ಬಿಬಿಎಂಪಿ ಉಪ ಮೇಯರ್ ಆಗಿ ಭದ್ರೇಗೌಡ ಅವಿರೋಧ ಆಯ್ಕೆ
ಬೆಂಗಳೂರು, ಡಿಸೆಂಬರ್ 5: ಬಿಬಿಎಂಪಿಯ ಉಪ ಮೇಯರ್ ಆಗಿ ಜೆಡಿಎಸ್ ಕಾರ್ಪೊರೇಟರ್ ಭದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಬಿಎಂಪಿ ಉಪಮೇಯರ್ ಸ್ಥಾನ ಹಾಗೂ ಸ್ಥಾಯಿ ಸಂಸ್ಥೆಗಳ ಅಧ್ಯಕ್ಷ, ಸದಸ್ಯರ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು.
ಚುನಾವಣೆಯಲ್ಲಿ ಸಂಖ್ಯಾಬಲದ ಕೊರತೆಯಿಂದಾಗಿ ಬಿಜೆಪಿಯು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಜೆಡಿಎಸ್ ಕಾರ್ಪೊರೇಟರ್ ಭದ್ರೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೇಯರ್ ಜೊತೆ ಸೇರಿ ಬೆಂಗಳೂರು ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ, ಕಸ, ರಸ್ತೆಗುಂಡಿಗಳ ಸಮಸ್ಯೆ ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸಲು ಯತ್ನಿಸುತ್ತೇನೆ ಎಂದು ಭದ್ರೇಗೌಡ ಭರವಸೆ ನೀಡಿದರು.
ಇದೇ ವೇಳೆ ಮಾಜಿ ಡಿಸಿಎಂ ಆರ್ ಅಶೋಕ್ ಮಾತನಾಡಿ, ನಮ್ಮ ನಡುವೆ ಯಾವುದೇ ಅಸಮಾಧಾನ ಇಲ್ಲ. ಸತೀಶ್ ರೆಡ್ಡಿ ನಮ್ಮ ಶಿಷ್ಯ. ಯಾವುದೇ ಗಲಾಟೆ ನಡೆದಿಲ್ಲ, ಅವರನ್ನೇ ಕೇಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವಿಲ್ಲ ಸದಸ್ಯರ ಸ್ಥಾನಕ್ಕೆ ಮಾತ್ರ ಆಯ್ಕೆಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಉಪಮೇಯರ್ ರಮೀಳಾ ಉಮಾಶಂಕರ್ ಅವರು ಅಕ್ಟೋಬರ್ 5ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.ಅಧಿಕಾರವಹಿಸಿಕೊಂಡು ಒಂದೇ ದಿನದಲ್ಲಿ ಸಾವನ್ನಪ್ಪಿದ್ದರು. ಸೆ.28 ರಂದು ಉಪಮೇಯರ್ ಆಗಿ ಆಯ್ಕೆಯಾಗಿದ್ದರು. ನಂತರ ಸೆ.3 ರಂದಷ್ಟೇ ಕಚೇರಿಯಲ್ಲ ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಂಡಿದ್ದರು.












Click it and Unblock the Notifications