ಬೆಂಗಳೂರಿಗರೇ ಗಮನಿಸಿ: ಬುಧವಾರ ನಗರದ ಹಲವೆಡೆ ವಿದ್ಯುತ್ ಕಡಿತ, ಬೆಸ್ಕಾಂ ಮಾಹಿತಿ

ಬೆಂಗಳೂರು, ಡಿ. 20: ಸಿಲಿಕಾನ್ ಸಿಟಿಯ ಜನರು ಬುಧವಾರ (ಡಿ.21) ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವನ್ನು ಎದುರಿಸಬೇಕಾಗುತ್ತದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಟಿಪಿಸಿಎಲ್) ಹಲವಾರು ನಿರ್ವಹಣಾ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಈ ವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬುಧವಾರ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ಈ ನಿರ್ವಹಣಾ ಕೆಲಸಗಳು ಮೂರನೇ ತ್ರೈಮಾಸಿಕ ಮತ್ತು ನಿಯಮಿತ ನಿರ್ವಹಣಾ ಕಾಮಗಾರಿಗಳ ಯೋಜನೆಗಳನ್ನು ಒಳಗೊಂಡಿರಬಹುದು. ಇವುಗಳಲ್ಲಿ ಹೆಚ್ಚಿನವು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಸಲಾಗುತ್ತದೆ. ಇದರ ಪರಿಣಾಮವಾಗಿ ಸುಮಾರು ಆರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗುತ್ತದೆ. ಮತ್ತೆ ಕೆಲವು ಕೆಲಸಗಳು ಸಂಜೆ 5 ಅಥವಾ 6 ಗಂಟೆಯವರೆಗೂ ನಡೆಯಬಹುದು ಎಂದು ಮಾಹಿತಿ ನೀಡಿದೆ.

BESCOM informs power cuts in city on Wednesday, Check here

ಬೆಂಗಳೂರಿನಲ್ಲಿ ಬೆಸ್ಕಾಂ ಆಗಾಗ್ಗೆ ನಿರ್ವಹಣೆ ಮತ್ತು ದುರಸ್ತಿ ಯೋಜನೆಗಳನ್ನು ಮಾಡುತ್ತಿರುತ್ತದೆ. ಇದರಲ್ಲಿ ಮರಗಳನ್ನು ಟ್ರಿಮ್ಮಿಂಗ್ ಮಾಡುವುದು, ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ ಮಾಡುವುದು, ಪೈಪ್ ಹಾಕುವುದು ಮತ್ತು ಜಲಸಿರಿ ನೀರು ಸರಬರಾಜು ಕೆಲಸಗಳು ಸೇರಿವೆ.

*ವಿದ್ಯುತ್ ಕಡಿತವನ್ನು ಎದುರಿಸಬಹುದಾದ ಪ್ರದೇಶಗಳ ಪಟ್ಟಿ ಇಲ್ಲಿದೆ*

ಡಿಸೆಂಬರ್ 21, ಬುಧವಾರ

ಕೆಟಿಪಿಸಿಎಲ್ ವೃತ್ತ - ಬೆಂಗಳೂರು ಮಹಾನಗರ ವಲಯ (BMAZ) ದಕ್ಷಿಣ, ಬೆಂಗಳೂರು ಮಹಾನಗರ ವಲಯ (BRAZ)

ಕೆಟಿಪಿಸಿಎಲ್ ವಿಭಾಗ- ದೊಡ್ಡಬಳ್ಳಾಪುರ, ಸೋಮನಹಳ್ಳಿ

BESCOM informs power cuts in city on Wednesday, Check here

ಬೆಸ್ಕಾಂ ವೃತ್ತ - ಬೆಸ್ಕಾಂ ಪೂರ್ವ, ಬಿಆರ್‌ಸಿ ಕೆಂಗೇರಿ, ಬೆಸ್ಕಾಂ ದಕ್ಷಿಣ

ಬೆಸ್ಕಾಂ ವಿಭಾಗ- ಇಂದಿರಾನಗರ, ಶಿವಾಜಿನಗರ, ನೆಲಮಂಗಲ, ಕೆಂಗೇರಿ

ಗುಂಡಮಗೆರೆ, ಹೊಸಹಳ್ಳಿ, ಸಾಸಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗೌರಿಬಿದನೂರು ಮತ್ತು ದೇವನಹಳ್ಳಿ ಎಚ್‌/ಡಬ್ಲ್ಯೂ ಪಾರ್ಕ್‌ನಿಂದ 220 ಕಿಲೋವೋಲ್ಟ್‌ಗಳ (ಕೆವಿ) ಕೆಐಎಡಿಬಿ ಆರ್‌/ಎಸ್‌ ಪೂರೈಕೆಯಾಗುವುದರಿಂದ ಬೇರೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+