ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 9 ಕಡೆ ನೆಲಮಟ್ಟದ ಹೆಲಿಪ್ಯಾಡ್ ನಿರ್ಮಾಣ

|
Google Oneindia Kannada News

ಬೆಂಗಳೂರು, ಫೆಬ್ರವರಿ 16 : ಉದ್ಯಾನ ನಗರಿಯ 9 ಕಡೆಗಳಲ್ಲಿ ನೆಲಮಟ್ಟದ ಹೆಲಿಪ್ಯಾಡ್ ನಿರ್ಮಿಸಲು ಬಿಬಿಎಂಪಿ ಮುಂದಾಗಿದೆ. ಮೇಯರ್ ಸಂಪತ್ ರಾಜ್ ಅವರು ಈ ಹೊಸ ಯೋಜನೆಗೆ ಕೈಹಾಕಿದ್ದಾರೆ.

ಫೆಬ್ರವರಿ 23 ರಂದು ಮಂಡನೆಯಾಗಲಿರುವ ಬಿಬಿಎಂಪಿ ಬಜೆಟ್ ನಲ್ಲಿ ಉಳಿದೆಲ್ಲಾ ಯೋಜನೆಗಳ ಜತೆಗೆ ನೆಲಮಟ್ಟದಲ್ಲಿ ಹೆಲಿಪ್ಯಾಡ್ ಗಳ ನಿರ್ಮಾಣಕ್ಕೆ ಹಣ ಮೀಸಲಿಡಲು ಮೇಯರ್ ಮುಂದಾಗಿದ್ದು, ಈಗಾಗಲೇ ಜಾಗ ಗುರುತಿಸಿ ಕೆಲಸ ಪ್ರಾರಂಭಿಸಲಾಗಿದೆ. ಹೆಲಿಪ್ಯಾಡ್ ನಿರ್ಮಾಣಕ್ಕೆ ಪಾಲಿಕೆ ಕೌನ್ಸಿಲ್ ಸಭೆಯಲ್ಲೂ ನಿರ್ಣಯ ಕೈಗೊಳ್ಳಲಾಗಿದೆ.

ಫೆಬ್ರವರಿ ಅಂತ್ಯದಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಹಾರಾಟ ಆರಂಭಫೆಬ್ರವರಿ ಅಂತ್ಯದಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಹಾರಾಟ ಆರಂಭ

Bengaluru will get 9 helipod shortly

ರಾಜಧಾನಿಯಲ್ಲಿ ಈಗಾಗಲೇ ದೊಡ್ಡದೊಡ್ಡ ಕಟ್ಟಡಗಳ ಮೇಲೆಲ್ಲಾ ಹೆಲಿಪ್ಯಾಡ್​ಗಳಿದ್ದು, ಅವುಗಳ ಬಳಕೆಯೇ ಸಾಧ್ಯವಾಗುತ್ತಿಲ್ಲ. ಈಗ ಪಾಲಿಕೆ ಒಡೆತನದಲ್ಲಿ ಇಲ್ಲದ ಹೆಲಿ ಆಂಬ್ಯುಲೆನ್ಸ್​ಗಳ ಬಳಕೆಗಾಗಿ ಹೆಲಿಪ್ಯಾಡ್​ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಒಂದು ಹೆಲಿಪ್ಯಾಡ್ ಖರ್ಚು ಅಂದಾಜು 25 ಲಕ್ಷವಾಗಲಿದೆ. ಜೊತೆಗೆ ಜಾಗವೂ ಬೇಕಿದೆ. ಇಂದಿರಾ ಕ್ಯಾಂಟೀನ್ ನಿರ್ಮಾಣದ ಜಾಗಕ್ಕಾಗಿ ಪಾಲಿಕೆ ಪರದಾಡಿತ್ತು. ಇದೀಗ ಹೆಲಿಪ್ಯಾಡ್ ಗೆ ಎಲ್ಲಿಂದ ಜಾಗ ಒದಗಿಸುತ್ತದೆ ಎಂದು ಕಾದುನೋಡಬೇಕಿದೆ.

English summary
BBMP will get 9 Helipod shortly. BBMP mayor Sampathraj will allocate money for this project in upcoming BBMP budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X