












Click it and Unblock the Notifications