ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎನ್‌ಡಿಪಿಎಸ್ ಕಾಯ್ದೆಯಡಿ 'ಭಾಂಗ್’ ಗೆ ನಿಷೇಧವಿಲ್ಲ: ಹೈಕೋರ್ಟ್

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಅ 28: ಮಾದಕ ದ್ರವ್ಯ ಮತ್ತು ಉದ್ದೀಪನ ವಸ್ತುಗಳ ಸೇವನೆ ತಡೆ (ಎನ್‌ಡಿಪಿಎಸ್) ಕಾಯ್ದೆ ಅಡಿಯಲ್ಲಿ 'ಭಾಂಗ್' ಅನ್ನು ನಿಷೇಧಿವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಅಲ್ಲದೆ, ಅದನ್ನು ಮಾದಕ ದ್ರವ್ಯ ಮತ್ತು ಅಥವಾ ಪಾನೀಯವೆಂದು ಘೋಷಿಸಲಾಗಿಲ್ಲ ಎಂದು ಹೇಳಿರುವ ನ್ಯಾಯಾಲಯ, 29 ಕಿಲೋಗ್ರಾಂಗಳಷ್ಟು ಭಾಂಗ್ (Bhang) ಮಿಶ್ರಣವನ್ನು ಹೊಂದಿದ್ದಕ್ಕಾಗಿ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಗೆ ಜಾಮೀನು ನೀಡಿದೆ.

ಬೇಗೂರು ಪೊಲೀಸರು ಜೂ.1ರಂದು ಬಿಹಾರ ಮೂಲದ ರೋಷನ್ ಕುಮಾರ್ ಮಿಶ್ರಾ ಎಂಬಾತನನ್ನು ಬಂಧಿಸಿ ಆತನಿಂದ 400 ಗ್ರಾಂ ಗಾಂಜಾ ಜೊತೆಗೆ ಬ್ರಾಂಡ್ 'ಭಾಂಗ್ ' ಅನ್ನು ವಶಪಡಿಸಿಕೊಂಡಿದ್ದರು.

Bhang is not prohibited under NDPS Act: Karnataka HC

ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಅಧೀನ ನ್ಯಾಯಾಲಯವು ತಿರಸ್ಕರಿಸಿತು, ನಂತರ ಅವರು ಹೈಕೋರ್ಟ್ ಮೊರೆ ಹೋಗಿದ್ದರು ಮತ್ತು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಆತನಿಗೆ ಜಾಮೀನು ಮಂಜೂರು ಮಾಡಿದೆ.

ವೈಜ್ಞಾನಿಕ ಪುರಾವೆ ಇಲ್ಲ: ಭಾಂಗ್ ಅನ್ನು ಚರಸ್ ಅಥವಾ ಗಾಂಜಾ ಅಥವಾ ಗಾಂಜಾ ಎಲೆಗಳಿಂದ ತಯಾರಿಸಲಾಗುತ್ತದೆ ಎಂದು ತೋರಿಸಲು ಈ ನ್ಯಾಯಾಲಯದ ಮುಂದೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಮಗಳ ಕಾಯಿಲೆ ಚಿಕಿತ್ಸೆಗಾಗಿ ಗಾಂಜಾ ಬಳಕೆ ಕಾನೂನುಬದ್ದಗೊಳಿಸಲು ಹೋರಾಡುತ್ತಿರುವ ತಾಯಿಮಗಳ ಕಾಯಿಲೆ ಚಿಕಿತ್ಸೆಗಾಗಿ ಗಾಂಜಾ ಬಳಕೆ ಕಾನೂನುಬದ್ದಗೊಳಿಸಲು ಹೋರಾಡುತ್ತಿರುವ ತಾಯಿ

ಅಲ್ಲದೆ, ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಗಾಂಜಾದ ಎಲೆಗಳು ಮತ್ತು ಬೀಜಗಳನ್ನು ಗಾಂಜಾ ವ್ಯಾಖ್ಯಾನದಿಂದ ಹೊರಗಿಡಲಾಗಿದೆ ಮತ್ತು ಎನ್‌ಡಿಪಿಎಸ್ ಕಾಯಿದೆಯಲ್ಲಿ ಎಲ್ಲಿಯೂ ಭಾಂಗ್ ಅನ್ನು ನಿಷೇಧಿತ ಪಾನೀಯ ಅಥವಾ ನಿಷೇಧಿತ ಔಷಧ ಎಂದು ಉಲ್ಲೇಖಿಸಲಾಗಿಲ್ಲ" ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

Bhang is not prohibited under NDPS Act: Karnataka HC

ಸುಪ್ರೀಂಕೋರ್ಟ್‌ನ ಮಧುಕರ್ ವರ್ಸಸ್ ಸ್ಟೇಟ್ ಆಫ್ ಮಹಾರಾಷ್ಟ್ರ ಮತ್ತು ಅರ್ಜುನ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಹರಿಯಾಣ- ಎರಡು ತೀರ್ಪುಗಳನ್ನು ಉಲ್ಲೇಖಿಸಿರುವ ಹೈಕೋರ್ಟ್, ಈ ಎರಡೂ ಪ್ರಕರಣಗಳಲ್ಲೂ ಭಂಗ್ ಗಾಂಜಾ ಅಲ್ಲ, ಅದು ಎನ್ ಡಿಪಿಎಸ್ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಹೇಳಿದೆ.

ನೇಪಾಳದಲ್ಲಿ ಕಿಕ್ಕೇರಲಿದೆ ಗಾಂಜಾ ಮತ್ತು; ಏನಿದರ ಗಮ್ಮತ್ತು?ನೇಪಾಳದಲ್ಲಿ ಕಿಕ್ಕೇರಲಿದೆ ಗಾಂಜಾ ಮತ್ತು; ಏನಿದರ ಗಮ್ಮತ್ತು?

ವಿಧಿ ವಿಜ್ಞಾನ ಪ್ರಯೋಗಾಲದ ವರದಿ ಬರುವವರೆಗೆ ಭಾಂಗ್ ಅನ್ನು ಗಾಂಜಾದಿಂದಲೇ ತಯಾರಿಸಲಾಗಿದೆ ಎಂಬ ತೀರ್ಮಾನಕ್ಕೆ ಬರಲಾಗದು ಎಂದು ಹೇಳಿರುವ ಹೈಕೋರ್ಟ್ ಆರೋಪಿಗೆ ಜಾಮೀನು ನೀಡಲಾಗುದು ಎಂದು ಆದೇಶಿಸಿದೆ. ಆತ ಬಳಿ ದೊರೆತಿರುವುದು ಸಣ್ಣ ಪ್ರಮಾಣದ ಗಾಂಜಾ ಅಷ್ಟೇ, ಹಾಗಾಗಿ ಆತ ಜಾಮೀನಿಗೆ ಅರ್ಹ ಎಂದು ನ್ಯಾಯಾಲಯ ತಿಳಿಸಿದೆ.

ಆರೋಪಿಗೆ 2 ಲಕ್ಷ ರೂ. ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿ ಆಧಾರದಲ್ಲಿ ಜಾಮೀನು ನೀಡಲು ನ್ಯಾಯಾಲಯ ಆದೇಶಿಸಿದೆ.

ನಿಷೇಧಿತ ಪದಾರ್ಥವಲ್ಲ: ರೋಷನ್ ಮಿಶ್ರಾ ಪರ ವಾದಿಸಿದ್ದ ವಕೀಲ ಎಸ್.ಮನೋಜ್ ಕುಮಾರ 'ಭಾಂಗ್' ಎಂಬುದು ಉತ್ತರ ಭಾರತದ ಲಸ್ಸಿ ಅಂಗಡಿಗಳಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಪಾನೀಯವಾಗಿದೆ. ಇದು ನಿಷೇಧಿತ ಔಷಧವಲ್ಲ. ಶಿವರಾತ್ರಿ ಹಬ್ಬದ ಸಮಯದಲ್ಲಿ ಈ ಪಾನೀಯವನ್ನು ಬಳಸಲಾಗುತ್ತದೆ ಮತ್ತು ಇದು ನಿಷೇಧಿತ ಪಾನೀಯವಲ್ಲ ಮತ್ತು ಕಾಯಿದೆ ಅಡಿಯಲ್ಲಿ ಬರುವುದಿಲ್ಲ'' ಎಂದು ಹೇಳಿದ್ದರು.

ಆದಾಗ್ಯೂ ಸರ್ಕಾರಿ ವಕೀಲರು, ಭಾಂಗ್ ಅನ್ನು ಗಾಂಜಾ ಎಲೆಗಳಿಂದ ತಯಾರಿಸಲಾಗುತ್ತದೆ ಮತ್ತು ಆದ್ದರಿಂದ ಇದು ಗಾಂಜಾ ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ ಎಂದು ವಾದಿಸಿದ್ದರು.

English summary
The Karnataka High Court has ruled that 'bhang' is not declared as a prohibited drug or drink under the Narcotic Drugs and Psychotropic Substances (NDPS) Act, and granted bail to a man who was arrested in the city for possessing 29 kilograms of the concoction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X