Biggest Shopping Malls: ಬೆಂಗಳೂರಿನ ಟಾಪ್ 10 ಅತಿ ದೊಡ್ಡ ಶಾಪಿಂಗ್ ಮಾಲ್‌ಗಳಿವು, ವಿಶೇಷತೆ, ಸೌಲಭ್ಯಗಳ ವಿವರ ತಿಳಿಯಿರಿ
ಜನಸಂದಣಿ ಹೆಚ್ಚಿದಂತೆಲ್ಲ ರಾಜ್ಯ ರಜಧಾನಿ ಬೆಂಗಳೂರು ಕೂಡ ವಿಸ್ತರಿಸಿಕೊಳ್ಳುವುದಲ್ಲದೇ, ದಿನದಿಂದ ದಿನಕ್ಕೆ ಅಭಿವೃದ್ಧಿಯೆಗೆಡೆ ಸಾಗುತ್ತಲೇ ಇದೆ. ಇನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಕೇಂದ್ರ ಮಾತ್ರವಲ್ಲದೆ ದೊಡ್ಡ ದೊಡ್ಡ ಅತ್ಯದ್ಭುತ ಶಾಪಿಂಗ್ ಮಾಲ್‌ಗಳನ್ನು ಹೊಂದಿರುವ ನಗರವಾಗಿದೆ. ಹಾಗಾದರೆ ಬೆಂಗಳೂರು ನಗರದ ಟಾಪ್ 10 ಶಾಪಿಂಗ್ ಮಾಲ್‌ಗಳು ಯಾವುವು ಹಾಗೂ ಅವುಗಳಲ್ಲಿ ಏನೆಲ್ಲ ಸೌಲಭ್ಯಗಳಿ ಲಭ್ಯ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
2024ರಲ್ಲಿ ನಗರದಲ್ಲಿ ಇಲ್ಲಿನ ಜನ ವೈವಿಧ್ಯಮಯ ಅಭಿರುಚಿಗಳು ಮತ್ತು ಆದ್ಯತೆಗಳನ್ನು ಪೂರೈಸುವ ಶಾಪಿಂಗ್ ಮಾಲ್‌ಗಳು ತಲೆ ಎತ್ತುತ್ತಲೇ ಇವೆ. ಈ ಪೈಕಿ ಬೆಂಗಳೂರಿನಲ್ಲಿರುವ ಟಾಪ್ 10 ಅತೀ ದೊಡ್ಡ ಮಾಲ್‌ಗಳನ್ನು ನೀವು ನೋಡಬಾಹುದಾಗಿದೆ. ಇಲ್ಲಿ ಶಾಪಿಂಗ್, ಮನರಂಜನೆ ಮತ್ತು ಭೋಜನ ಸೇರಿದಂತೆ ಇನ್ನಿತರೆ ಸೈಲಭ್ಯಗಳನ್ನು ಕಾಣಬಹುದಾಗಿದೆ.

ಬೆಂಗಳೂರಿನ ಅತಿದೊಡ್ಡ ಮಾಲ್: 2024ರಲ್ಲಿ ಬೆಂಗಳೂರಿನ ಅತಿದೊಡ್ಡ ಮಾಲ್ ಫೀನಿಕ್ಸ್ ಮಾರ್ಕೆಟ್ ಸಿಟಿಯ ವೈಭವವನ್ನು ಅನ್ವೇಷಿಸಿ. ಝರಾ, ಮ್ಯಾಕ್ ಮತ್ತು ಸೆಫೋರಾದಂತಹ ಹೆಸರಾಂತ ಬ್ರ್ಯಾಂಡ್‌ಗಳನ್ನು ಇಲ್ಲಿ ಕಾಣಬಹುದಾಗಿದೆ. ಉಡುಪುಗಳು ಸೇರಿದಂತೆ ಪರಿಕರಗಳು ಕೂಡ ಇಲ್ಲಿ ಲಭ್ಯವಿವೆ.
ಫ್ಯಾಬ್ ಇಂಡಿಯಾದ ಹೋಮ್ ಟೆಕ್ಸ್‌ಟೈಲ್‌ಗಳಿಂದ ಹಿಡಿದು ಕಾಪರ್ ಚಿಮಣಿ ಮತ್ತು ಕ್ರಿಸ್ಪಿ ಕ್ರೀಮ್‌ನಂತಹ ರುಚಿಕರವಾದ ಊಟಗಳನ್ನು ಸಹ ನೀವು ಸವಿಯಬಹುದಾಗಿದೆ. ಅಲ್ಲದೆ ಚಲನಚಿತ್ರ ಉತ್ಸಾಹಿಗಳಿಗೆ ಒಂಬತ್ತು-ಪರದೆಯ ಮಲ್ಟಿಪ್ಲೆಕ್ಸ್‌ಗಳನ್ನು ಇಲ್ಲಿ ಕಾಣಬಹುದು. ಇದು ಮಹದೇವಪುರದಲ್ಲಿದ್ದು, ಬೆಳಗ್ಗೆ 10.30 - ರಾತ್ರಿ 10 ಗಂಟೆಯವರೆಗೂ ತೆರೆದಿರುತ್ತದೆ.
ಪ್ರಮುಖ ಅಂಶಗಳು: ಬೆಂಗಳೂರಿನಲ್ಲಿರುವ ಫೀನಿಕ್ಸ್ ಮಾರ್ಕೆಟ್ ಸಿಟಿಯು ಬೆಂಗಳೂರಿನ ಅತಿದೊಡ್ಡ ಮಾಲ್ ಆಗಿದೆ. ಇದು 296ಕ್ಕೂ ಹೆಚ್ಚಿನ ಮಳಿಗೆಗಳು ಮತ್ತು 15ಕ್ಕೂ ಹೆಚ್ಚು ಆಂಕರ್ ಬಾಡಿಗೆದಾರರಿದ್ದು, 1,000,000 ಚದರ ಅಡಿಗಳನ್ನು ಒಳಗೊಂಡಿದೆ. ಐಲ್ಯಾಂಡ್ ಸ್ಟಾರ್ ಮಾಲ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ.
* ಇದು ಒಂಬತ್ತು-ಪರದೆಯ PVR ಸಿನಿಮಾ ಮಲ್ಟಿಪ್ಲೆಕ್ಸ್ ಮತ್ತು ವೈವಿಧ್ಯಮಯ ಫುಡ್ ಕೋರ್ಟ್ ಅನ್ನು ಒಳಗೊಂಡಿದೆ. ಇದು ಅಕ್ಟೋಬರ್ 2011 ರಲ್ಲಿ ಪ್ರಾರಂಭವಾಗಿದ್ದು, ವಾಸ್ತುಶಿಲ್ಪಿ ಬೆನೊಯ್ ಇದರ ವಿನ್ಯಾಸಗಾರರಾಗಿದ್ದಾರೆ. ನೆಲಮಾಳಿಗೆ ಸೇರಿದಂತೆ ನಾಲ್ಕು ಮಹಡಿಗಳನ್ನು ಹೊಂದಿದೆ ಮತ್ತು 1,700 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ.
* 2013ರಲ್ಲಿ PVR ಮಲ್ಟಿಪ್ಲೆಕ್ಸ್ ಮತ್ತು 54 ಇತರ ಅಂಗಡಿಗಳನ್ನು ಟ್ರೇಡ್ ಲೈಸೆನ್ಸ್ ಕೊರತೆಯಿಂದಾಗಿ ಸಂಕ್ಷಿಪ್ತವಾಗಿ ಮುಚ್ಚಲಾಯಿತು, ನಂತರ ಮತ್ತೆ ತೆರೆಯಲಾಯಿತು. 2016ರಲ್ಲಿ ಫೀನಿಕ್ಸ್ ಮಾಲ್ ಪ್ಲಾಸ್ಟಿಕ್ ಬ್ಯಾಗ್ ನಿಷೇಧವನ್ನು ಉಲ್ಲಂಘಿಸಿದ್ದಕ್ಕಾಗಿ ದಾಳಿಯನ್ನು ಎದುರಿಸಿತು. ಇದರ ಪರಿಣಾಮವಾಗಿ 1,000 ಕೆಜಿ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ದಂಡ ವಿಧಿಸಲಾಯಿತು.
ಬೆಂಗಳೂರಿನ ಟಾಪ್ 10 ದೊಡ್ಡ ಶಾಪಿಂಗ್ ಮಾಲ್‌ಗಳು
1. ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್ ಮಹದೇವಪುರದಲ್ಲಿದ್ದು, ಇಲ್ಲಿ ಉಡುಪುಗಳು, ಪರಿಕರಗಳು, ಊಟ, ಒಂಬತ್ತು-ಪರದೆಯ ಮಲ್ಟಿಪ್ಲೆಕ್ಸ್ ಸೌಲಭ್ಯ ಪಡೆಯಬಹುದಾಗಿದೆ.
2. ಮಂತ್ರಿ ಸ್ಕ್ವೇರ್ ಮಾಲ್ ಮಲ್ಲೇಶ್ವರಂನಲ್ಲಿದ್ದು, ಇದು ಬೆಂಗಳೂರು 1.3 ಮಿಲಿಯನ್ ಚದರ ಅಡಿ ಜಾಗದಲ್ಲಿದೆ. ಅಲ್ಲದೆ 10,000ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು, INOX ಮಲ್ಟಿಪ್ಲೆಕ್ಸ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆಯಬಹಿದಾಗಿದೆ.
3. ಯುಬಿ ಸಿಟಿ ಮಾಲ್ ಅಶೋಕ್ ನಗರದಲ್ಲಿದ್ದು, ಇಲ್ಲಿ ಐಷಾರಾಮಿ ಬ್ರಾಂಡ್‌ಗಳು, ಉನ್ನತ ಮಟ್ಟದ ರೆಸ್ಟೋರೆಂಟ್‌ಗಳು, ಸಬ್ಲೈಮ್ ಗ್ಯಾಲೇರಿಯಾದಲ್ಲಿ ವಿವಿಧ ಕಲೆ ಪ್ರದರ್ಶನಗಳನ್ನು ಕಾಣಬಹುದು.
4. ಓರಿಯನ್ ಮಾಲ್ ರಾಜಾಜಿ ನಗರದಲ್ಲಿದ್ದು, ಅಪ್ಯಾರಲ್ ಬ್ರಾಂಡ್‌ಗಳು, ಈವೆಂಟ್‌ಗಳು, ವಾಟರ್‌ಸೈಡ್ ವಾಯುವಿಹಾರ, ಸ್ಪಾಗಳು, ಫುಡ್ ಕೋರ್ಟ್ ಸೇರಿದಂತೆ ಇನ್ನಿತರ ಸೌಲಭ್ಯಗಳು ಇಲ್ಲಿ ಇವೆ.
5. ವಿಆರ್ ಮಾಲ್ ಕೃಷ್ಣರಾಜಪುರ- ಡಿಸೈನರ್ ಲೇಬಲ್‌ಗಳು, ಫ್ಯಾಶನ್ ಹೌಸ್‌ಗಳು, ಹೈಟೆಕ್ ಹೋಟೆಲ್, ಒಂಬತ್ತು-ಪರದೆಯ ಮಲ್ಟಿಪ್ಲೆಕ್ಸ್ ಇಲ್ಲಿ ಇವೆ.
6. ಫೋರಮ್ ಮಾಲ್ ಕೋರಮಂಗ- ಇಲ್ಲಿ ಬುಕ್ಸ್, ಸ್ಟೇಷನರಿ, ಬ್ರಾಂಡೆಡ್ ಉಡುಪು, ಸಂವಾದಾತ್ಮಕ ಮನರಂಜನೆಗಾಗಿ ಟೈಮ್‌ಝೋನ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಪಡೆಯಬಹುದು.
7. ಗರುಡಾ ಮಾಲ್ ಅಶೋಕ್ ನಗರದಲ್ಲಿದ್ದು, ಟ್ರೆಂಡಿ ಬಟ್ಟೆಗಳು, ವಿವಿಧ ತಿನಿಸುಗಳು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಅನುಭವಿಸಬಹುದಾಗಿದೆ.
8. ಬೆಂಗಳೂರು ಸೆಂಟ್ರಲ್ ಮಾಲ್ ಬೆಳ್ಳಂದೂರು, ಮನೆಯ ಅಲಂಕಾರ, ಪೀಠೋಪಕರಣಗಳು, ಐಷಾರಾಮಿ ಬ್ರಾಂಡ್ ಉಡುಪುಗಳು, ಬಹು ಊಟದ ಆಯ್ಕೆಗಳು ಇಲ್ಲಿ ಲಭ್ಯವಿವೆ.
9. ಇನಾರ್ಬಿಟ್ ಮಾಲ್ ವೈಟ್‌ಫೀಲ್ಡ್ - ಇಲ್ಲಿ ಬೆಂಗಳೂರು ಬ್ರ್ಯಾಂಡೆಡ್ ಉಡುಪುಗಳು, ಪರಿಕರಗಳು, ಕರಕುಶಲ ವಸ್ತುಗಳು, ಫೈನ್ ಡೈನ್ ರೆಸ್ಟೋರೆಂಟ್‌ಗಳು ಇವೆ.
10. 1 MG ಮಾಲ್ MG ರಸ್ತೆ- ಭೋಜನ ವೈವಿಧ್ಯ, ಉಡುಪು ಬ್ರಾಂಡ್‌ಗಳು, ಅಲಂಕಾರಿಕ ವಸ್ತುಗಳು, ಸ್ಮಾಶ್ ಸಂವಾದಾತ್ಮಕ ಕ್ರೀಡಾ ಮನರಂಜನೆಯನ್ನು ಕಾಣಬಹುದಾಗಿದೆ.
1. ಫೀನಿಕ್ಸ್ ಮಾರ್ಕೆಟ್ ಸಿಟಿ
* ಸ್ಥಳ: ಮಹದೇವಪುರ, ಬೆಂಗಳೂರು
* ಆರಂಭ: ಅಕ್ಟೋಬರ್ 2011, ಐಲ್ಯಾಂಡ್ ಸ್ಟಾರ್ ಮಾಲ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಇದರ ಡೆವೆಲಪರ್ ಆಗಿದೆ. ಇಲ್ಲಿ 296ಕ್ಕೂ ಹೆಚ್ಚು ಮಳಿಗೆಗಳಿವೆ.
* ಮಹಡಿಗಳ ಸಂಖ್ಯೆ: 4
ಇದನ್ನು ದಿ ಫೀನಿಕ್ಸ್ ಮಿಲ್ಸ್ ಕಂ. ಲಿಮಿಟೆಡ್ ನಿರ್ಮಾಣ ಮಾಡಿದ್ದು, ಇದು ಬೆಂಗಳೂರಿನ ಅತ್ಯಂತ ದೊಡ್ಡ ಮಾಲ್ ಆಗಿದೆ. ನಾಲ್ಕು ಮಹಡಿಗಳಲ್ಲಿ 1,000,000 ಚದರ ಅಡಿ ವಿಸ್ತಾರವಾದ ಪ್ರದೇಶವನ್ನು ಒಳಗೊಂಡಿದೆ. ಅದರ ವಿಶಾಲವಾದ ಮಿತಿಯೊಳಗೆ, ಮಾಲ್ 296 ಮಳಿಗೆಗಳನ್ನು ಹೊಂದಿದೆ. ಒಂಬತ್ತು-ಪರದೆಯ PVR ಸಿನಿಮಾಸ್ ಮಲ್ಟಿಪ್ಲೆಕ್ಸ್, ಮತ್ತು ರೋಮಾಂಚಕ ಫುಡ್ ಕೋರ್ಟ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಹೊಂದಿದೆ.
2. ಮಂತ್ರಿ ಸ್ಕ್ವೇರ್ ಮಾಲ್
* ಸ್ಥಳ: ಮಲ್ಲೇಶ್ವರಂ, ಬೆಂಗಳೂರು
* ಆರಂಭ: 2010
* ನಿರ್ಮಾಣ: ಮಂತ್ರಿ ಡೆವಲಪರ್ಸ್
* ಮಳಿಗೆಗಳ ಸಂಖ್ಯೆ : 252
* ಮಹಡಿಗಳ ಸಂಖ್ಯೆ: 3
ಮಲ್ಲೇಶ್ವರಂಲ್ಲಿರುವ ಮಂತ್ರಿ ಮಾಲ್ ಬೆಂಗಳೂರಿನ ಎರಡನೇ ಅತಿದೊಡ್ಡ ಮಾಲ್‌ಗಳಲ್ಲಿ ಒಂದಾಗಿದೆ. ಇದು ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದ ಮೂಲಕ ಮೆಟ್ರೋ ರೈಲು ಸಂಪರ್ಕವನ್ನು ಹೊಂದಿದೆ.
3. ಯುಬಿ ಸಿಟಿ ಮಾಲ್
* ಸ್ಥಳ: ಅಶೋಕ್ ನಗರ, ಬೆಂಗಳೂರು
* ಆರಂಭ: 2008
ಅದ್ದೂರಿ ಶಾಪಿಂಗ್ ಮಾಡ ಬಯಸುವವರಿಗೆ ಬೆಂಗಳೂರಿನ ಮೂರನೇ ಅತೀದೊಡ್ಡ ಯುಬಿ ಸಿಟಿ ಮಾಲ್ ಸೂಕ್ತವಾಗಿದೆ. ಇದು ಅತ್ಯುತ್ತಮವಾದ ಅಂತರರಾಷ್ಟ್ರೀಯ ಬ್ರಾಂಡ್‌ಗಳ 40ಕ್ಕೂ ಹೆಚ್ಚು ವಿಶೇಷ ವಿಭಾಗ ವಸತಿಯೊಂದಿಗೆ ಸಾಟಿಯಿಲ್ಲದ ಮಟ್ಟದ ಐಷಾರಾಮಿಗಳನ್ನು ಒದಗಿಸುತ್ತದೆ. ಇಲ್ಲಿನ ಭವ್ಯವಾದ ವಾತಾವರಣವು ಶಾಪಿಂಗ್‌ನ ಆಚೆಗೂ ವಿಸ್ತರಿಸಿದೆ, ಬಹು-ಪಾಕಪದ್ಧತಿ ರೆಸ್ಟೋರೆಂಟ್‌ಗಳು ಖಾದ್ಯ ಸವಿಯಲು ಮತ್ತು ದಿನವನ್ನು ಆನಂದದಾಯಕವಾಗಿ ಕಳೆಯಲು ಉತ್ತಮ ಮಾಲ್ ಆಗಿದೆ.
-
Arecanut Price: ಶಿವಮೊಗ್ಗ ಮಾರುಕಟ್ಟೆಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾರ್ಚ್ 23ರ ದರಪಟ್ಟಿ -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ












Click it and Unblock the Notifications