Get Updates
Get notified of breaking news, exclusive insights, and must-see stories!

ಎರಡನೇ ಏರ್‌ಪೋರ್ಟ್‌ಗಾಗಿ ಮಾಗಡಿ-ಶಿರಾ ನಡುವೆ ಬಿಗ್‌ ಫೈಟ್, ಆ ಜಾಗವೇ ಫೈನಲ್‌ ಆಗುವ ಸಾಧ್ಯತೆ

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಯಾವ ಭಾಗದಲ್ಲಿ ನಿರ್ಮಾಣವಾಗಲಿದೆ ಎನ್ನುವುದು ಇನ್ನೂ ಯಕ್ಷ ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರವೇನೋ ಅಧಿಕೃತವಾಗಿ ಎರಡು ಪ್ರದೇಶಗಳನ್ನು ಪ್ರಸ್ತಾಪಿಸಿದೆ. ಆದರೆ ಈ ಸಂಖ್ಯೆ ನಾಲ್ಕಕ್ಕೆ ಏರಿದೆ. ಕನಕಪುರ ರಸ್ತೆ ಅಥವಾ ಕುಣಿಗಲ್‌ ಭಾಗದಲ್ಲಿ ಈ ನೂತನ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಜನ ನಿರೀಕ್ಷಿಸಿದ್ದರು. ಆದರೆ, ಇದೀಗ ಇನ್ನೆರಡು ಜಾಗಗಳ ನಡುವೆ ದೊಡ್ಡ ಫೈಟ್‌ ಶುರುವಾಗಿದೆ. ಮೊದಲಿಗೆ ಬೆಂಗಳೂರಿಗೆ ಸಮೀಪದಲ್ಲೇ ಹೊಸ ಏರ್‌ಪೋರ್ಟ್‌ ಬರುವ ಲಕ್ಷಣಗಳು ಕಂಡುಬಂದಿತ್ತು. ಇದೀಗ ತುಮಕೂರು ಅಥವಾ ರಾಮನಗರ ಜಿಲ್ಲೆಗೆ ಶಿಫ್ಟ್‌ ಆಗುವ ಸಾಧ್ಯತೆ ಇದೆ.

ಹೌದು ರಾಜ್ಯ ಸರ್ಕಾರವು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಹಲವು ಪರಿಶೀಲನೆ ನಂತರ ಕುಣಿಗಲ್‌ ಬಳಿ ಒಂದು ಜಾಗ ಹಾಗೂ ಕನಕಪುರ ರಸ್ತೆಯಲ್ಲಿ ಎರಡು ಜಾಗಗಳನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಕೂಡ ತಂಡ ಕಳುಹಿಸಿ, ಈ ಜಾಗಗಳ ವೀಕ್ಷಣೆ ಮಾಡಿ ಹೋಗಿತ್ತು. ಇನ್ನೇನು ಈ ಎರಡಲ್ಲೇ ಒಂದು ಜಾಗ ಫಿಕ್ಸ್‌ ಎನ್ನುವಷ್ಟರಲ್ಲಿ ರಾಜಕೀಯ ನಾಯಕರಿಂದ ಭಾರಿ ವಿರೋಧ ಕಂಡುಬಂತು.

Big Fight Between Magadi and Sira For Bengaluru Second Airport Location

ತುಮಕೂರು, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿಗಳು ಈ ಎರಡನೇ ಏರ್‌ಪೋರ್ಟ್‌ ತುಮಕೂರು ಜಿಲ್ಲೆಯ ಶಿರಾ ಭಾಗದಲ್ಲಿ ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ಇದಕ್ಕೆ ಕೇಂದ್ರ ಬಿಜೆಪಿ ಸಚಿವರು ಕೂಡ ಕೈಜೋಡಿಸಿದ್ದಾರೆ. ಹಾಗಾಗಿ ಶಿರಾದಲ್ಲಿ ಸಾಧ್ಯವಿಲ್ಲದಿದ್ದರೂ ತುಮಕೂರು ಜಿಲ್ಲೆಯ ಯಾವುದಾದರೂ ಜಾಗದಲ್ಲಿ ಏರ್ಪೋರ್ಟ್‌ ನಿರ್ಮಿಸಿ ಎಂದು ಒತ್ತಡ ಹೇರಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಒಂದು ದೊಡ್ಡ ತಲೆನೋವಾಗಿದೆ.

ಇನ್ನು ರಾಜ್ಯ ಸರ್ಕಾರ ಕನಕಪುರ ರಸ್ತೆಯಲ್ಲೇ ಎರಡು ಜಾಗಗಳನ್ನು ಗುರುತಿಸಿರುವುದು ಕೂಡ ಕೆಲ ರಾಜಕಾರಣಿಗಳ ವಿರೋಧಕ್ಕೆ ಕಾರಣವಾಗಿದೆ. ಕನಕಪುರ ಭಾಗದ ಅಭಿವೃದ್ಧಿಗಾಗಿ ಡಿಕೆ ಶಿವಕುಮಾರ್‌ ಅವರು ಹೊಸ ಏರ್‌ಪೋರ್ಟ್‌ ನಿರ್ಮಾಣಕ್ಕೆ ವಿಶೇಷ ಕಾಳಜಿ ವಹಿಸಿದ್ದಾರೆ ಎಂಬ ಆರೋಪವೂ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಮೊದಲಿಗೆ ಕನಕಪುರ ರಸ್ತೆ ವರ್ಸಸ್‌ ಶಿರಾ ಎಂಬ ಫೈಟ್‌ ಶುರುವಾಗಿತ್ತು.

Big Fight Between Magadi and Sira For Bengaluru Second Airport Location

ಆದರೆ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವಂತೆ ಎರಡನೇ ಏರ್‌ಪೋರ್ಟ್‌ಗೆ ಸದ್ದಿಲ್ಲದೆ ಮತ್ತೊಂದು ಜಾಗ ಫಿಕ್ಸ್ ಮಾಡಲಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನಲ್ಲಿ ಈ ಏರ್‌ಪೋರ್ಟ್‌ಗೆ ಸಾವಿರಾರು ಎಕರೆ ಜಾಗ ಗುರುತಿಸುವ ಕೆಲಸ ನಡೆದಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಕನಕಪುರ ರಸ್ತೆ ಅಥವಾ ಕುಣಿಗಲ್‌ನ ಸಂಭಾವ್ಯ ಜಾಗಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡದಿದ್ದರೆ, ಆಯ್ಕೆಯಾಗಿ ಮಾಗಡಿಯ ಜಾಗವನ್ನು ತೋರಿಸಲು ಸಜ್ಜಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Take a Poll

ಮತ್ತೊಂದೆಡೆ ಬಿಜೆಪಿ ಕೇಂದ್ರ ಸಚಿವರೂ ಆಗಿರುವ ವಿ.ಸೋಮಣ್ಣ ಅವರು ತುಮಕೂರಿನಲ್ಲೇ ಏರ್‌ಪೋರ್ಟ್‌ ನಿರ್ಮಾಣ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುವುದಾಗಿ ರಾಜ್ಯ ಸರ್ಕಾರಕ್ಕೆ ಸವಾಲ್‌ ಹಾಕಿದ್ದಾರೆ. ಈ ಚದುರಂಗದಾಟದಲ್ಲಿ ಅಂತಿಮವಾಗಿ ಯಾವ ಜಾಗದಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣವಾಗುತ್ತೆ ಎನ್ನುವ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+