Bengaluru Weather: ಬೆಂಗಳೂರಿನಲ್ಲಿ 20 ವರ್ಷಗಳ ಬಳಿಕ ದಾಖಲೆ ಮಟ್ಟದ ತಾಪಮಾನ ದಾಖಲು; ನಗರದ ಜನತೆಗೆ ಪ್ರಮುಖ ಸೂಚನೆಗಳು

Bengaluru Weather: ಇಷ್ಟು ದಿನ ರಾಜ್ಯ ರಾಜಧನಿ ಬೆಂಗಳೂರಿನಲ್ಲಿ ಭೀಕರ ಚಳಿ ಮುಂದುವರೆದಿತ್ತು. ಇದೀಗ ರಣಬಿಸಿಲು ಮುಂದುವರೆದಿದೆ. ಈ ವರ್ಷದ ಫೆಬ್ರವರಿ 17, 2025ರಂದು 20 ವರ್ಷಗಳ ಬಳಿಕ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ತಾಪಮಾನ ದಾಖಲಾಗಿದೆ. ಹಾಗಾದರೆ ಸಂಪೂರ್ಣ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

2005ರ ಬಳಿಕ ಅಂದರೆ 20 ವರ್ಷಗಳ ಬಳಿಕ ಫೆಬ್ರವರಿ 17, 2025ರಂದು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅತೀ ಹೆಚ್ಚು 35.9°C ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.

Bengaluru Weather Highest temperature recorded in 20 years

ಅಚ್ಚರಿ ಘಟನೆಯೆಂದರೆ ಫೆಬ್ರವರಿ 17ರಂದು ಬೆಂಗಳೂರಿನಲ್ಲಿ ದೆಹಲಿಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಇದು ಬೆಂಗಳೂರಿನಲ್ಲಿ ಈ ವರ್ಷದ ಇಲ್ಲಿಯವರೆಗಿನ ಅತ್ಯಂತ ದಾಖಲೆಯ ತಾಪಮಾನವಾಗಿದೆ. ಇನ್ನು ನವದೆಹಲಿಯಲ್ಲಿ ಗರಿಷ್ಠ ತಾಪಮಾನ 27°C ಆಗಿದೆ. ಇದಕ್ಕೆ ಹೋಲಿಸಿದರೆ, ಬೆಂಗಳೂರಿನಲ್ಲೇ ಹೆಚ್ಚು ತಾಪಮಾನ ದಾಖಲಾಗಿದೆ. ಮತ್ತೊಂದೆಡೆ ಉತ್ತರ ಭಾರತದಲ್ಲಿ ದಿನದಿಂದ ದಿನಕ್ಕೆ ತಾಪಮಾನದ ಪ್ರಮಾನ ಹೆಚ್ಚಾಗುತ್ತಲೇ ಇದೆ.

ಹವಾಮಾನ ಇಲಾಖೆ ಪ್ರಕಾರ, ಮುಂದಿನ ಹಲವು ದಿನಗಳವರೆಗೆ ಬೆಂಗಳೂರಿನಲ್ಲಿ ಮುಂಜಾನೆ ವೇಳೆ ಮಂಜು ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ಧಗೆ ಹೆಚ್ಚಾಗಲಿದೆ ಎಂದು ತಿಳಿಸಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34°C ಮತ್ತು 18°C ದಾಖಲಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ಸಾಮಾನ್ಯವಾಗಿ ಬೇಸಿಗೆಯು ಮಾರ್ಚ್ ಆರಂಭದಲ್ಲಿ ಪ್ರಾರಂಭ ಆಗುತ್ತದೆ. ಆದರೆ ಈ ವರ್ಷ ಫೆಬ್ರವರಿ ಮಧ್ಯದಿಂದಲೇ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಫೆಬ್ರವರಿ 18ರಂದು ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 32.8°C ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 1.4°C ಹೆಚ್ಚಿತ್ತು. ಆದರೆ, ಕನಿಷ್ಠ ತಾಪಮಾನವು 17.8°Cಗೆ ಇಳಿಕೆಯಾಗಿದ್ದು, ಸಾಮಾನ್ಯಕ್ಕಿಂತ 0.1°Cನಷ್ಟು ಕಡಿಮೆಯಾಗಿತ್ತು ಎಂದು ತಿಳಿದುಬಂದಿದೆ.

ಹೀಗೆ ತಾಪಮಾನ ಹೆಚ್ಚುತ್ತಿದ್ದರೆ, ನಗರದಲ್ಲಿನ ಅಂತರ್ಜಲ ಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದನ್ನು ಗಮನಿಸಿದರೆ, ಬೇಸಿಗೆಯ ಮುಂಚೆಯೇ ಬಿಸಿಲು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿದೆ. ಈ ಹಿನ್ನೆಲೆ ಬಿಡಬ್ಲ್ಯೂಎಸ್ಎಸ್‌ಬಿ ನಗರದಾದ್ಯಂತ ಕುಡಿಯಲು ಯೋಗ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿದೆ.

ಒಂದು ವೇಳೆ ಈ ನಿಯಮ ಉಲ್ಲಂಘಿಸುವರಿಗೆ ₹5,000 ದಂಡ ವಿಧಿಸಲಾಗುತ್ತದೆ. ಮುಂಬರುವ ತಿಂಗಳಲ್ಲಿ ತಾಪಮಾನ ಹೆಚ್ಚಳದ ಮುನ್ಸೂಚನೆ ಹಿನ್ನೆಲೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+