• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಮುಖಂಡ ಅನಂತರಾಮು ಪತ್ನಿ-ಪ್ರೇಯಸಿ ಆಡಿಯೋ ವೈರಲ್

|
Google Oneindia Kannada News

ಬೆಂಗಳೂರು, ಮೇ. 18: ಬ್ಯಾಡರಹಳ್ಳಿಯ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣಕ್ಕೆ ಅಡಿಯೋ ರೋಚಕ ಟ್ವಿಸ್ಟ್ ನೀಡಿದೆ. ಅನಂತರಾಜು ಪತ್ನಿ ಸುಮಾ ಹಾಗೂ ಆತನ ಪ್ರೇಯಸಿ ಎನ್ನಲಾದ ರೇಖಾ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆ ಅಡಿಯೋ ಹೊರ ಬಿದ್ದಿದೆ. ಈ ಅಡಿಯೋ ಅಸಲಿಯೋ ನಖಲಿಯೋ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಡಬೇಕಿದೆ. ಮೇಲ್ನೋಟಕ್ಕೆ ಅನಂತರಾಜು ವಿಚಾರವಾಗಿ ಆತ್ಮಹತ್ಯೆಗೂ ಇಪ್ಪತ್ತು ದಿನ ಮುನ್ನ ಸುಮಾ ಮತ್ತು ರೇಖಾ ಎಂಬುವರ ನಡುವೆ ನಡೆದಿದೆ ಎನ್ನಲಾದ ಅಡಿಯೋ ಸಂಭಾಷಣೆ ಪೂರ್ಣ ವಿವರ ಇಲ್ಲಿದೆ.

ಸುಮಾ: ನೋಡು, ಈ ಆಟದಲ್ಲಿ ಇವನು ಇಪ್ಪತ್ತು ದಿನ ಬದುಕುತ್ತಾನಾ ನೋಡು?

ರೇಖಾ: ಸುಮಾ,...

ಸುಮಾ: ನಾನು ಕೊಡೋ ಟಾರ್ಚರ್ ಗೆ ಇನ್ನು ಇಪ್ಪತ್ತು ದಿನ ಬದುಕುತ್ತಾನಾ? ಇಷ್ಟಕ್ಕೆ ಅಲ್ಲಾ..

ರೇಖಾ: ಸಾರಿ ಸುಮಾ,

ಸುಮಾ: ನಿನ್ನ ಅನಂತು ಸತ್ತೋಗ್ತಾನೆ ಅಂತ ಅಳಬೇಡ. ಸತ್ತೋದ್ರೆ ನಿನ್ನೂ ಕರೆಯುತ್ತೇನೆ. ಯಾಕೆ ಹೇಳು ನಾನು ಬರಲ್ಲ, ನಿನ್ನೇ ಕರೀತೀನಿ.. ಹೆಂಡತಿ ಸ್ಥಾನದಲ್ಲಿದ್ದೀಯಲ್ಲ. ನಿನ್ನೇ ಕರೀತೀನಿ..

ರೇಖಾ : ಬೇಡಾ ಸುಮಾ... (ಅಳುತ್ತಾ) ಒಬ್ಬ ಮನುಷ್ಯನ ಜೀವ ತೆಗೆಯುವ ಅಧಿಕಾರ ನಿನಗೆ ಯಾರು ಕೊಟ್ಟಿದ್ದಾರೆ ?

ಸುಮಾ ? ಏನು..?

ರೇಖಾ: ಒಬ್ಬ ಮನುಷ್ಯನ ಜೀವ ತೆಗೆಯೋ ಅಧಿಕಾರ ನಿನಗೆ ಯಾರು ಕೊಟ್ಟಿದ್ದಾರೆ..?

ಸುಮಾ: ಡೈರೆಕ್ಟ್ ಆಗಿ ಸಾಯಿಸಲ್ಲ ಕಣೇ.. ಅವನೇ ಸಾಯಬೇಕು.

ರೇಖಾ: ದೇವರು ನಿಮ್ಮನ್ನು ಕ್ಷಮಿಸುತ್ತಾನೆ ಅಂದುಕೊಂಡಿದ್ದೀರಾ ?

ಸುಮಾ: ಏಯ್.. ದೇವರು ನನ್ನ ಕಡೆ ಇದ್ದಾನೆ... ದೇವರು.. ಯಾಕೇಳು ? ಅದಕ್ಕೆ ಈ ಬಂಡವಾಳ ಬಯಲಾಗಿದ್ದು. ಇಲ್ಲಾ ಅಂದ್ರೆ ನನ್ನ ವಯಸ್ಸಾಗೋ ವರೆಗೂ ನನಗೆ ಹಿಂಸೆ ಕೊಟ್ಟುಕೊಂಡು ಟಾರ್ಚರ್ ಕೊಟ್ಟು ನನ್ನ ಜೀವನದಲ್ಲಿ ಆಟ ಆಡುತ್ತಿದ್ದ. ಗೊತ್ತಾಯ್ತಾ ?

Big Twist in BJP Leader Ananth Raju Suicide Case : Audio conversation viral

ರೇಖಾ: ಆದ್ರೂ ನೀನು ಅನಂತುಗೆ ಕೊಡ್ತಿರೋ ಟಾರ್ಚರ್ ನಿಂದ ದೇವರು ಕ್ಷಮಿಸಲ್ಲ. ನಿಮ್ಮಿಂದ ಕೊರಗಿ ಸತ್ತರು ಅಂದ್ರೆ ನಿಮಗೆ ಕ್ಷಮೆ ಇರಲ್ಲ ಸುಮಾ.

ಸುಮಾ: ಅನಂತ್... ಅನಂತ್.. ನನ್ನಿಂದ ಕೊರಗಿ ಸಾಯ್ತೀಯಾ.. ? ಮಾತಾಡು ಅನಂತ್. ಏಯ್ ಮಾತಾಡೋ.. ಯಾಕೋ ಬಾಯಿಗೆ ಬೀಗ ಹಾಕಿಕೊಂಡಿದ್ದೀಯಾ ? ಏನ್ ಮಾತಾಡ್ತಿಯೋ..? ಬೊಗಳ್ತಾಯಿದ್ದೀನಲ್ಲಾ. ಮಾತಾಡು.

ರೇಖಾ: ಸುಮಾ ನಾನು ಅವರಿಗೆ ಹೇಳಿದ್ದೆ. ಅವರಿಗೆ ಹೊಡೆಯಬೇಡಿ..

ಸುಮಾ: ನಿನ್ನಂಗೆ ಇರ್ತಾರೇನೇ ಎಲ್ಲಾರು ಬೋ. ಮಗನೇ. ಹೆಂಡ್ತಿ ಬೇಡ. ಮಕ್ಕಳು ಬೇಡ.. ಸೂ.. ಇದ್ದರೆ ಸಾಕು ಅಂತ ಇರ್ತಾರೇನೋ ? ನನಗೆ ಕಾಲ್ ಟಚ್ ಮಾಡ್ತೀಯಾ.. ನನಗೆ ? ಇಷ್ಟೊಂದು ಧೈರ್ಯ ಬಂದು ಬಿಡ್ತಾ ನಿನಗೆ.. ಅವಳ ಮಾತು ಕೇಳಿ ತಡ್ಕೋಳ್ಳೋಕೆ ಆಗ್ತಿಲ್ಲವಾ ?

ರೇಖಾ: ಸುಮಾ, ನಾನೇ ಅವರನ್ನು ಇಷ್ಟ ಪಟ್ಟಿದ್ದು, ಬ್ಲಾಕ್ ಮೇಲ್ ಮಾಡಿದ್ದು. ಅವರನ್ನು ಹೊಡೀ ಬೇಡಿ ಸುಮಾ. ಒಂದು ಚೂರು ಅವರಿಗೆ ಇಷ್ಟ ಇರಲಿಲ್ಲ.

ಸುಮಾ: ಮಾತಾಡಪ್ಪಾ.. ಯಾಕೆ ಕಟ್ ಮಾಡಬೇಕು. ನಿನ್ನ ಹೆಂಡತಿ ಹತ್ತಿರ ಮಾತಾಡು. ನೀನು ಅಳೋದಿಕ್ಕೆ ತುಂಬಾ ನೋವಾಗ್ತಿದೆ ರೇಖಾ ಅವನಿಗೆ.. ಅಳಪ್ಪಾ..

ರೇಖಾ: ನಿನ್ನ ಕಾಲು ಹಿಡಿದುಕೋತೀನಿ.. ಅವರನ್ನು ಬಿಟ್ಟುಬಿಡಿ ಸುಮಾ..

ಸುಮಾ: ನಾಟಕ.. ಅವನು ಬದುಕಿರೋದು ಅಲ್ಲ. ಹಾರ್ಟ್ ಅಟ್ಯಾಕ್ ಆಗಿ ಸತ್ತ ಅಂತ ಫೇಸ್ ಬುಕ್ ನಲ್ಲಿ ಬರುತ್ತೆ. ನಾನು ಕೊಡೋ ಟಾರ್ಚರ್.. ಅವನೇ ಸಾಯಬೇಕು.. ಸಾಯಿಸಲ್ಲ.

ರೇಖಾ.. ಸುಮಾ.. ಸುಮಾ..

ಸುಮಾ: ಹೇಳಮ್ಮಾ,, ನಿನ್ನ ಪಶ್ಚತಾಪ ಕೇಳಿ ಕಣ್ಣೀರು ಹಾಕ್ತಿದ್ದಾನೆ. ..

ಹೀಗೆ ಸುಮಾರು ಐದು ನಿಮಿಷಗಳ ಕಾಲ ಸುಮಾ ಹಾಗೂ ರೇಖಾ ಎನ್ನಲಾದ ಮಹಿಳೆಯರ ನಡುವೆ ನಡೆದಿರುವ ಸಂಭಾಷಣೆ ಅಡಿಯೋ ಇದೀಗ ವೈರಲ್ ಅಗಿದೆ. ಇದರ ಸತ್ಯಾಸತ್ಯತೆ, ಅಸಲಿತನದ ಬಗ್ಗೆ ಪೊಲೀಸರು ಸ್ಪಷ್ಟಪಡಿಸಬೇಕಿದೆ.

   ರಷ್ಯಾ ಜೊತೆಗಿನ ಭಾರತದ ಬಂಧ ಬಿಡಿಸಲು ಅಮೆರಿಕದಿಂದ ಭಾರತಕ್ಕೆ ಬಿಗ್ ಆಫರ್ | Oneindia Kannada
   English summary
   BJP Leader Ananth Raju Suicide Case: Mobile Conversation between Anataraju wife Suma and anther women Rekha here. Know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X