• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರೆಂಟ್ ಇಲ್ಲ ಎಂದು ದೂರು ನೀಡಿದರೆ ಗ್ರಾಹಕನಿಗೆ ಬೆಸ್ಕಾಂ ಹೀಗೆ ಮಾಡೋದಾ?

|

ಬೆಂಗಳೂರು, ಮೇ 28: ವಿದ್ಯುತ್ ಕಡಿತಗೊಂಡರೆ ಬೆಸ್ಕಾಂ ಹೊರತುಪಡಿಸಿ ಇನ್ಯಾರಿಗೆ ದೂರು ಹೇಳೋದು. ಸಹಾಯವಾಣಿಗೆ ಕರೆ ಮಾಡಿದರೆ ಯಾವಾಗಲೂ ಬಿಜಿ ಟೋನ್, ತಕ್ಷಣಕ್ಕೆ ಯಾರೂ ಸ್ಪಂದಿಸುವುದಿಲ್ಲ, ಇನ್ನು ಇರುವುದು ಟ್ವಿಟ್ಟರ್ ಖಾತೆಯೊಂದೇ, ಅದರ ಮೂಲಕ ದೂರು ನೀಡಿದ್ದ ಗ್ರಾಹಕನನ್ನೇ ಬೆಸ್ಕಾಂ ಬ್ಲಾಕ್ ಮಾಡಿರುವ ಘಟನೆ ನಡೆದಿದೆ.

ಜೋರಾದ ಗಾಳಿ ಬಂದರೆ ಸಾಕು ಕರೆಂಟ್ ಇರುವುದಿಲ್ಲ, ಗಂಟೆಗಟ್ಟಲೆ ಇರುವುದಿಲ್ಲ, ಕೆಲವೊಮ್ಮೆ ಇಡೀ ದಿನ, ಮನೆಯಲ್ಲಿ ಯಾವ ಕೆಲಸ ಕಾರ್ಯವೂ ಆಗುವುದಿಲ್ಲ, ಇದರಿಂದ ಬೇಜಾರಾಗಿ ಬೆಸ್ಕಾಂಗೆ ದೂರು ನೀಡಿದರೆ ಹೀಗೆ ಮಾಡೋದಾ, ಜನರು ದೂರು ಆಲಿಸಲು ಆರಂಭಿಸಿರುವ ಟ್ವಿಟರ್ ಖಾತೆ ನಿರ್ವಹಿಸುವವರು ಗ್ರಾಹಕರನ್ನು ಬ್ಲಾಕ್ ಮಾಡುತ್ತಾರೆ ಎಂದರೆ ಎಷ್ಟು ಅಸಹನೆ ಇರಬೇಡ. ಎಂತಹ ಅವಸ್ಥೆ ಇದು.

ಮತ್ತಿಕೆರೆಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಗಾಯಗೊಂಡಿದ್ದ ಬಾಲಕ ಸಾವು

ಇದರ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲೇಬೇಕು. ಜನರ ಕಷ್ಟಗಳನ್ನು ಆಲಿಸುವ ಇವರೇ ಕಿವುಡರಾದರೆ ಇನ್ಯಾರಿಗೆ ಸಮಸ್ಯೆಗಳ ಬಗ್ಗೆ ದೂರು ನೀಡಬೇಕು ಎನ್ನುವುದು ಗ್ರಾಹಕನ ಬಹುದೊಡ್ಡ ಪ್ರಶ್ನೆಯಾಗಿದೆ.

English summary
BESCOM block its customers on twitter because in his twitter account he written series of complaint about power cut in his area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X