ಬೆಂಗಳೂರು ಮಳೆ: ಎಸ್‌ಎಂಎಸ್ ಮೂಲಕ ಮಾಹಿತಿ ನೀಡಲು ಬೆಸ್ಕಾಂ ರೆಡಿ
ಬೆಂಗಳೂರು, ಜೂನ್ 7: ಬೆಂಗಳೂರಲ್ಲಿ ಮಳೆಯಿಂದಾದ ಅನಾಹುತಗಳು, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತಹ ದೂರುಗಳನ್ನು ಎಸ್‌ಎಂಎಸ್ ಮೂಲಕ ಬೆಸ್ಕಾಂ ಸ್ವೀಕರಿಸುತ್ತಿತ್ತು, ಆದರೆ ಇದೀಗ ಅದೇ ಎಸ್‌ಎಂಎಸ್ ಮೂಲಕ ವಿದ್ಯುತ್ ವ್ಯತ್ಯಯ, ಮಳೆಯ ಬಗ್ಗೆಯೂ ಮಾಹಿತಿ ನೀಡಲು ಮುಂದಾಗಿದೆ.
ಬೆಂಗಳೂರಲ್ಲಿ ಬಿರುಗಾಳಿ ಸಮೇತ ಸುರಿದ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಬಸವನಗುಡಿ, ರಾಜರಾಜೇಶ್ವರಿನಗರದಲ್ಲಿ ರಸ್ತೆಯ ಮೇಲೆ, ಅಕ್ಕಪಕ್ಕದಲ್ಲೆಲ್ಲಾ ಕೇವಲ ಮರ, ವಿದ್ಯುತ್ ತಂತಿ, ವಿದ್ಯುತ್ ಕಂಬಗಳೇ ಗೋಚರಿಸುತ್ತವೆ. ಕೆಲವು ಮಂದಿ ಮನೆಯಿಂದ ಹೊರಗಡೆ ಬರಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ಬಂತೆಂದರೆ ಸಾಕು ಎಲ್ಲರಿಗೂ ಕರೆಂಟ್ ಚಿಂತೆ, ಇನ್ನುಮುಂದೆ ಬೆಸ್ಕಾಂಗೆ ಒಂದು ಎಸ್‌ಎಂಎಸ್ ಕಳುಹಿಸುವ ಮೂಲಕ ದೂರು ನೀಡಬಹುದಾಗಿದೆ. ಒಂದೊಮ್ಮೆ ವಿದ್ಯುತ್ ವ್ಯತ್ಯಯಕ್ಕೆ ಸಂಬಂಧಿಸಿದ ಮಾಹಿತಿಗಳಿದ್ದರೆ ಬೆಸ್ಕಾಂ ತಕ್ಷಣವೇ ಮಾಹಿತಿ ನೀಡುತ್ತದೆ. ದೀರ್ಘ ಅವಧಿ ವಿದ್ಯುತ್ ವ್ಯತ್ಯಯದ ಬಗ್ಗೆಯೂ ತಿಳಿಸುತ್ತದೆ.

ಹಗಲು ರಾತ್ರಿಯೆನ್ನದೆ ದಿನದ 24 ಗಂಟೆಯೂ ಗ್ರಾಹಕರಿಗೆ ಸಹಾಯ ಮಾಡಲು ಮುಂದಾಗಿದೆ. ನಿಮ್ಮ ಏರಿಯಾದಲ್ಲಿ ಯಾವಾಗ ಕರೆಂಟ್ ಹೋಗುತ್ತೆ ಎನ್ನುವ ಮಾಹಿತಿ ನಿಮಗೇ ಮೊದಲೇ ತಿಳಿದಾಗ ಬೇಗ ಬೇಗ ಕೆಲಸ ಮಾಡಿಕೊಳ್ಳಬಹುದಾಗಿದೆ.
ಬೆಸ್ಕಾಂ ಸಹಾಯವಾಣಿ 1912ಕರೆ ಮಾಡಿ ದೂರು ನೀಡಬಹುದ ನಿತ್ಯ 10 ಸಾವಿರಕ್ಕೂ ಹೆಚ್ಚು ಕರೆಗಳನ್ನು ಬೆಸ್ಕಾಂ ಸ್ವೀಕರಿಸುತ್ತಿದೆ. ಈಗಾಗಲೇ ಬೆಸ್ಕಾಂ ಮಿತ್ರ ಅಪ್ಲಿಕೇಷನ್‌ನ್ನು ಒಂದು ಲಕ್ಷ ಮಂದಿ ಡೌನ್‌ಲೋಡ್ ಮಾಡಿದ್ದು ಶೀಘ್ರ ಎಸ್‌ಎಂಎಸ್ ಮೂಲಕ ದೂರು ನೀಡಬಹುದಾಗಿದೆ. ಶೀಘ್ರವೇ ಸಂಖ್ಯೆ ಪ್ರಕಟಿಸಲಾಗುತ್ತದೆ. ಗುರುವಾರ ಒಂದೇ ದಿನದಲ್ಲಿ ಬೆಸ್ಕಾಂಗೆ 10,953 ದೂರು ಬಂದಿದ್ದು, 10221 ದೂರುಗಳನ್ನು ಪರಿಹರಿಸಲಾಗಿದೆ.












Click it and Unblock the Notifications