Bengaluru Weather: ಬೆಂಗಳೂರು ಹವಾಮಾನ ವರದಿ, ಮಳೆ ಮುನ್ಸೂಚನೆ

ಬೆಂಗಳೂರು, ಡಿಸೆಂಬರ್ 05: ಬೆಂಗಳೂರಿನಲ್ಲಿ ಮಳೆ ಅಬ್ಬರ ಕಡಿಮೆ ಆಯಿತು ಎನ್ನುವಷ್ಟರಲ್ಲಿ ಗುರುವಾರ ಬೆಳಗಿನ ಜಾವದಿಂದಲೇ ಜೋರು ಮಳೆ ಶುರುವಾಯಿತು. ಅಲ್ಲಲ್ಲಿ ಜಿಟಿ ಜಿಟಿ ಮಳೆ ಆಗಿದ್ದು, ಕೆಲವೇ ಮಳೆ ಅಬ್ಬರಿಸಿದೆ. ಚಂಡಮಾರುತ ಫೆಂಗಲ್ ತೀವ್ರತೆ ಸಂಪೂರ್ಣವಾಗಿ ತಗ್ಗಿಲ್ಲ. ನಗರಕ್ಕೆ ನಾಳೆ ಡಿಸೆಂಬರ್ 6ರಂದು ಮತ್ತು 8ರಂದು ಎರಡು ದಿನಗಳ ವ್ಯಾಪಕ ಮಳೆ ಆಗುವ ನಿರೀಕ್ಷೆ ಎಂದು ಭಾರತೀಯ ಹವಾಮಾನ ಇಲಾಖೆ ಇಂದಿನ ಮುನ್ಸೂಚನೆಯಲ್ಲಿ ತಿಳಿಸಿದೆ.

ಚಂಡಮಾರತದ ಪ್ರಭಾವದಿಂದಾಗಿ ಬೆಂಗಳೂರು ಇನ್ನೂ ಕೆಲವು ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಗೆ, ಕೆಲವು ಪ್ರದೇಶಗಳು ಜೋರು ಮಳೆಗೆ ಸಾಕ್ಷಿಯಾಗಲಿದೆ. ವಿಚಿತ್ರವೆಂದರೆ, ಬುಧವಾರ ನಗರದಲ್ಲಿ ಒಂದು ದಿನ ಬಿಸಿಲು ಬಿದ್ದಂತೆ ಡಿಸೆಂಬರ್ 7ರಂದು ಒಂದು ದಿನ ಅಧಿಕ ಬಿಸಿಲು ಕಂಡು ಬರಲಿದೆ.

Bengaluru will See Thundershower Rain Spell in Many Parts For Next 3 Day Weather Forecast

ಮುಂದಿನ ಮೂರು ದಿನಗಳ ಮಟ್ಟಿಗೆ ಮೊದಲ ದಿನ ಹಾಗೂ ಕೊನೆಯ ದಿನ ಧಾರಾಕಾರ ಮಳೆ ಆಗುವ ಸಂಭವವಿದ್ದು, ಮಧ್ಯದ ಒಂದು ದಿನ ವ್ಯಾಪಕ ಬಿಸಿಲಿನ ದರ್ಶನವಾಗಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಮಬ್ಬು ವಾತಾವರಣ ಸಹಿತ, ತುಸು ಚಳಿಯ ಅನುಭವವಾಗುತ್ತಿದೆ. ಇಂದು ಸಂಜೆ ಅತ್ಯಧಿಕ ಮಳೆ ಬರುವ ನಿರೀಕ್ಷೆ ಇದೆ. ಕಳೆದ 24ಗಂಟೆಗಳಲ್ಲಿ ನಗರದ ಅನೇಕ ಕಡೆಗಳಲ್ಲಿ ಸಾಧಾರಣ ಮಳೆ ದಾಖಲಾಗಿದೆ. ಮುಂದಿನ ಡಿಸೆಂಬರ್ 10ವರೆಗೆ ನಗರದಲ್ಲಿ ಸಾಧಾರಣ ಮಳೆ, ಚಳಿ ಮುಂದುವರಿಯಲಿದೆ.

ಬೆಂಗಳೂರಿನ ತಾಪಮಾನದಲ್ಲಿ ವ್ಯತ್ಯಾಸವಾಗುವುದು ಮುಂದುವರಿದಿದೆ. ಸದ್ಯ ಚಳಿಯು ಸಾಮಾನ್ಯ ಪ್ರಮಾಣದಲ್ಲಿದ್ದು, ಅದು ಡಿಸೆಂಬರ್ 10ರವರೆಗೆ ಮತ್ತಷ್ಟು ಹೆಚ್ಚಾಗುವ, ಕನಿಷ್ಠ ತಾಪಮಾನದಲ್ಲಿ ಇಳಿಕೆ ಆಗುವ ಸಾಧ್ಯತೆಗಳು ದಟ್ಟವಾಗಿದೆ. ಬಿಸಿಲು ಬೀಳುವ ದಿವಸ ಬೆಳಗ್ಗೆ, ರಾತ್ರಿ ಮಂಜಿನ ವಾತಾರಣವು ಇದೇ ವೇಳೆ ಕಂಡು ಬರಲಿದೆ.

ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಬಿಸಿಲು ಸಹಿತ ಆಗಾಗ ಜೋರು ಮಳೆ ಬರಲಿದೆ. ಚಳಿ ಕೊಂಚ ಹೆಚ್ಚಾಗಲಿದೆ. ನಗರವಾಸಿಗಳಿಗೆ ಚಳಿ, ಮಳೆ, ಬಿಸಿಲಿನ ವಾತಾವರಣ ಒಟ್ಟೊಟ್ಟಿಗೆ ನೋಡಲಿದ್ದಾರೆ. ಕಳೆದ 24ಗಂಟೆಗಳಲ್ಲಿ ನಗರದಲ್ಲಿ ಸುರಿ ಮಳೆ ಪ್ರಮಾಣ ಎಷ್ಟು? ಇಲ್ಲಿದೆ ವರದಿ.

ನಗರದಲ್ಲಿ ವಿವಿಧೆಡೆ ಸುರಿದ ಮಳೆ ದಾಖಲಾತಿ

ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಸಿಂಗಸಂದ್ರ 2, ಬೇಗೂರು ಮತ್ತು ಲಕ್ಕಸಂದ್ರದಲ್ಲಿ ನಲ್ಲಿ ಅತ್ಯಧಿಕ ಮಳೆ ( ತಲಾ 23 ಮಿ.ಮೀ.) ದಾಖಲಾಗಿದೆ. ಉಳಿದಂತೆ ಸಂಪಂಗಿರಾಮನಗರ 21.5, ಮಿ.ಮೀ, ಪಟ್ಟಾಭಿರಾಮನಗರ 21.5, ಮಿ.ಮೀ, ಲಾಲ್ ಬಾಗ್ 21.5, ಮಿ.ಮೀ, ವಿವಿಪುರಂ 21.5, ಮಿ.ಮೀ, ದೊರೆಸಾನಿಪಾಳ್ಯ 21 ಮಿ.ಮೀ, ಸಾರಕ್ಕಿ 21 ಮಿ.ಮೀ, ಕುಮಾರಸ್ವಾಮಿ ಬಡಾವಣೆ 19 ಮಿ.ಮೀ, ಬಸನವಗುಡಿ 19 ಮಿ.ಮೀ, ವಿದ್ಯಾಪೀಠ 19 ಮಿ.ಮೀ, ಅರಕೆರೆ 18.5 ಮಿ.ಮೀ, ರಾಜರಾಜೇಶ್ವರಿ ನಗರ 17ಮಿ.ಮೀ, ಬಿಟಿಎಂ ಬಡಾವಣೆ 17 ಮಿ.ಮೀ. ಮಳೆ ಬಿದ್ದಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.

ರಾಜ್ಯದ ವಿವಿಧ ಕಡೆಗಳಲ್ಲೂ ಮುಂದಿನ ಮೂರು ದಿನ ಮಳೆ ಬರುವ ಸಾಧ್ಯತೆಗಳು ಇವೆ. ಅದರಲ್ಲೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಆಗುವ ನಿರೀಕ್ಷೆಗಳು ಇವೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+