Bengaluru: ದಶಕದಲ್ಲೇ 5ನೇ ಭಾರಿ ದಾಖಲೆ ತಾಪಮಾನ ದಾಖಲು: ಮುಂದಿನ 3ತಿಂಗಳ ಉಷ್ಣಾಂಶ: ಮಳೆ-ಹವಾಮಾನ ಮುನ್ಸೂಚನೆ ಕೊಟ್ಟ ತಜ್ಞರು

ಬೆಂಗಳೂರು, ಮಾರ್ಚ್ 05: ಉದ್ಯಾನನಗರಿ ಎಂದು ಹೆಸರುವಾಸಿಯಾಗಿರುವ ಐಟಿ ಕೇಂದ್ರ ಬೆಂಗಳೂರು ಬಿಸಿಲಿಗೆ ತತ್ತರಿಸುತ್ತಿದೆ. ದಿನೇ ದಿನೆ ತಾಪಮಾನವು ಏರತೊಡಗಿದೆ. ಬಿಸಿ ಗಾಳಿ (Heat Wave) ವಾತಾವರಣಕ್ಕೆ ಜನ ತತ್ತರಿಸುತ್ತಿದ್ದಾರೆ. ಇಂದು ಮಂಗಳವಾರ (ಮಾ.5) 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇಷ್ಟು ಪ್ರಮಾಣದ ತಾಪಮಾನ ಕಳೆದ ಒಂದು ದಶಕದಲ್ಲಿಯೇ ಮಾರ್ಚ್‌ ತಿಂಗಳಲ್ಲಿನ ಐದನೇ ಬಾರಿಗೆ ದಾಖಲಾದ ತಾಪಮಾನವಾಗಿದೆ.

ಬೆಂಗಳೂರಿನಲ್ಲಿ ಮಂಗಳವಾರ 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಇಷ್ಟು ಪ್ರಮಾಣದ ಗರಿಷ್ಠ ತಾಪಮಾನವು ಕಳೆದ 10 ವರ್ಷಗಳಲ್ಲಿ ಇದೇ ಐದನೇ ಬಾರಿಗೆ ದಾಖಲಾಗಿದೆ ಎಂದು ಬೆಂಗಳೂರು ಪ್ರಾದೇಶಿಕ ಕಚೇರಿ ವಿಜ್ಞಾನಿ ಮತ್ತು ಹವಾಮಾನ ತಜ್ಞ ಡಾ.ಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.

Bengaluru Weather Fifth Time Highest Temperature Recorded in Last 10 Years Know Rain Forecast

ಈ ಹಿಂದಿನ 10 ವರ್ಷಗಳಲ್ಲಿ ಮಾರ್ಚ್ ತಿಂಗಳಲ್ಲಿ ಸಾರ್ವತ್ರಿಕ ದಾಖಲೆ ತಾಪಮಾನ ಗರಿಷ್ಠ 37.2 ಡಿಗ್ರಿ ಸೆಲ್ಸಿಯಸ್. ಮಾರ್ಚ್ ಮೊದಲ ವಾರವೇ ಸಾರ್ವತ್ರಿಕ ದಾಖಲೆ ಸಮೀಪದಷ್ಟು ತಾಪಮಾನ (36) ದಾಖಲಾಗಿದೆ. ಇದು ವಾಡಿಕೆಗಿಂತ 2-3 ಡಿ.ಸೆ. ನಷ್ಟು ಹೆಚ್ಚಿನ ತಾಪಮಾನವಾಗಿದೆ.

ಬೆಂಗಳೂರಿನಲ್ಲಿ ಈ ಹಿಂದೆ 2013ರ ಮಾರ್ಚ್ 30ರಂದು ಗರಿಷ್ಠ 36.6 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ನಂತರ 2014ರ ಮಾರ್ಚ್ 31ರಂದು 36 ಡಿ.ಸೆ, 2020ರಲ್ಲಿ ಮಾರ್ಚ್ 31ರಂದು 36.1 ಡಿ.ಸೆ ಗರಿಷ್ಠ ತಾಪಮಾನ ದಾಖಲಾಗಿತ್ತು. ಇದರ ನಂತರ ಐದನೇ ಬಾರಿಗೆ ಅಂದರೆ ಇಂದು 2024ರ ಮಾರ್ಚ್ 5ರಂದು ಬೆಂಗಳೂರಿನ ಎರಡು ಕಡೆಗಳಲ್ಲಿ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಈ ತಾಪಮಾನದ ಬಿಸಿ ಇನ್ನು ಎರಡು ದಿನ ಮುಂದುವರಿಯಲಿದೆ. ಈ ವೇಳೆ ನಗರದ ತಾಪಮಾನ ಗರಿಷ್ಠ 34-35 ಡಿಗ್ರಿ ಸೆಲ್ಸಿಯಸ್ ವರೆಗೆ ಕಂಡು ಬರಬಹುದು. ಇದಕ್ಕಿಂತ ಹೆಚ್ಚಿನ ಉಷ್ಣಾಂಶದ ನಿರೀಕ್ಷೆ ಇಲ್ಲ. ಮುಂದಿನ ವಾರ ಬೆಂಗಳೂರು ತಾಪಮಾನ ಮತ್ತಷ್ಟು ಇಳಿಕೆ ಆಗಲಿದೆ ಎಂದು ಡಾ.ಪ್ರಸಾದ್ ಅವರು ಮುನ್ಸೂಚನೆ ನೀಡಿದ್ದಾರೆ.

Bengaluru Weather Fifth Time Highest Temperature Recorded in Last 10 Years Know Rain Forecast

03 ತಿಂಗಳ ಹವಾಮಾನ ಮುನ್ಸೂಚನೆ

ಬೆಂಗಳೂರಿನಲ್ಲಿ ಮುಂದಿನ ಮೂರು ತಿಂಗಳು ಅಂದರೆ ಮಾರ್ಚ್, ಏಪ್ರಿಲ್ ಮೇ ನಲ್ಲಿ ಸಾಮಾನ್ಯ ತಾಪಮಾನ ಕಂಡು ಬರಲಿದೆ. ಬೆಂಗಳೂರಿಗೆ ಮಾರ್ಚ್ ನಲ್ಲಿ 14,7 ಮಿಲಿ ಮೀಟರ್ ಮಳೆ ಆಗಬೇಕಿತ್ತು, ಆದರೆ ಆಗಿಲ್ಲ. ಕಳೆದ ವರ್ಷ ಇದೇ ತಿಂಗಳು 9 ಮಿಲಿ ಮೀಟರ್ ಮಳೆ ದಾಖಲಾಗಿತ್ತು.

ಇನ್ನೂ ಉತ್ತರ ಒಳನಾಡಿಗೆ ಮಾರ್ಚ್, ಏಪ್ರಿಲ್‌ ಮತ್ತು ಮೇ ಸೇರಿ ಮುಂದಿನ ಮೂರು ತಿಂಗಳು ಗರಿಷ್ಠ ವಾಡಿಕೆ ತಾಪಮಾನಕ್ಕಿಂತ 2ರಿಂದ 3ರಷ್ಟು ಡಿಗ್ರಿ ಸೆಲ್ಸಿಯಸ್‌ ನಷ್ಟು ಅಧಿಕ ತಾಪಮಾನವು ಆಗಾಗ ಕೆಲವು ದಿನಗಳಲ್ಲಿ ದಾಖಲಾಗುವ ಸಾಧ್ಯತೆ ಇದೆ. ಇಲ್ಲೆಲ್ಲ ಒಣ ಹವೆಯೇ ಮುಂದುವರಿಯಲಿದೆ. ಮಾರ್ಚ್ ಕೊನೆಯ ವಾರ ಕರ್ನಾಟಕಕ್ಕೆ ಮಳೆ ಆಗುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.

ಬೆಂಗಳೂರು ತಾಪಮಾನ ದಾಖಲಾತಿ

ಮಂಗಳವಾರ ಬೆಂಗಳೂರು ನಗರ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲಾ 36 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಎಚ್‌ಎಎಲ್ ವ್ಯಾಪ್ತಿಯಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ದೈನಂದಿನ ವರದಿ ಮಾಹಿತಿ ನೀಡಿದೆ.

ವಾತಾವರಣದ ವಿದ್ಯಮಾನಗಳ ಮಾಹಿತಿ

ಬಂಗಾಳಕೊಲ್ಲಿ ಅರಬ್ಬಿ ಸಮುದ್ರದಲ್ಲಿ ಆಗಲಿ, ಅರಬ್ಬಿ ಸಮುದ್ರವು ಶಾಂತವಾಗಿದೆ. ಸಮುದ್ರ ಮೇಲ್ಮೈ ಸುಳಿಗಾಳಿ, ಸ್ಟ್ರಫ್ ಮತ್ತಿತರ ಯಾವ ಹವಾಮಾನ ವೈಪರಿತ್ಯದಂತಹ ಬದಲಾವಣೆಗಳು ಸದ್ಯಕ್ಕೆ ಇಲ್ಲ. ನೀಲಿ ಆಕಾಶ, ಸ್ಪಷ್ಟ ಆಕಾಶ ಇರಲಿದ್ದು, ನಾಡಿನೆಲ್ಲಡೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಬಿಸಿ ಗಾಳಿಯ ವಾತಾವರಣ ಕಂಡು ಬರಲಿದೆ. ರಾಜ್ಯದ ಎಲ್ಲಿಯೂ ಮಳೆ ಆಗಿಲ್ಲ. ಬದಲಾಗಿ ಮಾರ್ಚ್ ಕೊನೆ ವಾರ ಮಳೆ ಬರುವ ನಿರೀಕ್ಷೆ ಇದೆ ಎಂದು ಡಾ.ಪ್ರಸಾದ್ ಅವರು ವಿವರಿಸಿದರು.

ಬೆಂಗಳೂರು ಸೇರಿದಂತೆ ಕರ್ನಾಟಕದ ಜನರು ಮುಂದಿನ ದಿನಗಳಲ್ಲಿ ಶಾಖದ ಅಲೆ ಎದುರಿಸಲು ಸಜ್ಜಾಗಬೇಕಿದೆ. ಮುಂದಿನ ಮಳೆಗಾಲ ವರೆಗೂ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+