Namma Metro: ಗುಡ್ ನ್ಯೂಸ್: ಬೆಂಗಳೂರು ಮೆಟ್ರೋ ರೈಲು ಸೇವೆ ವಿಸ್ತರಣೆ, ಯಾಕೆ?

ಬೆಂಗಳೂರು, ಏಪ್ರಿಲ್ 12: ರಾಜಧಾನಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾವಳಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಮ್ಮ ಮೆಟ್ರೋ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. BMRCL ನಮ್ಮ ಮೆಟ್ರೋ ಸೇವೆಯಲ್ಲಿ ಬದಲಾಣೆಗಳು ಮಾಡಿ ಸೇವೆ ವಿಸ್ತರಣೆ ಮಾಡಿವೆ. ಹಾಗಾದರೆ, ಪಂದ್ಯಾವಳಿ ದಿನಾಂಕ, ಮೆಟ್ರೋ ಸೇವೆ ಎಲ್ಲಿಯವರೆಗೆ ವಿಸ್ತರಣೆ, ಸಮಯ ಇನ್ನಿತರ ಪೂರ್ಣ ಮಾಹಿತಿಗೆ ಮುಂದೆ ಓದಿ.

ಬೆಂಗಳೂರಿನಲ್ಲಿ TATA IPL T-20 ಕ್ರಿಕೆಟ್ ಪಂದ್ಯಗಳು ಜರುಗಲಿವೆ. ಮುಂದಿನ ಏಪ್ರಿಲ್ 15 ಹಾಗೂ ಮೇ 4, 12 ಮತ್ತು 18 ಎಂದು ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಮ್ಯಾಚ್ ಜರುಗಲಿವೆ. ಈ ಸಂಬಂಧ ಆಯಾ ದಿನಗಳಳ್ಲಿ ನಮ್ಮ ಮೆಟ್ರೋದ 04 ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ತನ್ನ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ರವರೆಗೆ ವಿಸ್ತರಣೆ ಆಗಿವೆ.

Bengaluru s Namma Metro Extends Services Till 11 30 PM for IPL Matches Find Out More

ಪೇಪರ್ ಟಿಕೆಟ್ ವ್ಯವಸ್ಥೆ: ಎಲ್ಲಿ? ದರದ ವಿವರ

ಪಂದ್ಯಗಳು ನಡೆಯುವ ದಿನದಂದು ನಮ್ಮ ಮೆಟ್ರೋ ಎಲ್ಲ ನಿಲ್ದಾಣಗಳಲ್ಲಿ ಮಧ್ಯಾಹ್ನ 2.00 ಗಂಟೆಯಿಂದ ರೂ. 50/- ದರಲ್ಲಿ ರಿಟರ್ನ್ ಪ್ರಯಾಣಕ್ಕಾಗಿ ಪೇಪರ್ ಟಿಕೆಟ್ ನೀಡಲಾಗುವುದು. ಈ ಮೂಲಕ ಕ್ರೀಡಾಂಗಣ ಸುತ್ತಮುತ್ತ ಜನದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?3

ಈ ಪೇಪರ್ ಟಿಕೆಟ್‌ಗಳು ನಗರದ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣವರೆಗೆ ಸಂಚರಿಸಬಹುದು. ಇವು ಆಯಾ ದಿನಗಳಲ್ಲಿ ರಾತ್ರಿ 8.00 ಗಂಟೆಯಿಂದ ಸೇವೆ ಕೊನೆಗೊಳ್ಳುವ (ರಾತ್ರಿ 11.30) ವರೆಗೆ ಮಾನ್ಯವಾಗಿರುತ್ತವೆ.

2 ನಿಲ್ದಾಣಗಳಲ್ಲಿ ಟೋಕನ್ ಟಿಕೆಟ್ ಅಲಭ್ಯ

ಇದೇ ವೇಳೆ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಆಯಾ ದಿವಸ ಟೋಕನ್ ಲಭ್ಯವಿರುವುದಿಲ್ಲ. ಪ್ರಯಾಣಿಕರು QR ಕೋಡ್ ಟಿಕೆಟ್‌ ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು NCMC ಕಾರ್ಡ್‌ಗಳನ್ನು ಸಹ ಬಳಸಬಹುದಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Bengaluru s Namma Metro Extends Services Till 11 30 PM for IPL Matches Find Out More

ವಾಟ್ಸಾಪ್ ‌/ನಮ್ಮ ಮೆಟ್ರೋ ಆ್ಯಪ್/ಪೇಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಜನಸಂದಣಿ ತಪ್ಪಿಸಲು ಅಧಿಕಾರಿಗಳ ಕಿವಿಮಾತು

ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್ ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರಯಾಣಿಕರು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಐಪಿಎಲ್ ಪಂದ್ಯಾವಳಿಗಳು ನಡೆಯವು ಈ ಮೇಲಿನ ನಾಲ್ಕು ದಿನ (ಏಪ್ರಿಲ್ 15 ಹಾಗೂ ಮೇ 4, 12 ಮತ್ತು 18) ದಿನ ಬಿಟ್ಟು ಉಳಿದ ದಿನಗಳಲ್ಲಿ ಸಾಮಾನ್ಯ ದಿನಗಳಂತೆ ರಾತ್ರಿ 11 ಗಂಟೆಗೆ ರೈಲು ಸೇವೆ ಕೊನೆಗೊಳ್ಳಲಿದೆ. ಈ ಸಮಯ ಮತ್ತು ದಿನಾಂಕ ಗಮನಿಸಿ ನಮ್ಮ ಮೆಟ್ರೋ ಪ್ರಯಾಣಿಕರು ಪ್ರಯಾಣಸಬೇಕಿದೆ.

ಪ್ರತಿ ಭಾರಿಯು ಐಪಿಎಲ್ ಪಂದ್ಯಾವಳಿಗೆ ಬೆಂಗಳೂರಿನಲ್ಲಿ ನಡೆದಾಗ ನಮ್ಮ ಮೆಟ್ರೋ ಸೇವೆ ವಿಸ್ತರಣೆ ಜೊತೆಗೆ ಪೇಪರ್ ಟಿಕೆಟ್‌ನಂತಹ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ಇದು ಕ್ರಿಕೆಟ್ ಅಭಿಮಾನಿಳಿಗೆ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೇ ಆರ್‌ಸಿಬಿ ಮ್ಯಾಚ್‌ ಇದ್ದಾಗ ಭಾರಿ ಜನ ವೀಕ್ಷಣೆಗೆ ಆಗಮಿಸುತ್ತಾರೆ. ಹೀಗಾಗಿ ಇದೆಲ್ಲ ಗಮನದಲ್ಲಿಟ್ಟುಕೊಂಡು ನಮ್ಮ ಮೆಟ್ರೋ ಸೇವೆ ವಿಸ್ತರಣೆ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+