ಸೆ.10 ರಂದು ಅಡಿಗರ ಜನ್ಮಶತಮಾನೋತ್ಸವಕ್ಕಾಗಿ 'ಭೂಮಿಗೀತ'
ಬೆಂಗಳೂರು, ಸೆಪ್ಟೆಂಬರ್ 8: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ 'ನವ್ಯ ಸಾಹಿತ್ಯ ಪ್ರಕಾರ'ವನ್ನು ಪರಿಚಯಿಸಿದ ಕವಿ ಗೋಪಾಲಕೃಷ್ಣ ಅಡಿಗ. 'ಯಾವಮೋಹನ ಮುರಳಿ ಕರೆಯಿತೋ' ಹಾಡಿನಿಂದ ಸಹಸ್ರಾರು ಕನ್ನಡಿಗರ ಮನೆಮಾತಾದ ಗೋಪಾಲಕೃಷ್ಣ ಅಡಿಗ (18-02-1918: 1992)ರ ಜನ್ಮಶತಮಾನೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದನ್ನು ಅವಿರತ ಪ್ರತಿಷ್ಠಾನ ಆಯೋಜಿಸಿದೆ.
"ಭಾವತರಂಗ: ಬತ್ತಲಾರದ ಭೂಮಿಗೀತ" ಎಂಬ ಹೆಸರಿನ ಈ ಕಾರ್ಯಕ್ರಮ ಸೆಪ್ಟೆಂಬರ್ 10, ಭಾನುವಾರದಂದು, ಸಂಜೆ 5 ಕ್ಕೆ ವಿಜಯನಗರ ಟೊಲ್ ಗೇಟ್ ಬಳಿಯ ಕಾಸಿಯಾ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕಾವ್ಯ ವಾಚನ ಮತ್ತು ಕಾವ್ಯ ಗಾಯನ ಎಂಬ ಎರಡು ವಿಭಾಗಗಳಿವೆ. ಕನ್ನಡ ಧಾರಾವಾಹಿ ಮತ್ತು ಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಮ್, ಬಿ.ಸುರೇಶ್, ಕಾವ್ಯಶ್ರೀ ಎಚ್. ಕಾವ್ಯ ವಾಚಿಸಲಿದ್ದು, ಗಾಯಕರಾದ ವಿನಯ್ ನಾಡಿಗ್, ಶ್ರೀಕೃಪಾ ಎಂ ಎಸ್, ಗೋವಿಂದ್ ಕರ್ನೂಲ್ ಸೇರಿದಂತೆ ಹಲವರು ಅಡಿಗರ ಪದ್ಯಗಳನ್ನು ಹಾಡಲಿದ್ದಾರೆ.
ಸಹೃದಯಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಉಡುಪಿ ಜಿಲ್ಲೆ ಮೊಗೆರಿಯ ಗೋಪಾಲಕೃಷ್ಣ ಅಡಿಗರು, ಭಾವಗೀತ, ಭೂಮಿಗೀತ, ಮಣ್ಣಿನ ವಾಸನೆ, ವರ್ಧಮಾನ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದರು.












Click it and Unblock the Notifications