ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೋನಿ ಎಫೆಕ್ಟ್‌: ಒಡಿಶಾದಲ್ಲಿ ವಿದ್ಯುತ್ ಸಂಪರ್ಕ ಸರಿಪಡಿಸಲು ಬೆಸ್ಕಾಂ ತಂಡ

|
Google Oneindia Kannada News

ಬೆಂಗಳೂರು, ಮೇ 13: ಒಡಿಶಾಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ ಪರಿಣಾಮವಾಗಿ 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿತ್ತು.

ಚಂಡ ಮಾರುತ ಅಪ್ಪಳಿಸಿ ಎರಡು ವಾರವಾಗುತ್ತಿದ್ದರೂ ಇದುವರೆಗೂ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಬೆಂಗಳೂರಿನಿಂದ ಬೆಸ್ಕಾಂ ಸಿಬ್ಬಂದಿ ಒಡಿಶಾಕ್ಕೆ ತೆರಳಿದ್ದಾರೆ.

ಫೋನಿ ಚಂಡಮಾರುತ ಅಪ್ಪಳಿಸಿ ವಾರವಾಯ್ತು, ಒಡಿಶಾ ಸ್ಥಿತಿ ಹೇಗಿದೆ?ಫೋನಿ ಚಂಡಮಾರುತ ಅಪ್ಪಳಿಸಿ ವಾರವಾಯ್ತು, ಒಡಿಶಾ ಸ್ಥಿತಿ ಹೇಗಿದೆ?

ಭುವನೇಶ್ವರ ರೈಲಿಗೆ ತೆರಳಲಿದ್ದಾರೆ. ಮೊದಲ ಬ್ಯಾಚಿನಲ್ಲಿ 317 ಸಿಬ್ಬಂದಿ 22 ತಂಡವಾಗಿ ತೆರಳಲಿದ್ದಾರೆ. ಒಡಿಶಾದಲ್ಲಿ 15ದಿನಗಳ ಕಾಲ ಇರಲಿದ್ದಾರೆ. ಒಂದುವೇಳೆ ಅಲ್ಲಿಯವರೆಗೂ ಸಂಪೂರ್ಣ ವಿದ್ಯುತ್ ಸಂಪರ್ಕ ನೀಡಲು ಸಾಧ್ಯವಾಗದಿದ್ದರೆ ಇನ್ನೂ ಹೆಚ್ಚು ದಿನ ಅಲ್ಲಿಯೇ ಇರಲಿದ್ದಾರೆ.

Bescom will help Odisha to fix its electricity problems

ತಮಿಳುನಾಡಿನಲ್ಲಿ ಪ್ರವಾಹ ಎದುರಾಗಿದ್ದಗಲೂ ನಮ್ಮ ತಂಡ ಅಲ್ಲಿಗೆ ತೆರಳಿತ್ತು. ಬೆಸ್ಕಾಂ ಸಿಬ್ಬಂದಿಗಾಗಿ ಭುವನೇಶ್ವರಕ್ಕೆ ವಿಶೇಷ ರೈಲು ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಿಕೊಟ್ಟಿದೆ.

ಖುರ್ದಾ ಜಿಲ್ಲೆಯಲ್ಲಿ ಇರುವ 1,164 ಎಟಿಎಂಗಳ ಪೈಕಿ ಕೇವಲ 197 ಎಟಿಎಂಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. 707 ಬ್ಯಾಂಕ್‌ಗಳ ಪೈಕಿ ಕೇವಲ 372 ಬ್ಯಾಂಕ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

32 ಟೆಲಿಕಾಂ ನೆಟ್‌ವರ್ಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದರೂ ಕೂಡ ನೆಟ್‌ವರ್ಕ್ ಪೂರ್ ಇದೆ ಎಂದು ತಿಳಿಸಿದ್ದಾರೆ. ಪುರಿ ಜಿಲ್ಲೆಯಲ್ಲಿ 239 ಎಟಿಎಂಗಳ ಪೈಕಿ ಕೇವಲ 60 ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

ಚಂಡಮಾರುತದಿಂದ 14 ಜಿಲ್ಲೆ 10 ಸಾವಿರ ಗ್ರಾಮಗಳಿಗೆ ಹಾನಿಯಾಯಾಗಿದೆ. . 20 ವರ್ಷಗಳಲ್ಲೇ ಪ್ರಳಯಾಂತಕ ಚಂಡಮಾರುತ ಇದಾಗಿತ್ತು.

English summary
Bescom is sending officials to restore power in many areas of Odisha. On Monday, around 317 Bescom officials will take train to Bhubaneshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X