ಬೆಂಗಳೂರಿನ ವಸತಿ ಮನೆಗಳ ಮಾರಾಟದಲ್ಲಿ ಭಾರೀ ಕುಸಿತ: ಕಾರಣ ತಿಳಿಯಿರಿ- ಅಂಕಿಅಂಶ, ವರದಿ, ವಿವರ ಪಡೆಯಿರಿ
ಬೆಂಗಳೂರು, ಜೂನ್ 28: ಮುಂಬೈ, ಪುಣೆ ಮತ್ತು ಅಹಮದಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಸತಿ ಮನೆಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ವಸತಿ ಮಾರುಕಟ್ಟೆಯು ಎಂಟು ಶೇಕಡಾ ಹೆಚ್ಚಳವನ್ನು ಕಂಡಿದೆ. ಆದರೆ ಐದು ಇತರ ನಗರಗಳಾದ ಬೆಂಗಳೂರು, ದೆಹಲಿ-ಎನ್‌ಸಿಆರ್, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಕುಸಿತ ಕಂಡುಬಂದಿರುವುದು ಕಳವಳಕ್ಕೆ ಕಾರಣವಾಗಿದೆ.
ಮುಂಬೈ, ಪುಣೆ ಮತ್ತು ಅಹಮದಾಬಾದ್ ಮೂರು ನಗರಗಳಲ್ಲಿ ವಸತಿ ಮಾರಾಟ ಪ್ರಮಾಣ ಏರಿಕೆಯಾಗಿದೆ ಎಂದು ವರದಿ ಹೇಳಿದೆ. ಆದಾಗ್ಯೂ, ಇದು ಬೆಂಗಳೂರು, ದೆಹಲಿ-ಎನ್‌ಸಿಆರ್, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತಾ ಸೇರಿದಂತೆ ಇತರ ಐದು ನಗರಗಳಲ್ಲಿ ಕುಸಿತ ಕಂಡಿದೆ ಎಂದು ಸುದ್ದಿಸಂಸ್ಥೆ 'ಪಿಟಿಐ' ವರದಿ ಮಾಡಿದೆ.

ರಿಯಾ ಇಂಡಿಯಾದ ( ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾನಿಟರ್ ಮಾಡುವ ಕಂಪನಿ ) ಸಿಎಫ್‌ಒ ವಿಕಾಸ್ ವಾಧವನ್ ಈ ಕುರಿತು ಮಾಹಿತಿ ನೀಡಿದ್ದಾರೆ.
'ಭಾರತದ ಅಗ್ರ ಎಂಟು ವಸತಿ ಮಾರುಕಟ್ಟೆಗಳು ಬೆಳವಣಿಗೆಯ ಹಾದಿಯಲ್ಲಿ ಮುಂದುವರಿದಿವೆ. ಪ್ರಮುಖ ಸಾಲದ ದರದಲ್ಲಿನ ಹೆಚ್ಚಳವನ್ನು ನಿಲ್ಲಿಸಿರುವ ಆರ್‌ಬಿಐ ನಿರ್ಧಾರವು ಇದಕ್ಕೆ ಕಾರಣವಾಗಿದೆ. ವಸತಿ ಆಸ್ತಿಗಳನ್ನು ಖರೀದಿಸಲು ಇದು ಬಲವಾದ ಕಾರಣವಾಗಿದೆ. ಇದು ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ' ಎಂದು ಹೇಳಿದ್ದಾರೆ.
'ಕಳೆದ ಎರಡು ವರ್ಷಗಳಲ್ಲಿ ವಸತಿ ಮಾರಾಟದಲ್ಲಿನ ಹೆಚ್ಚಳದ ಹಿಂದಿನ ಪ್ರೇರಕ ಅಂಶಗಳಲ್ಲಿ ಕೋವಿಡ್ ಸಹ ಒಂದಾಗಿದೆ. ಸಾಂಕ್ರಾಮಿಕ ಪೀಡಿತ ಅವಧಿ ಮುಗಿದ ನಂತರ ಖರೀದಿ ಬೇಡಿಕೆ ಹೆಚ್ಚಿದೆ. ಮನೆ ಮಾಲೀಕತ್ವಕ್ಕಾಗಿ ಹೆಚ್ಚುತ್ತಿರುವ ಬಯಕೆಯಿಂದ ಮಾರಾಟದ ಪ್ರಮಾಣ ಅಧಿಕವಾಗಿದೆ' ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಸತಿ ಮಾರಾಟವು 8,350 ಯುನಿಟ್‌ಗಳಿಂದ 6,790 ಯೂನಿಟ್‌ಗಳಿಗೆ 19 ಪ್ರತಿಶತದಷ್ಟು ಕುಸಿದಿದೆ. ಆದರೆ ಅಹಮದಾಬಾದ್‌ನಲ್ಲಿ ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ 8,450 ಯುನಿಟ್‌ಗಳಿಗೆ 17 ಶೇಕಡಾ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
ಚೆನ್ನೈನ ವಸತಿ ಮಾರಾಟವು 3,210 ಯುನಿಟ್‌ಗಳಿಂದ 3,050 ಯೂನಿಟ್‌ಗಳಿಗೆ ಶೇಕಡಾ 5 ರಷ್ಟು ಕಡಿಮೆಯಾಗಿದೆ. ದೆಹಲಿ ಎನ್‌ಸಿಆರ್ ಮಾರಾಟದಲ್ಲಿ 28 ಶೇಕಡಾ ಕುಸಿತವನ್ನು 4,510 ಯುನಿಟ್‌ಗಳಿಂದ 3,230 ಯುನಿಟ್‌ಗಳಿಗೆ ಕಂಡಿದೆ.
ಹೈದರಾಬಾದ್ ಮತ್ತು ಕೋಲ್ಕತ್ತಾ ಕ್ರಮವಾಗಿ ಶೇಕಡಾ 3 ಮತ್ತು 40 ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ. ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ವರ್ಷದ ಹಿಂದಿನ ಅವಧಿಗಿಂತ 16 ಶೇಕಡಾ ಹೆಚ್ಚು ವಸತಿ ಘಟಕಗಳನ್ನು ಮಾರಾಟ ಮಾಡಿದೆ. ಎರಡನೇ ತ್ರೈಮಾಸಿಕದಲ್ಲಿ ಪುಣೆಯ ಮಾರಾಟವು 13,720 ಯುನಿಟ್‌ಗಳಿಂದ 18,850 ಯುನಿಟ್‌ಗಳಿಗೆ 37 ಶೇಕಡಾ ಏರಿಕೆಯಾಗಿದೆ.












Click it and Unblock the Notifications