Get Updates
Get notified of breaking news, exclusive insights, and must-see stories!

Bengaluru Water Issue: ಟ್ಯಾಂಕರ್ ಮಾಫಿಯಾದಲ್ಲಿ 'ಡಿಕೆಶಿ' ಪಾತ್ರ ಶಂಕೆ: ಎಎಪಿ

ಬೆಂಗಳೂರು, ಫೆಬ್ರವರಿ 28: ಬೆಂಗಳೂರು ಸೇರಿದಂತೆ ಕರ್ನಾಟಕದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಇದೇ ವೇಳೆ ಟ್ಯಾಂಕ್ ಮಾಫಿಯಾ ಸಹ ತಲೆ ಎತ್ತಿದೆ. ಈ ಮಾಫಿಯಾದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಪಾತ್ರದ ಬಗ್ಗೆ ಶಂಕೆ ಮೂಡುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ಗಂಭಿರ ಆರೋಪ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ, ಆಮ್ ಆದ್ಮಿ ಪಾರ್ಟಿ (ಎಎಪಿ) ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಅವರು, ಟ್ಯಾಂಕರ್ ಮಾಫಿಯಾದಲ್ಲಿ ಕಾರ್ಪೊರೇಟರ್‌ಗಳು, ಮಾಜಿ ಕಾರ್ಪೊರೇಟರ್‌ಗಳು, ಶಾಸಕರ ಸಂಬಂಧಿಗಳು ಮತ್ತು ಶಾಸಕರ ಹಿಂದೆ ಮುಂದೆ ತಿರುಗುವರೇ ಇದ್ದಾರೆ.

Bengaluru Water Crisis: AAP Alleged DK Shivakumar Role in Water Tanker Mafia, Know details

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದೆಲ್ಲವೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೂಗಿನ ನೇರಕ್ಕೆ ನಡೆಯುತ್ತಿದ್ದರೂ ಕಂಡೂಕಾಣದಂತಿರುವುದು ಅನುಮಾನ ಹುಟ್ಟಿಸುತ್ತಿದೆ. ಮಾಫಿಯಾದಲ್ಲಿ ಶಿವಕುಮಾರ್ ಪಾತ್ರದ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದರು.

ಕೇವಲ 108 ಬೋರ್ ವೆಲ್ ಇವೆ

ಕಾವೇರಿ ನೀರಿಗೆ ಪರ್ಯಾಯವಾಗಿ ಬೆಂಗಳೂರು ಜಲಮಂಡಳಿ (BWSSB) ಏನನ್ನೂ ಮಾಡಿಲ್ಲ. ಇಡೀ ಬೆಂಗಳೂರಿನಲ್ಲಿ ಜಲಮಂಡಳಿಯ 108 ಬೋರ್ ವೆಲ್‌ಗಳನ್ನು ಮಾತ್ರ ಹಾಕಿಸಿದೆ ಎನ್ನುವುದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ. ಇದರರ್ಥ BWSSB ಬೆಂಗಳೂರಿಗೆ ಸಂಪೂರ್ಣವಾಗಿ ನೀರು ಸರಬರಾಜು ಮಾಡಲು ಕೆಲಸವನ್ನೇ ಮಾಡಿಲ್ಲ ಎಂದು ಅವರು ದೂರಿದರು.

ಕಾವೇರಿ ನೀರು ಬೆಂಗಳೂರಿನ ಎಲ್ಲಾ ಮನೆಗಳಿಗೂ ತಲುಪುತ್ತಿಲ್ಲ. ಬಿಬಿಎಂಪಿ ಕೂಡ 1,534 ಬೋರ್‌ವೆಲ್‌ಗಳನ್ನು ಕೊರೆಸಿದೆ. ಈ ಎರಡೂ ಸಂಸ್ಥೆಗಳು ಎಲ್ಲಾ ಮನೆಗಳಿಗೂ ನೀರು ಒದಗಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಅನಧಿಕೃತ ಟ್ಯಾಂಕರ್ ಮಾಫಿಯಾದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

Bengaluru Water Crisis: AAP Alleged DK Shivakumar Role in Water Tanker Mafia, Know details

ವಾಟರ್ ಟ್ಯಾಂಕ್ ಬೆಲೆ ₹600 ರಿಂದ ₹3000ಕ್ಕೆ ಜಿಗಿತ

ಟ್ಯಾಂಕರ್ ನೀರು ಸರಬರಾಜು ಅನಧಿಕೃತ, ಇದಕ್ಕೆ ಕಾನೂನಿನಲ್ಲಿ ಅನುಮತಿಯೇ ಇಲ್ಲ. ಆದರೂ ಬೆಂಗಳೂರಿನಲ್ಲಿ ನೀರು ಸರಬರಾಜು ಮಾಫಿಯಾ ತೀವ್ರವಾಗಿದೆ. ಬೇಸಿಗೆ ಆರಂಭವಾಗುವ ಮುನ್ನವೇ ₹600 ಇರಬೇಕಿದ್ದ ಟ್ಯಾಂಕರ್ ನೀರಿನ ಬೆಲೆ ₹3000 ದವರೆಗೆ ತಲುಪಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಕುಡಿಯುವ ನೀರು ಅತ್ಯಗತ್ಯ ಎಷ್ಟಿದೆ ಎಂದು ಗೊತ್ತಿದೆ. ಕುಡಿಯುವ ನೀರಿದ್ದರೆ ಅಲ್ಲವೇ ಬ್ರಾಂಡ್ ಬೆಂಗಳೂರು ಮಾಡಲು ಸಾಧ್ಯ. ಸರ್ಕಾರ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಬೇಕು. ಅವರಿಗೆ ತೆರಿಗೆ ವಿಧಿಸಬೇಕು. ಉಚಿತವಾಗಿ ನೀರು ಕೊಡಲು ಆಗದೇ ಇದ್ದರೂ, ಕಡಿಮೆ ಬೆಲೆಯಲ್ಲಿ ನೀರು ಕೊಡುವ ವ್ಯವಸ್ಥೆ ಮಾಡಿ. ಇಲ್ಲವಾದರೆ ನಿಮ್ಮ ಮನೆ ಬಳಿಗೆ ಬಂದು ಜನ ನೀರು ಕೊಡಿ ಎನ್ನುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸಹಾಯವಾಣಿ, ಆಪ್ ಮೂಲಕ ಸ್ಪಂದಿಸಿ

ನೀವೇ ಒಂದು ಮೊಬೈಲ್ ಆಪ್ ಸಿದ್ದಮಾಡಿ ಟ್ಯಾಂಕರ್ ಬುಕ್ ಮಾಡಲು ಅವಕಾಶ ಕೊಡಿ. ಸಹಾಯವಾಣಿ ಸಂಖ್ಯೆಯನ್ನು ಕೊಟ್ಟು, ಜನರ ಸಮಸ್ಯೆಗೆ ಸ್ಪಂದಿಸಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀರಿಗಾಗಿ ದೊಡ್ಡ ಜಗಳವೇ ನಡೆದರೂ ಅಚ್ಚರಿ ಇಲ್ಲ ಎಂದು ಅವರು ವಿವರಿಸಿದರು.

ಬೆಂಗಳೂರು ನಗರಾಧ್ಯಕ್ಷರಾದ ಡಾ. ಸತೀಶ್ ಮಾತನಾಡಿ, ಜಲಮಂಡಳಿ ಅಧಿಕಾರಿಗಳು ಮತ್ತು ನಗರಾಭಿವೃದ್ಧಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 110 ಹಳ್ಳಿಗಳಿಗೆ 131 ಕೋಟಿ ರೂ.ಗಳನ್ನು ಕೊಳವೆಬಾವಿ ಕೊರೆಸಲು ಅನುದಾನ ಕೊಡುತ್ತಿರುವುದು ಸಾಕಾಗುವುದಿಲ್ಲ.

ಒಂದೊಂದು ಕ್ಷೇತ್ರದಲ್ಲಿ 50 ಕಡೆ ನೀರಿನ ಸಮಸ್ಯೆ

ಬೆಂಗಳೂರಿನಲ್ಲಿ ಕೇವಲ 150 ಸ್ಥಳಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ ಎಂದು ಹೇಳಿಕೆ ನೀಡಿದ್ದಾರೆ. ಇದು ಸುಳ್ಳು. ಒಂದು ವಿಧಾನಸಭೆ ಕ್ಷೇತ್ರದಲ್ಲಿ 50 ಕಡೆಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ, ಬೆಂಗಳೂರು ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ, ಮಹಿಳಾ ಮುಖಂಡ ಸತ್ಯವತಿ ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+