• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಾ ಚಾಟ್ಸ್ ಮಸಾಲೆ ಪುರಿ, ಬೇಲ್ ಪುರಿ; ಏನು ತಿಂದರೂ ಸೂಪರ್ ರೀ!

By ಅನಿಲ್ ಆಚಾರ್
|

ಮಳೆಗಾಲವೋ- ಚಳಿಗಾಲವೋ ಮರೆತು ಹೋಗಿದ್ದೀನಿ; ಆದರೆ ಆ ದಿನ ಗರಿಗರಿಯಾದ ಪುರಿ ಬಳಸಿದ ಮಸಾಲೆ ಪುರಿ ತಿನ್ನಬೇಕು ಅನ್ನಿಸಿತು. ಪಾರ್ಕಿಂಗ್ ಗೆ ಸಮಸ್ಯೆ ಆಗಬಾರದು, ಮುಖ್ಯರಸ್ತೆಯಲ್ಲೇ ಚಾಟ್ಸ್ ಅಂಗಡಿ ಇರಬೇಕು. ಇವೆಲ್ಲದರ ಜತೆಗೆ ರುಚಿ- ಶುಚಿಯಾಗಿ ಇರಬೇಕು ಎಂದು ಮನಸ್ಸಿನಲ್ಲಿ ಒಂದು ಪಟ್ಟಿ ಸಿದ್ಧವಾಗಿತ್ತು. ಆಗಲೇ ಸಂಜೆ ನಾಲ್ಕು ಮೂವತ್ತರ ಸಮಯ.

ಒಬ್ಬ ತಿಂಡಿಪೋತ ಗೆಳೆಯನಿಗೆ ಫೋನಾಯಿಸಿ, ಮಿತ್ರಾ, ಇಂಥದ್ದೊಂದು ತುರ್ತಿದೆ. ನಿನ್ನ ಮಾರ್ಗದರ್ಶನ ಬೇಕಿದೆ ಎಂದು ಕೇಳಿಕೊಂಡೆ. ನಾನು ಕೇಳಿಕೊಂಡಿದ್ದು ಏನೇನೂ ಅಲ್ಲ ಅನ್ನೋ ಹಾಗೆ ಮೊದಲ ಆಯ್ಕೆಗೆ ಅವನು ಹೇಳಿದ್ದು ಹನುಮಂತನಗರ ಐವತ್ತಡಿ ರಸ್ತೆಯಲ್ಲಿ ಇರುವ ಶಿವಾ ಚಾಟ್ಸ್ ಬಗ್ಗೆ.

ತೇಜಸ್ವಿ ಸೂರ್ಯ ಅಭ್ಯರ್ಥಿ ಆದ ಮೇಲೆ ಪಾನಿಪೂರಿ ಕುಮಾರ್ ಫೇಮಸ್ತೇಜಸ್ವಿ ಸೂರ್ಯ ಅಭ್ಯರ್ಥಿ ಆದ ಮೇಲೆ ಪಾನಿಪೂರಿ ಕುಮಾರ್ ಫೇಮಸ್

ದಶಕಗಳಿಂದ ಮಾಡಿಕೊಂಡು ಬರುತ್ತಿರುವ ವೃತ್ತಿಗೆ, ದೊಡ್ಡ ಮಟ್ಟದ ಅಂಗಡಿ ಸ್ವರೂಪ ನೀಡಿ ಕೆಲವೇ ವರ್ಷಗಳಾಗಿವೆ. ಪಾರ್ಕಿಂಗ್ ಗೆ ಸಮಸ್ಯೆ ಇಲ್ಲ. ಒನ್ ವೇ ರಸ್ತೆ. ಆದ್ದರಿಂದ ನಿರ್ಮಲಾ ಸ್ಟೋರ್ಸ್ ಬಸ್ ಸ್ಟಾಪ್ ನಂತರ ಬಲಕ್ಕೆ ನೋಡುತ್ತಾ ಬಂದರೆ ದೊಡ್ಡದಾಗಿ ಅಂಗಡಿ ಕಾಣುತ್ತದೆ.

ಮೊದಲಿಗೆ ತಿನ್ನುವುದು ಯಾವುದು?

ಮೊದಲಿಗೆ ತಿನ್ನುವುದು ಯಾವುದು?

ವಾರದ ಕೆಲವು ದಿನಗಳಲ್ಲಿ ವಿಪರೀತ ರಷ್ ಇದ್ದರೂ ಕೊಂಡು ಕೊಳ್ಳಲಾಗದಷ್ಟು ಸಮಸ್ಯೆ ಏನೂ ಆಗಲ್ಲ. ಆದರೆ ಮೊದಲಿಗೆ ತಿನ್ನುವುದು ಯಾವುದು? ನಾನು ಏನು ಮಾಡಿದೆ ಎಂಬುದನ್ನು ನಿಮಗೆ ಹೇಳಿಬಿಡ್ತೀನಿ. ಮಸಾಲೆಪುರಿ ಹೇಳಿದೆ. ವಾಹ್! ಗರಿ ಗರಿಯಾದ ಪುರಿ, ಬಟಾಣಿಗೆ ಅದೆಷ್ಟು ಹದವಾದ ಮಸಾಲೆ, ಖಾರ- ಹುಳಿ- ಉಪ್ಪು- ಸಿಹಿ ಇಂತಿಷ್ಟೇ ಎಂದು ಅಳತೆ ಒಂಚೂರು ಆಚೀಚೆ ಆಗದೆ ಅಂಥ ರುಚಿಯಾಗಿತ್ತು ನಾಲಗೆಗೆ. ನಂತರದ ಸರದಿ ಪಾನಿಪುರಿಯದು. ಗುಂಡನೆಯ ಪುರಿಗಳಿಗೆ ಹೊಟ್ಟೆ ತೂತಾದಂತೆ ಸಾಲಾಗಿ ಪ್ಲೇಟ್ ನ ಮೇಲೆ ನಿಲ್ಲಿಸಿ, ಪಕ್ಕದಲ್ಲಿ ಮೂರು ಬಟ್ಟಲಲ್ಲಿ ಒಂದರಲ್ಲಿ ಬಟಾಣಿ- ಸಣ್ಣಗೆ ಹೆಚ್ಚಿದ ಈರುಳ್ಳಿ, ಮಸಾಲೆ ಹಾಗೂ ಇನ್ನೊಂದರಲ್ಲಿ ಪಾನಿ ಹಾಕಿ ಕೊಡಲಾಯಿತು. ಪಾನಿಗೆ ನಾನಾಗಿಯೇ ಸಿಹಿ ಹಾಕಿಸಿಕೊಂಡೆ. ಆದರೆ ಅಲ್ಲಿದ್ದವರ ಪೈಕಿ ಬಹುತೇಕರು ಸಿಹಿ ಹಾಕಿಸಿಕೊಳ್ಳುತ್ತಿರಲಿಲ್ಲ.

ಕೆಲವು ಸೆಕೆಂಡ್ ಗಳಲ್ಲಿ ಸಿದ್ಧವಾಗಿ ಬಂದಿತು

ಕೆಲವು ಸೆಕೆಂಡ್ ಗಳಲ್ಲಿ ಸಿದ್ಧವಾಗಿ ಬಂದಿತು

ಮತ್ತೂ ಕೆಲವರು ಪಾನಿಪುರಿಯನ್ನು ರೆಡಿ ಮಾಡಿಕೊಡುವುದನ್ನೇ ಇಷ್ಟಪಡುತ್ತಿದ್ದರು. ಅಲ್ಲಿಗೆ ಒಂದು ಹಂತಕ್ಕೆ ಬಯಕೆ ತೋಟದ ಬೇಲಿಯಾಚೆಗೆ ಹಾರುತ್ತಿದ್ದ ಮನಸ್ಸು ಒಂದು ತಹಬದಿಗೆ ಬಂದಿತ್ತು. ಜತೆಯಲ್ಲಿದ್ದವರನ್ನು ಒಪ್ಪಿಸಿ, ಬೈಟು ಬೇಲ್ ಪುರಿ ಅಂತ ಹೇಳಿದೆ. ಕೆಲವೇ ಕೆಲವು ಸೆಕೆಂಡ್ ಗಳಲ್ಲಿ ಸಿದ್ಧವಾಗಿ ಬಂದಿತು. ಮಸಾಲೆ ಪುರಿ, ಪಾನಿ ಪುರಿ ಇವೆರಡರ ರುಚಿಯ ತೂಕ ಒಂದಾದರೆ ಬೇಲ್ ಪುರಿ ವಾಹ್, ಅದ್ಭುತವಾಗಿತ್ತು. ಅದು ಮತ್ತೊಂದು ತೂಕ. ಅದಕ್ಕೆ ಸ್ವಲ್ಪ ಬಟಾಣಿ, ಇಷ್ಟೇ ಇಷ್ಟು ಮಸಾಲೆಯನ್ನು ಹಾಕಿಸಿಕೊಂಡು ತಿಂದಾಯಿತು. ಸ್ವಲ್ಪ ಹೊತ್ತಿಗೇ ಈ ಚಾಟ್ಸ್ ಬಗ್ಗೆ ಹೇಳಿದ ಗೆಳೆಯನಿಗೆ ಫೋನ್ ಮಾಡಿ, ಮನಸಾರೆ ಧನ್ಯವಾದ ಹೇಳಿದೆ.

ಹನುಮಂತನಗರದ 50 ಅಡಿ ರಸ್ತೆಯಲ್ಲಿ ಇದೆ

ಹನುಮಂತನಗರದ 50 ಅಡಿ ರಸ್ತೆಯಲ್ಲಿ ಇದೆ

ಸರಿ, ಏನೇನು ತಿಂದೆ ಹೇಳು ಎಂದ ಆತ. ಮಸಾಲೆ, ಪಾನಿ, ಬೇಲ್ ಪುರಿ ಎಂದೆ. "ಇಲ್ಲ ಇಲ್ಲ, ಸೇವ್- ಆಲೂ ಪುರಿ ತಿನ್ನಲೇ ಬೇಕು. ಇಲ್ಲದಿದ್ದರೆ ನಿನ್ನದೆಂಥ ಬದುಕು?" ಎನ್ನುವಂತಿತ್ತು ಅವನ ಧ್ವನಿ. ಇನ್ನೊಮ್ಮೆ, ಮಗದೊಮ್ಮೆ ಇಲ್ಲಿಗೇ ಬರಬೇಕು ಅಂದುಕೊಂಡು ಇದ್ದೀನಿ. ಆಗ ತೆಗೆದುಕೊಳ್ತೀನಿ. ಈಗ ಸಾಕು ಗುರುವೇ ಎಂದವನೇ ಅಲ್ಲಿಂದ ಹೊರಟೆ. ಅಪರೂಪಕ್ಕೆ ಬಾಯಿ ರುಚಿ ತಣಿಸುವುದಕ್ಕೆ, ಶುಚಿಯಾದದ್ದನ್ನು ತಿನ್ನಬೇಕು ಅನ್ನಿಸಿದರೆ ಒಮ್ಮೆ ಇಲ್ಲಿ ಪ್ರಯತ್ನಿಸಬಹುದು. ಅಡ್ರೆಸ್ ಹುಡುಕುವುದು ಕೂಡ ಕಷ್ಟ ಅಲ್ಲ. ಹನುಮಂತ ನಗರ ಫಿಫ್ಟಿ ಫೀಟ್ ಮೇನ್ ರೋಡ್. ನಿರ್ಮಲಾ ಸ್ಟೋರ್ಸ್ ಬಸ್ ಸ್ಟಾಪ್ ಆದ ತಕ್ಷಣ ಬಲಕ್ಕೇ ಕಾಣಿಸುತ್ತದೆ.

ನಿಮ್ಮ ಅನುಭವವನ್ನು ಕೂಡ ಹಂಚಿಕೊಳ್ಳಿ

ನಿಮ್ಮ ಅನುಭವವನ್ನು ಕೂಡ ಹಂಚಿಕೊಳ್ಳಿ

ಇನ್ನು ವಾರದಲ್ಲಿ ಏಳು ದಿನವೂ ಸಂಜೆ ಹೊತ್ತು ತೆರೆದಿರುತ್ತದೆ. ಇಪ್ಪತ್ತೈದು, ಮೂವತ್ತು ರುಪಾಯಿಯಂತೆ ಮಸಾಲೆ ಪುರಿ, ಪಾನಿ ಪುರಿ, ದಹಿ ಪುರಿ, ಬೇಲ್ ಪುರಿ, ಆಲೂ ಪುರಿ ಹೀಗೆ ಚಾಟ್ಸ್ ಸಿಗುತ್ತವೆ. ಮೇಲ್ಕಂಡ ಅನುಭವ ವೈಯಕ್ತಿಕವಾದುದು. ನಿಮ್ಮ ಜತೆಗೆ ಹಂಚಿಕೊಳ್ಳಬೇಕು ಅನ್ನೋ ಕಾರಣಕ್ಕೆ ಇಷ್ಟೆಲ್ಲ ವಿವರಿಸಿದ್ದೀನಿ. ನೀವಿಗಾಗಲೇ ಅಲ್ಲಿಗೆ ಹೋಗಿ, ರುಚಿ ನೋಡಿದ್ದರೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ. ಒಂದು ವೇಳೆ ಇನ್ನೂ ಹೋಗಿಲ್ಲ ಅನ್ನುವುದಾದರೆ ಒಮ್ಮೆ ಟ್ರೈ ಕೊಟ್ಟು ನೋಡಬಹುದು. ಆ ನಂತರ ಕೂಡ ಹೇಗಿತ್ತು ಎಂಬುದರ ಅನುಭವವನ್ನು ಒನ್ ಇಂಡಿಯಾ ಕನ್ನಡದ ಇತರ ಓದುಗರ ಜತೆಗೆ ಹಂಚಿಕೊಳ್ಳಿ.

English summary
Shiva Chats at Hanumanthanagar, 50 feet road, Bengaluru. Best place for chats like masala puri, pani puri, bhel puri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X