Rain Alert: ಬೆಂಗಳೂರಿನಾದ್ಯಂತ ವರುಣಾರ್ಭಟ: ಮೇ 29ರವರೆಗೆ ಹವಾಮಾನ ವರದಿ, ಮುನ್ಸೂಚನೆ

ಬೆಂಗಳೂರು, ಮೇ 21: ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಮಳೆರಾಯ ಕೊಂಚ ಬೀಡುವ ನೀಡಿದಂತೆ ಕಾಣಿಸುತ್ತದೆ. ನೆನ್ನೆಗಿಂತ ಇಂದು ನಗರದಲ್ಲಿ ಕೊಂಚ ಮಳೆ ಕಡಿಮೆ ಆಗಿದ್ದು, ಸಂಜೆ ಹೊತ್ತಿಗೆ ಮತ್ತೆ ಸುರಿಯವು ಆತಂಕವು ಇದೆ. ಬುಧವಾರ ಬೆಳಗ್ಗೆ ನಗರ ವ್ಯಾಪ್ತಿಯಲ್ಲಿ 14.1 ಮಿಲಿ ಮೀಟರ್ ಮಳೆ ದಾಖಲಾಗಿದೆ. ಈ ಮಹಾ ಮಳೆ ಮುಂದಿನ ಮೇ 26ರವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಭಾಗದಲ್ಲಿ ವೈಪರೀತ್ಯ (ಚಂಡಮಾರುತ ಪ್ರಸರಣ) ಉಂಟಾಗಿದೆ. ಆದರೆ ಇದು ಸ್ಪಷ್ಟ ಚಂಡಮಾರುತವಾಗಿ ಬದಲಾಗಿಲ್ಲ. ಬರೀ ಬಿರುಗಾಳಿ ರೂಪದ ವೈಪರೀತ್ಯವಾಗಿದೆ. ಇದರ ಪ್ರಭಾವದಿಂದ ತಮಿಳುನಾಡು, ಕರ್ನಾಟಕ ಸೇರಿದಂತೆ ವಿವಿಧ ನಗರಗಳಲ್ಲಿ ಮಳೆ ಆಗುತ್ತಿದೆ.

Bengaluru Will See Heavy Rain until May 29th Today Weather Forecast

ಉದ್ಯಾನ ನಗರಿಯಲ್ಲಿ ಮೇ 26ರವರೆಗೆ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ. ಭಾರೀ ಮಳೆ ಪ್ರಯುಕ್ತ ಇಂದ ಬೆಂಗಳೂರಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ತಾಪಮಾನ ಸಂಪೂರ್ಣ ಇಳಿಕೆ ಆಗಿದೆ. ಗರಿಷ್ಠ ತಾಪಮಾನ 32 ರಿಂದ ಬುಧವಾರಕ್ಕೆ 27-28 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿದೆ. ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತದೆ.

ಇಂದು ನಗರಾದ್ಯಂತ ವಿವಿಧೆಡೆ ಮಳೆ

ಇಂದು ಬೆಂಗಳೂರಿನ ವಿವಿಧ ಕಡೆಗಳಲ್ಲಿ ತುಂತುರು ಮಳೆ ದಾಖಲಾಗಿದೆ. ಈ ಪೈಕಿ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ ನಲ್ಲಿ 4.8 ಮಿಲಿ ಮೀಟರ್, ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್ 5.6 ಮಿಲಿ ಮೀಟರ್ ದಾಖಲಾಗಿದೆ. ಉಳಿದಂತೆ ಕೋರಮಂಗಲ, ಹೆಬ್ಬಾಳ, ಮೆಜೆಸ್ಟಿಕ್, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗುರ ಮಳೆ ಆಗಿದೆ. ಇಂದು ಸಂಜೆ ಇಲ್ಲವೇ ರಾತ್ರಿ ಮತ್ತಷ್ಟು ಜೋರು ಮಳೆ ಆಗುವ ಮುನ್ಸೂಚನೆ ಇದೆ.

ಬೆಂಗಳೂರಿನಾದ್ಯಂತ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ಈ ತಿಂಗಳು ಪೂರ್ತಿ ಮಳೆ ಆವರಿಸಲಿದ್ದು, ನಂತರ ಪೂರ್ವ ಮುಂಗಾರು ಮಳೆ ನಗರ ಆವರಿಸಲಿದೆ. ಕಳೆದ ಮೂರು ದಿನಗಳಿಂದ ಬಂದ ಮಳೆಗೆ ಬೆಂಗಳೂರಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಸಂಚಾರ ಸಮಸ್ಯೆ, ರಸ್ತೆಗಳು ಜಲಾವೃತ, ಜನ ಜೀವನ ಅಸ್ತವ್ಯಸ್ತವಾಗಿದೆ. ಪರಿಹಾರ ಕಾರ್ಯ ನಡೆಯುತ್ತಿದ್ದು, ಜನರ ಜೀವನ ಸಹಜ ಸ್ಥಿತಿಗೆ ಬರಲು ಇನ್ನು ಕೆಲವು ದಿನಗಳ ಸಮಯ ಬೇಕಾಗಬಹುದು.

ರೆಡ್ ಅಲರ್ಟ್‌ ಘೋಷಣೆ

ಬೆಂಗಳೂರಿನ ಜೊತೆಗೆ ಮುಂದಿನ ಐದು ದಿನಗಳ ಕಾಲ ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಸಾಧಾರಣದಿಂದ ಭಾರೀ ಮಳೆ ಆಗುವ ಲಕ್ಷಣಗಳು ಇವೆ. ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆ ''ರೆಡ್ ಅಲರ್ಟ್'' ನೀಡಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೋಡಲಾಗಿದೆ. ಕರಾವಳಿ ಭಾಗದಲ್ಲಿ ಗಾಳಿ ಬೀಸುವಿಕೆ ಪ್ರಮಾಣ ಪ್ರತಿ ಗಂಟೆಗೆ 50 ಕಿ.ಮೀ. ಮೀರಲಿದೆ. ಹೀಗಾಗಿ ಹೈ ಅಲರ್ಟ್ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+