ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ಶೀಘ್ರ ಆರಂಭ

|
Google Oneindia Kannada News

Recommended Video

ನಮ್ಮ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ಶೀಘ್ರ ಆರಂಭ | Oneindia Kannada

ಬೆಂಗಳೂರು, ಜನವರಿ 20: ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಸುರಂಗ ಮಾರ್ಗಕ್ಕೆ ಸಾಲ ನೀಡಿರುವ ಯುರೋಪಿಯನ್ ಇನ್ವೆಸ್ಟ ಮೆಂಟ್ ಬ್ಯಾಂಕ್ ನ ಪ್ರತಿನಿಧಿಗಳು ಬಿಎಂಆರ್ ಸಿಎಲ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರಿಂದ ಈ ಮಾರ್ಗದ ಟೆಂಡರ್ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

21.42 ಕಿ.ಮೀ ಉದ್ದದ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ13.91 ಕಿ,ಮೀ ಉದ್ದದ ಮಾರ್ಗವು ಸುರಂಗ ಮಾರ್ಗವಾಗಿರಲಿದೆ. ಈ ಮಾರ್ಗಕ್ಕೆ ಕಳೆದ ಜುಲೈನಲ್ಲೇ 3,905,55ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿತ್ತು. ಈ ಒಟ್ಟು ಮಾರ್ಗಕ್ಕೆ ಯುರೋಪಿಯನ್ ಇನ್ವೆಸ್ಟ ಮೆಂಟ್ ಬ್ಯಾಂಕ್ 3,770 ಕೋಟಿ ರೂ. ಸಾಲ ನೀಡಿದೆ.

ಮೆಟ್ರೋ-2 ಕಾಮಗಾರಿ: ನಿಗದಿತ ವೇಳೆಗೆ ಪೂರ್ಣ ನಿರೀಕ್ಷೆಮೆಟ್ರೋ-2 ಕಾಮಗಾರಿ: ನಿಗದಿತ ವೇಳೆಗೆ ಪೂರ್ಣ ನಿರೀಕ್ಷೆ

ಟೆಂಡರ್ ಅನ್ನು ಸೂಕ್ತ ಗುತ್ತಿಗೆದಾರರಿಗೆ ನೀಡುವ ಬಗ್ಗೆ ಈ ಸಂಸ್ಥೆಗೆ ಮಾಹಿತಿ ನೀಡಬೇಕಿದೆ. ಇತ್ತೀಚೆಗೆ ಬಿಎಂಆರ್ಸಿಎಲ್ ಗೆ ಭೇಟಿ ನೀಡಿದ ಬ್ಯಾಂಕ್ ಪ್ರತಿನಿಧಿಗಳು ಮಾರ್ಗದ ಕಾಮಗಾರಿಗೆ ನಡೆಸಿರುವ ಸಿದ್ಧತೆ ಹಾಗೂ ಟೆಂಡರ್ ಪ್ರಕ್ರಿಯೆಯನ್ನು ಪರಿಶೀಲಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಗುತ್ತಿಗೆದಾರರನ್ನು ಅಂತಿಮಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ.

Bidding for Namma Metro tunnel work Soon

ಈ ಮಾರ್ಗದ ಕಾಮಗಾರಿಗೆ ಚಾಲನೆ ದೊರೆತರೆ ಎರಡನೇ ಹಂತದಲ್ಲಿ ಎಲ್ಲ ಮಾರ್ಗಗಳ ಕಾಮಗಾರಿ ಆರಂಭವಾದಂತಾಗುತ್ತದೆ. ಒಂದನೇ ಹಂತಕ್ಕೆ ಹೋಲಿಸಿದರೆ ಎರಡನೇ ಹಂತದಲ್ಲಿ ಸುರಂಗ ಮಾರ್ಗದ ಉದ್ದ ಹೆಚ್ಚಿದೆ. ಒಂದನೇ ಹಂತದಲ್ಲಿ ಕಾಮಗಾರಿ ನಡೆಸುವ ವೇಳೆ ಸುರಂಗ ಕೊರೆಯುವ ಯಂತ್ರದ ಕಟರ್ ಹೆಡ್ ತುಂಡಾಗಿದ್ದರಿಂದ ಹೊರ ತೆಗೆಯಲು ಹರಸಾಹಸ ಪಡಬೇಕಾಯಿತು. ಈ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸುವುದರ ಜತೆಗೆ ಈ ಬಾರಿ ಸುಮಾರು12 ಯಂತ್ರಗಳನ್ನು ಬಳಸಾಗುತ್ತಿದೆ.

English summary
Most awaited tunnel construction work second phase of metro project will resume soon. European investment Bank officials have been visited Gottigere-Nagavara route where 13.91 km long tunnel will be constructed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X