Bengaluru: ವ್ಹೀಲಿಂಗ್ ಪ್ರಕರಣ: ಮಹಿಳೆಗೆ ಬಿತ್ತು ಬರೋಬ್ಬರಿ 25 ಸಾವಿರ ರೂ.ದಂಡ

ಬೆಂಗಳೂರು, ನವೆಂಬರ್ 17: ಸಿಲಿಕಾನ್ ಸಿಟಿಯಲ್ಲಿ ಆಗಾಗ ಯುವಕರು ವ್ಹೀಲಿಂಗ್ ಮಾಡಿ ನಿಯಮ ಉಲ್ಲಂಘಿಸವುದು ಮಾಮೂಲಿ. ಅದೇ ರೀತಿ ಇತ್ತೀಚೆಗೆ ವ್ಹೀಲಿಂಗ್ ಮಾಡಿದ ಪ್ರಕರಣಕ್ಕೆ ಸಂಧಿಸಿದಂತೆ ಮಹಿಳೆಯೊಬ್ಬರು ಭಾರೀ ಮೊತ್ತದ ದಂಡವನ್ನು ತೆತ್ತಿದ್ದಾರೆ.

ಹೌದು, ಪಶ್ಚಿಮ ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ವಾಹನ ವ್ಹೀಲಿಂಗ್ ಮಾಡಲು ಬಳಕೆ ಆಗಿತ್ತು. ಈ ಸಂಬಂಧ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದ ಪೊಲೀಸರು ಆತನಿಂದಲೂ ದಂಡ ವಸೂಲಿ ಮಾಡಿದ್ದರು. ವಾಹನ ಮಾಲೀಕರಾದ ಮಹಿಳೆಗೆ ಬರೊಬ್ಬರಿ 25,200 ರೂಪಾಯಿ ದಂಡ ಕಟ್ಟಿದ್ದಾರೆ.

Bengaluru Wheeling Case: 25,200 Fine Imposed on Women of Bike Woner

ಇದೇ ವರ್ಷ ಜನವರಿಯಲ್ಲಿ ನಗರದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ತಮ್ಮ ಮಿತಿಯಲ್ಲಿ ವ್ಹೀಲಿಂಗ್ ಮಾಡಿದ ಪ್ರಕರಣಕ್ಕೆ ಸಂಬಂದಪಟ್ಟಂತೆ ಅಪ್ರಾಪ್ತ ಸವಾರರನ್ನು ಬಂಧಿಸಿದ್ದರು. ಹುಡುಗ ತನ್ನ ನೆರೆಹೊರೆಯವರ ಹೆಸರಿನಲ್ಲಿ ನೋಂದಾಯಿಸಿದ ಸ್ಕೂಟರ್ ವ್ಹೀಲಿಂಗ್‌ಗೆ ಬಳಸಿದ್ದಾನೆ ಎಂಬುದು ತಿಳಿದು ಬಂದಿತ್ತು.

ವ್ಹೀಲಿಂಗ್ ಮಾಡಿದ ಅಪ್ರಾಪ್ತನಿಗೂ ದಂಡ

ಈ ಅಪ್ರಾಪ್ತ ವಯಸ್ಕನು ಸಿಕ್ಕಿಬಿದ್ದ ತಕ್ಷಣ ಮಾಡಿದ ತಪ್ಪಿಗೆ ಜೆಜೆ (ಬಾಲಾಪರಾಧಿ) ಮಂಡಳಿಯ ಅಡಿಯಲ್ಲಿ ರೂ 1,500 ದಂಡವನ್ನು ಪಾವತಿಸಿದ. ಅಪ್ರಾಪ್ತರು ವಾಹನ ಸವಾರಿ ಮಾಡಿದರೆ ಮಾಲೀಕರನ್ನು ಜವಾಬ್ದಾರಿ ಮಾಡುವ ನಿಯಮ ಇದೆ. ಅದರ ಅಡಿ ವಾಹನದ ಮಾಲೀಕರಾದ ಮಂಜುಳಾ ಎಂ ಅವರಿಗೆ ದಂಡ ವಿಧಿಸಲಾಗಿತ್ತು.

ಆದರೆ ಅವರು ಈವರೆಗೂ ಪಾವತಿಸಿರಲಿಲ್ಲ. ಹೀಗಾಗಿ ಅವರ ವಿರುದ್ಧ ಪ್ರಕರಣ ನ್ಯಾಯಾಲದ ಮೆಟ್ಟಿಲೇರಿತ್ತು. ಅಲ್ಲಿ ಅಂತಿಮವಾಗಿ ಅವರ ತಪ್ಪು ಸಾಬೀತಾಗಿ ಅವರಿಗೆ 25,200 ರೂಪಾಯಿ ದಂಡ ಪಾವತಿಗೆ ಸೂಚಿಸಲಾಯಿತು. ಅವರು ಗುರುವಾರ ಹಣ ಪಾವತಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕರು ಬೇರೊಬ್ಬರ ವಾಹನವನ್ನು ಬಳಸಿ ಸಾಹಸ ಪ್ರದರ್ಶಿಸಿದ್ದು, ಇದು ಮೂರನೇ ಪ್ರಕರಣವಾಗಿದೆ. ವಶಪಡಿಸಿಕೊಂಡ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲು ಮಂಜುಳಾ ಅವರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ದಂಡ ಪಾವತಿ ಬಳಿಕ ಅವರಿಗೆ ವಾಹನ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+