ಬಿಎಚ್ಇಎಲ್ ಉದ್ಯೋಗಿ ಅನುಷಾ ಹತ್ಯೆ ಮಾಡಿದ್ದು ಭಾವ!
ಬೆಂಗಳೂರು, ಫೆಬ್ರವರಿ 21 : ಬಿಎಚ್ಇಎಲ್ ಉದ್ಯೋಗಿ ಎಸ್.ಅನುಷಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಭಾವನಿಂದಲೇ ಅನುಷಾ ಹತ್ಯೆ ನಡೆದಿದೆ.
ವಿವೇಕ್ ಅರ್ಗವಾಲ್ ಮತ್ತು ಆತನ ಸ್ನೇಹಿತ ಥಾಯ್ ಹೇಲ್ ಬಂಧಿತ ಆರೋಪಿಗಳು. ಫೆ.15ರಂದು ಕೆಂಗೇರಿಯ ಸನ್ ಸಿಟಿ ಬಳಿಯ ನಿವಾಸದಲ್ಲಿ 32 ವರ್ಷದ ಅನುಷಾರನ್ನು ಹತ್ಯೆ ಮಾಡಲಾಗಿತ್ತು.
ಫೆ.15ರಂದು ಎಸ್.ಅನುಷಾ ಎಂದಿನತೆ ಕೆಲಸಕ್ಕೆ ಹೋಗಿದ್ದರು. ಆ ಬಳಿಕ ಅವರು ಯಾರ ಫೋನ್ ಕರೆಯನ್ನೂ ಸ್ವೀಕರಿಸಿರಲಿಲ್ಲ. ಹಲವಾರು ಬಾರಿ ಕರೆ ಮಾಡಿದ್ದ ಫೋಷರು, ಹೆಚ್ಚು ಕೆಲಸ ಇರಬಹುದು ಎಂದು ಸುಮ್ಮನಾಗಿದ್ದರು.
ಆದರೆ, ಸಂಜೆಯಾದರೂ ಕರೆ ಸ್ವೀಕರಿಸಿದ ಕಾರಣ ಅನುಷಾ ಪತಿ ಸನತ್ಗೆ ವಿಚಾರ ತಿಳಿಸಿದ್ದರು. ಸನತ್ ಮನೆಗೆ ಬಂದು ನೋಡಿದಾಗ ಅನುಷಾ ಶವ ಪತ್ತೆಯಾಗಿತ್ತು. ತಕ್ಷಣ ಅವರು ಕೆಂಗೇರಿ ಪೊಲೀಸರಿಗೆ ವಿಷಯ ತಿಳಿಸಿದ್ದರು.

ಆಸ್ತಿ ವಿಚಾರಕ್ಕೆ ಹತ್ಯೆ : ಅನುಷಾ ಮತ್ತು ಸನತ್ ಪರಸ್ಪರ ಪ್ರೀತಿಸುತ್ತಿದ್ದರು. ಒಂದು ವರ್ಷದ ಹಿಂದೆ ಇಬ್ಬರು ವಿವಾಹವಾಗಿದ್ದು ಸನ್ ಸಿಟಿ ಬಳಿ ವಾಸವಾಗಿದ್ದರು. ಬಿಡದಿ ಬಳಿ ಅನುಶಾ ಅವರಿಗೆ ಸೇರಿದ ಆಸ್ತಿಯೊಂದಿತ್ತು. ಈ ವಿಚಾರಕ್ಕಾಗಿ ಅನುಶಾ ಅಕ್ಕ ಮತ್ತು ಭಾವನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ್ದ ವಿವೇಕ್ ಅಪಾರ ನಷ್ಟ ಅನುಭವಿಸಿದ್ದರು. ಆದ್ದರಿಂದ, ಬಿಡದಿ ಬಳಿ ಇರುವ ಆಸ್ತಿ ನೀಡುವಂತೆ ಅನುಷಾರನ್ನು ಒತ್ತಾಯಿಸುತ್ತಿದ್ದರು. ಆದರೆ, ಅವರು ನಿರಾಕರಿಸಿದ್ದರು.
ಫೆ.15ರಂದು ವಿವೇಕ್ ಆತನ ಸ್ನೇಹಿತ ಥಾಯ್ ಜೊತೆಗೆ ಅನುಷಾ ಅವರ ಮನೆಗೆ ಬಂದು ಆಸ್ತಿ ವಿಚಾರಕ್ಕೆ ಮತ್ತೆ ಗಲಾಟೆ ಮಾಡಿದ್ದರು. ಆಸ್ತಿ ನೀಡಲು ಒಪ್ಪದಿದ್ದಾಗ ಅನುಷಾರನ್ನು ಕೊಲೆ ಮಾಡಿ ಪರಾರಿಯಾಗಿದ್ದರು.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications