Bengaluru temperature: ಇಂದು ಬುಧವಾರ ಅತ್ಯಧಿಕ ಗರಿಷ್ಠ ತಾಪಮಾನ ದಾಖಲು, ಐದು ವರ್ಷದ ದಾಖಲೆ ಬ್ರೇಕ್

ಬೆಂಗಳೂರು, ಮೇ 17: ರಾಜ್ಯ ರಾಜಧಾನಿ ಉದ್ಯಾನನಗರಿ ಬೆಂಗಳೂರಿಗರು ಕಳೆದ ಎರಡು ದಿನಗಳಿಂದ ಬಿಸಿಲಿನಿಂದ ತತ್ತರಿಸುತ್ತಿದ್ದಾರೆ. ಕಳೆದ ಐದು ವರ್ಷಗಳ ಇತಿಹಾಸದಲ್ಲಿಯೇ ಬುಧವಾರ ಬೆಳ್ಳಂಬೆಳಗ್ಗೆಯೇ ವಾಡಿಕೆಗಿಂತ ಅತ್ಯಧಿಕ ಗರಿಷ್ಠ ತಾಪಮಾನ ದಾಖಲಾಗಿದೆ. ಮೋಚಾ ಚಂಡಮಾರುತ ಪ್ರಭಾವದಿಂದ ಅತ್ಯಧಿಕ ಮಳೆ ನಿರೀಕ್ಷೆಯಲ್ಲಿದ್ದ ಜನರಿಗೆ ಬಿಸಿಲಿನ ಆಘಾತ ಎದುರಾಗಿದೆ.

ಮೋಚಾ ಚಂಡಮಾರುತ ಅಬ್ಬರದಿಂದ ಬೆಂಗಳೂರು ಒಳಗೊಂಡಂತೆ ದಕ್ಷಿಣ ಒಳನಾಡಿಗೆ ಭಾರಿ ಮಳೆ ಬರುತ್ತದೆ ಎನ್ನಲಾಗಿತ್ತು. ಆದರೆ ಆ ಮಾತಿಗೆ ವಿರುದ್ಧವೆಂಬಂತೆ ಇದೀಗ ಬಿರುಬಿಸಿಲು ನಗರವನ್ನು ಎಲ್ಲಿಲ್ಲದಂತೆ ಆವರಿಸಿದೆ. ಬುಧವಾರ ಬೆಳ್ಳಂಬೆಳಗ್ಗೆಯೇ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ನೆನ್ನೆ ಮಂಗಳವಾರ ಸಹ ಮಧ್ಯಾಹ್ನ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಬಿಸಿಲು ಕಂಡು ಬಂದಿತ್ತು.

Bengaluru Wednesday Recorded 35.4°C Heavy Temperature In Last Five Years History Weather

ಮೇ ತಿಂಗಳ 2018 ಅನ್ನು ಹೊರತುಪಡಿಸಿದರೆ ಅಲ್ಲಿಂದ 2023ರ ಐದು ವರ್ಷಗಳಲ್ಲಿ ಮೇ ತಿಂಗಳಲ್ಲೇ ಮತ್ತೆ ಗರಿಷ್ಠ ತಾಪಮಾನ ದಾಖಲಾಗಿದೆ. 2018 ಮೇ 01ರಂದೇ 35.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದಾದ ನಂತರ ಮತ್ತೆ 2023ರ ಮೇ ತಿಂಗಳಲ್ಲಿ ನೆನ್ನೆ ಮಂಗಳವಾರ ಮೇ 16 ಮತ್ತು ಇಂದು ಬುಧವಾರ ಮೇ 17ರಂದು ಎರಡು ಬಾರಿ ಅಧಿಕ ಉಷ್ಣಾಂಶ ಕಂಡು ಬಂದಿದೆ.

ಮೋಚಾ ಸೆಳೆತದಿಂದ ನಿರ್ಮಲ ಆಕಾಶ-ಬಿಸಿಲು ಏರಿಕೆ

ನಗರಾದ್ಯಂತ ಆವರಿಸಿದ ಬಿಸಿಲಿಗೆ ಜನ ತಂಪುಪಾನೀಯ, ಸನ್‌ಸ್ಕೀನ್, ಛತ್ರಿಗಳ ಮೊರೆ ಹೋಗಿದ್ದಾರೆ. ಕಚೇರಿಗೆ ತೆರಳುವವರು, ವ್ಯಾಪಾರಿಗಳು, ವಾಹನ ಸವಾರರು ಬಿಸಿಲಿಗೆ ಬಸವಳಿದ್ದಾರೆ. ಕಳೆದ ಮೇ 6ರಂದು ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತ ಸೃಷ್ಟಿಯಾಗಿತ್ತು. ಅಲ್ಲಿಂದಲೂ ಈವರೆಗೆ ಅದರ ಪ್ರಭಾವ ಹಲವು ನಿರ್ದಿಷ್ಟ ಪ್ರದೇಶಗಳಲ್ಲಿ ಕಂಡು ಬಂದಿದ್ದು, ಕೆಲವೆಡೆ ಸಾವು ಸಹ ಸಂಭವಿಸಿದೆ.

ಅದೇ ರೀತಿ ಬೆಂಗಳೂರು ಕರ್ನಾಟಕದಲ್ಲೂ ಭಾರಿ ಮಳೆ ಸಾಧ್ಯತೆ ಇತ್ತು ಎನ್ನಲಾಗಿತ್ತು. ಆದರೆ ಇದಕ್ಕೆ ವಿರುದ್ಧವೆಂಬಂತೆ ವೈಪರಿತ್ಯದ ಪ್ರದೇಶದಲ್ಲಿನ ಗಾಳಿ ಸೆಳೆತಯದಿಂದ ಮಳೆ ಸುರಿಸುವ ಮಾರುತಗಳು ಇಲ್ಲದಾಗಿ ಆಕಾಶ ನಿರ್ಮಲವಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಬಿಸಿಲು ಪ್ರಕಾಶಮಾನವಾಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

Bengaluru Wednesday Recorded 35.4°C Heavy Temperature In Last Five Years History Weather

ಬುಧವಾರದ ಹವಾಮಾನ ಇಲಾಖೆ ವರದಿ ಪ್ರಕಾರ, ಬೆಂಗಳೂರು ನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIAL) 35.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 34.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

2011ರಿಂದ ಮೇ ತಿಂಗಳ ಗರಿಷ್ಠ ತಾಪಮಾನ ದಾಖಲಾತಿ ವಿವರ

2011 ಮೇ 7ರಂದು 34.8 ಡಿಗ್ರಿ ಸೆಲ್ಸಿಯಸ್

2012 ಮೇ 22ರಂದು 35.2 ಡಿಗ್ರಿ ಸೆಲ್ಸಿಯಸ್

2013 ಮೇ 03ರಂದು 37.6 ಡಿಗ್ರಿ ಸೆಲ್ಸಿಯಸ್

2014 ಮೇ 14ರಂದು 36 ಡಿಗ್ರಿ ಸೆಲ್ಸಿಯಸ್

2015 ಮೇ 02ರಂದು 33.8 ಡಿಗ್ರಿ ಸೆಲ್ಸಿಯಸ್

2016 ಮೇ 02ರಂದು 37.3 ಡಿಗ್ರಿ ಸೆಲ್ಸಿಯಸ್

2017 ಮೇ 08ರಂದು 37 ಡಿಗ್ರಿ ಸೆಲ್ಸಿಯಸ್

2018 ಮೇ 01 ರಂದು 35.2 ಡಿಗ್ರಿ ಸೆಲ್ಸಿಯಸ್

2021 ಮೇ 10ರಂದು 34.4 ಡಿಗ್ರಿ ಸೆಲ್ಸಿಯಸ್

2022 ಮೇ 01ರಂದು 34.8 ಡಿಗ್ರಿ ಸೆಲ್ಸಿಯಸ್

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಲು ಹೇಗಿದೆ?

ಕಳೆದ 24 ಗಂಟೆಗಳಲ್ಲಿ (ಮೇ 16) ಕರ್ನಾಟಕದ ಕಲಬುರಗಿಯಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನುಳಿದಂತೆ ಕೊಪ್ಪಳ್ಳದಲ್ಲಿ ಮತ್ತು ರಾಯಚೂರು ವ್ಯಾಪ್ತಿಯಲ್ಲಿ ತಲಾ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡು ಬಂದಿದೆ. ಚಿಕ್ಕಮಗಳೂರಿನಲ್ಲಿ ರಾಜ್ಯ ಕನಿಷ್ಠ ತಾಪಮಾನ 16.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+