ದಿನೇಶ್ ಅಮಿನ್‌ಮಟ್ಟು ವಿರುದ್ಧ ಆರೋಪ ಮಾಡಿದ್ದ ಭಾಸ್ಕರ್ ಪ್ರಸಾದ್ ಬಂಧನ

ಬೆಂಗಳೂರು, ಜೂನ್ 06: ಮಾಜಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅವರ ವಿರುದ್ಧ ಕೊಲೆ ಷಡ್ಯಂತ್ರದ ಆರೋಪ ಮಾಡಿದ್ದ ಬಿ.ಆರ್.ಭಾಸ್ಕರಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾಗಿರುವ ಬಿ.ಆರ್.ಭಾಸ್ಕರಪ್ರಸಾದ್ ಅವರು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ 'ದಿನೇಶ್ ಅಮಿನ್‌ ಮಟ್ಟು ಅವರು ಅಂಕಣಕಾರ ರೋಹಿತ್ ಚಕ್ರತೀರ್ಥ ಅವರನ್ನು ಕೊಲ್ಲುವಂತೆ ಸುಫಾರಿ ನೀಡಿದ್ದರು' ಎಂದು ಪೋಸ್ಟ್‌ ಹಾಕಿದ್ದರು. ಇದು ಭಾರಿ ವಿವಾದ ಸೃಷ್ಠಿಸಿತ್ತು.

ತಮ್ಮ ವಿರುದ್ಧ ಆರೋಪ ಮಾಡಿದ್ದ ಭಾಸ್ಕರ್ ಪ್ರಸಾದ್ ವಿರುದ್ಧ ದಿನೇಶ್ ಅವರು ದೂರು ದಾಖಲಿಸಿದ್ದರು. ಹಾಗಾಗಿ ಇಂದು ಭಾಸ್ಕರ್ ಪ್ರಸಾದ್ ಅವರನ್ನು ಇಂದು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Bhaskar Prasad arrested who accused ex CM media adviser Dinesh Amin Mattu

ನಿನ್ನೆ ರಾತ್ರಿಯೇ ಪೊಲೀಸರು ನೆಲಮಂಗಲದಲ್ಲಿನ ಭಾಸ್ಕರ್ ಪ್ರಸಾದ್ ಅವರ ಮನೆಗೆ ತೆರಳಿ ಬಂಧಿಸಲು ಪ್ರಯತ್ನಿಸಿದರು ಆದರೆ ಭಾಸ್ಕರ್ ಪ್ರಸಾದ್ ಮನೆಯಿಂದ ಹೊರ ಬರಲಿಲ್ಲ, ಕೊನೆಗೆ ಇಂದು ಬೆಳಿಗ್ಗೆ ಅವರನ್ನು ಬಂಧಿಸಲಾಯಿತು.

ತಮ್ಮ ಬಂಧನದ ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಭಾಸ್ಕರ್ ಪ್ರಸಾದ್ ಅವರು, 'ಡಿಜೆ ಹಳ್ಳಿ ಪೊಲೀಸರಿಂದ ನಾನು ಬಂಧನಕ್ಕೊಳಗಾಗಿದ್ದೇನೆ, ಆದರೆ ನ್ಯಾಯವನ್ನು ಬಂಧಿಸಲಾಗದು' ಎಂದು ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+