Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
ಬೆಂಗಳೂರು, ಮಾರ್ಚ್ 29: ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗವು ಐಟಿ ಕಾರಿಡಾರ್ ಗೆ ಸಂಪರ್ಕ ಕಲ್ಪಿಸಿದ ಮೊದಲ ಕಾರಿಡಾರ್ ಆಗಿದೆ. ಬೈಯಪ್ಪನಹಳ್ಳಿ-ಕೆ.ಆರ್‌ಪುರಂ ಉದ್ಘಾಟನೆ ಬಳಿಕವು ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಮಾರ್ಚ್ ತಿಂಗಳಲ್ಲಿ ಜನರ ಓಡಾಟ ಇಳಿಕೆಯಾಗಿದ್ದು, ಇದರಿಂದಾಗಿ BMRCL ಆದಾಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ಹಾಗಾದರೆ, ದೈನಂದಿನ ಪ್ರಯಾಣಿಕರ ನಿರೀಕ್ಷೆ, ಹಾಲಿ ಪ್ರಯಾಣಿಕರ ಸಂಖ್ಯೆ, ಇಳಿಕೆ ಕಾರಣಗಳ ಮಾಹಿತಿ ಇಲ್ಲಿದೆ.
ನೇರಳೆ ಮಾರ್ಗ ಸಂಪೂರ್ಣವಾಗಿ ತೆರೆದ ನಂತರ ಪ್ರತಿನಿತ್ಯ 7.5 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇತ್ತು. ಆದರೆ ಇಷ್ಟು ಸಂಖ್ಯೆಯ ಜನರು ಜನವರಿ 25ರಂದು ಒಮ್ಮೆ ಮಾತ್ರ (7.8 ಲಕ್ಷ) ಪ್ರಯಾಣ ಮಾಡಿದ್ದಾರೆ. ಇನ್ನು ಮಾರ್ಚ್ ತಿಂಗಳಲ್ಲಿ ಈವರೆಗೆ ಒಟ್ಟಾರೆ 1.76 ಕೋಟಿಯಷ್ಟು ಜನರು ಪ್ರಯಾಣಿಸಿದ್ದಾರೆ. ಅದರೆ ದೈನಂದಿನ ಪ್ರಯಾಣಿಕರ ಸಂಖ್ಯೆಯು 6.7 ಲಕ್ಷಕ್ಕೆ ಪ್ರಯಾಣಿಕರ ಸಂಖ್ಯೆ ಇಳಿಕೆ ಆಗಿದೆ.

ಪ್ರಯಾಣಿಕರ ಹೆಚ್ಚಳ ನಿರೀಕ್ಷೆ ಹುಸಿ
ಮಾರ್ಚ್ ತಿಂಗಳಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರ ಸಂಖ್ಯೆ 29 ಸಾವಿರದಷ್ಟು ಕುಸಿತವಾಗಿದೆ. ಈವರೆಗೆ ಒಮ್ಮೆ ಮಾತ್ರ ಮೆಟ್ರೋ ಪ್ರಯಾಣಿಕರ ಸಂಖ್ಯೆ 07 ಲಕ್ಷ ದಾಟಿದೆ. ಈ ಮೂಲಕ ನಮ್ಮ ಮೆಟ್ರೋ ಅಧಿಕಾರಿಗಳು ನಿರೀಕ್ಷೆ ತಲೆಕೆಳಗಾಗಿದೆ. ಮಾರ್ಚ್ ತಿಂಗಳಲ್ಲಿ ಪ್ರಯಾಣಿಕರ ಕುಸಿತದಿಂದ ಆದಾಯ ಇಳಿಕೆ ಆಗುವ ಆತಂಕ ಎದುರಾಗಿದೆ.
ಸಂಪರ್ಕ ಕೊಂಡಿಯಾಗಿದ್ದ 2 ಕಿಲೋ ಮೀಟರ್‌ನ ಬೈಯಪ್ಪನಹಳ್ಳಿ-ಕೆ.ಆರ್.ಪುರಂ ಜೋಡಣೆಯಾದ ಬಳಿಕ ಕಳೆದ ವರ್ಷ ಆಕ್ಟೋಬರ್ ತಿಂಗಳಲ್ಲಿ ಎರಡನೇ ವಾರ ಪೂರ್ಣ ನೇರಳೆ ಮಾರ್ಗದಲ್ಲಿ ಕಾರ್ಯಾಚರಣೆ ಶುರುವಾಯಿತು.

ನಂತರ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕ್ರಮವಾಗಿ 6.40 ಲಕ್ಷ, 6.64 ಲಕ್ಷ ಮತ್ತು ಡಿಸೆಂಬರ್ ನಲ್ಲಿ 6.88 ಪ್ರಯಾಣಿಕರು ಸಂಚರಿಸಿದ್ದಾರೆ. ಈ ವರ್ಷ ಜನವರಿಯಲ್ಲಿ 6.70 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡಿದ್ದಾರೆ.
ಪ್ರಯಾಣಿಕರ ಸಂಖ್ಯೆ ಇಳಿಕೆಗೆ ಕಾರಣಗಳು
ಸದ್ಯ ಮಾರ್ಚ್‌ನಲ್ಲಿ ಹಲವು ಕಾರಣಗಳಿಂದ ಮೆಟ್ರೋ ಪ್ರಯಾಣಿಕರ ದೈನಂದಿನ ಸಂಖ್ಯೆಯಲ್ಲಿ ಕುಸಿತವಾಗಿದೆ. ಇದಕ್ಕೆ ಹವಾಮಾನದಲ್ಲಿ ಉಂಟಾದ ಬದಲಾವಣೆ ಅಂದರೆ, ಸುಡುವ ಬಿಸಿನ ಪ್ರಭಾವದಿಂದ ಜನರು ಹೊರಗೆ ಬರಲು ನಿರಾಸಕ್ತಿ ತೋರಿರಬಹುದು.
ಬೆಂಗಳೂರಿನಲ್ಲಿ ಈ ಭಾರಿ ಉಷ್ಣಾಂಶ ಹೆಚ್ಚಾಗಿದೆ. ಮುಖ್ಯವಾಗಿ ನೀರಿನ ಸಮಸ್ಯೆ ಉದ್ಭವವಾಗಿದೆ. ಇದರಿಂದ ಐಟಿ ಕಂಪನಿಗಳಲ್ಲಿ ಕೆಲವು ಕಂಪನಿಗಳು ಅಥವಾ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲು ಆಸಕ್ತಿ ಹೊಂದಿದ್ದಾರೆ. ಅಲ್ಲದೇ ಇತ್ತೀಚೆಗೆ ಮೆಟ್ರೋ ಮಾರ್ಗದಲ್ಲಿ ಪದೇ ಪದೆ ಸಂಚಾರ ವ್ಯತ್ಯಯಗಳು ಕಂಡು ಬಂದಿವೆ. ಬೇಸಿಗೆ ರಜೆ ಶುರುವಾಗಿದೆ. ಹೀಗೆ ಕೆಲವು ಕಾರಣದಿಂದ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿನ ಓಡಾಟ ಇಳಿಕೆ ಆಗಿದೆ ಎನ್ನಲಾಗುತ್ತಿದೆ.
ನಮ್ಮ ಮೆಟ್ರೋ ಮಾಸಿಕ ಆದಾಯಕ್ಕೆ ಕತ್ತರಿ
ಮಾರ್ಚ್ ತಿಂಗಳಲ್ಲಿ ಇಳಿಕೆಯಾದ ಒಟ್ಟು ಸುಮಾರು 30 ಸಾವಿರ ಪ್ರಯಾಣಿಕರಿಗೆ ಸರಾಸರಿ 23 ರೂಪಾಯಿ ಎಂದರು ಅಂದಾಜು 70 ಸಾವಿರ ರೂಪಾಯಿ ನಷ್ಟವಾಗಲಿದೆ ಎಂದು ಬಿಎಂಆರ್‌ಸಿಎಲ್ ಊಹಿಸಿದೆ.
ನಮ್ಮ ಮೆಟ್ರೋದ ಹಳದಿ ಮಾರ್ಗ ಮುಂದಿನ ದಿನಗಳಲ್ಲಿ ತೆರೆಯಲಿದೆ. ಈ ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ಇದರೊಂದಿಗೆ ಹಲವೆಡೆ ಮಾರ್ಗ ವಿಸ್ತರಣೆ ಕಾರ್ಯವು ನಡೆದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ BMRCL ಅಧಿಕಾರಿಗಳು ಕ್ಯೂಆರ್ ಕೋಡ್ ಟಿಕೆಟ್, ಕಾಯಿನ್, ಸ್ಮಾರ್ಟ್ ಕಾರ್ಡ್ ಹಾಗೂ ಅಗತ್ಯಕ್ಕೆ ತಕ್ಕಂತೆ ಪೇಪರ್ ಟಿಕೆಟ್ ಸಹ ನೀಡಲಾಗುತ್ತಿದೆ. ಇದೆಲ್ಲ ವ್ಯವಸ್ಥೆ ಇದ್ದರೂ ಪ್ರಯಾಣಿಕರಲ್ಲಿ ಕ್ರಮೇಣ ಇಳಿಕೆ ಆಗಿದೆ.
ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಿರುವ ಮತ್ತೊಂದು ಮೆಟ್ರೋ ಕಾರಿಡಾರ್ ಎಂದೆ ಅದು ನಮ್ಮ ಮೆಟ್ರೊ ಹಳದಿ ಮಾರ್ಗ. ಈ ಮಾರ್ಗದಲ್ಲಿ ಈಗಾಗಲೇ ಚೀನಾ ನಿರ್ಮಿತ ಮೆಟ್ರೋ ಪರೀಕ್ಷಾರ್ಥ ಸಂಚಾರ ಶುರುವಾಗಿದೆ. ಈ ವರ್ಷದಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವ ಏಕೈಕ ಮಾರ್ಗ ಇದಾಗಿದ್ದು, ಆರಂಭವಾದ ಬಳಿಕ ಲಕ್ಷಾಂತರ ಪ್ರಯಾಣಿಕರು ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications