Bengaluru Vlogger Case: ಪ್ರಿಯತಮೆ ಶವದೊಂದಿಗೆ 2 ದಿನ ಕಳೆದ ಹಂತಕ, ಬೆಚ್ಚಿಬೀಳಿಸುವ ಕೃತ್ಯ: ನಡೆದದ್ದೇನು?

ಬೆಂಗಳೂರು, ನವೆಂಬರ್ 28: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭಯಾನಕ ಘಟನೆ ನಡೆದಿದೆ. ಇತ್ತೀಚೆಗೆ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಸ್ಸಾಂ ಮೂಲಕ ಮಹಿಳಾ ವ್ಲಾಗರ್ 'ಮಾಯಾ ಗೊಗೊಯ್' ಅವರ ಮೃತ ದೇದ ಅಪಾರ್ಟ್ ಮೆಂಟ್‌ನಲ್ಲಿ ಪತ್ತೆ ಆಗಿತ್ತು. ಪ್ರಕರಣದ ಸಾಕ್ಷ್ಯ, ಪ್ರಾಥಮಿಕ ಮಾಹಿತಿ ಕಲೆ ಹಾಕಿರುವ ಪೊಲೀಸರಿಗೆ ಬೆಚ್ಚಿ ಬೀಳಿಸುವ ಮಾಹಿತಿಗಳು ಸಿಕ್ಕಿವೆ. ಆರೋಪಿಯು ಆಕೆಯ ಮೃತದೇಹದೊಂದಿಗೆ ಎರಡು ದಿನ ಕಳೆದಿರುವ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಅಸ್ಸಾಂನ ಮಹಿಳಾ ವ್ಲಾಗರ್ 'ಮಾಯಾ ಗೊಗೊಯ್' ಅವರು ಎಚ್‌ಎಸ್‌ಆರ್ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಘಟನೆ ನಡೆದ ಹಿಂದಿನ ದಿನ ಆಕೆ ಮನೆಯಲ್ಲಿ ಇರದೇ ಪಾರ್ಟಿಗೆ ಹೋಗಿದ್ದರು. ನಂತರ ಅವರ ಶವ ಬೆಂಗಳೂರು ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಸಿಕ್ಕಿತ್ತು. ಆಕೆಯನ್ನು ಕೊಂದ ಆರೋಪಿ ಶವದೊಂದಿಗೆ ಎರಡು ದಿನ ಹಗಲು ರಾತ್ರಿ ಕಳೆದಿದ್ದಾರೆ. ಶವ ಮುಂದೆ ಕೂತು ಸಿಗರೇಟ್ ಸೇದಿದ್ದಕ್ಕೆ ಸಾಕ್ಷ್ಯಗಳು ಸಿಕ್ಕಿವೆ.

Bengaluru Vlogger Case Lover Spent Two Days With Her Corpse Probe says Details of Incident

ಮೃತ ಮಾಯಾ ಗೊಗೊಯ್ ಅವರನ್ನು ಆಕೆಯ ಬಾಯ್‌ಫ್ರೆಂಡ್ ಆರವ್ ಹನೋಯ್ ಎಂಬಾತನೇ ಕೊಲೆ ಮಾಡಿ ಪರಾರಿ ಆಗಿದ್ದಾನೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈತನೇ ಕೊಂದು ಎರಡು ದಿನ ಮಹಿಳೆ ಜೊತೆಗೆ ಕಳೆದಿದ್ದಾನೆ ಎಂದು ತನಿಖೆಯಿಂದ ಗೊತತಾಗಿದೆ.

ಸದ್ಯ ಆತನ ಪತ್ತೆಗಾಗಿ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದ್ದು, ಆರೋಪಿ ಫೋನ್ ಸ್ವಿಚ್ಡ್ ಆಫ್ ಆಗಿದೆ. ಅಪಾರ್ಟ್‌ಮೆಂಟ್‌ನಿಂದ ಮೆಜೆಸ್ಟಿಕ್‌ಗೆ ಹೋಗುತ್ತಿದ್ದಂತೆ ಮೊಬೈಲ್ ಆಫ್‌ ಮಾಡಿಕೊಂಡಿದ್ದಾನೆ.

ಘಟನೆ ಹಿನ್ನೆಲೆ ಏನು, ಕಾರಣವೇನು?

ಪೊಲೀಸ್ ತನಿಖೆಯ ಪ್ರಕಾರ, ಅಸ್ಸಾಂ ಮೂಲದ ಯುವತಿ ತನ್ನ ಸಹೋದರಿಯ ಜೊತೆಗೆ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಘಟನೆಗೂ ಮೊದಲು ಕಳೆದ ಶುಕ್ರವಾರದಂದು ಆಫೀಸ್‌ನಲ್ಲಿ ಪಾರ್ಟಿ ಇದೆ, ಮನೆಗೆ ಬರುವುದಿಲ್ಲ ಎಂದು ಕರೆ ಮಾಡಿ ಸಹೋದರಿಗೆ ಮೃತ ಯುವತಿ ತಿಳಿಸಿದ್ದಾಳೆ.

ಈ ಪಾರ್ಟಿ ಶನಿವಾರ ರಾತ್ರಿಗೂ ಮುಂದುವರಿದಿದೆ. ಆ ದಿನವು ತಾನು ನಿವಾಸಕ್ಕೆ ಬರುವುದಿಲ್ಲ ಎಂದು ಮೃತ ಯುವತಿ ಕರೆ ಮಾಡಿ ಹೇಳಿದ್ದಾಳೆ. ಈ ಆರೋಪಿ ಆರವ್ ಹಾಗೂ ಮಾಯಾ ಕೇವಲ 06 ತಿಂಗಳ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು, ನಂತರ ಭೇಟಿಯಾಗಿದ್ದರು. ಅದಾಗುತ್ತಿದ್ದಂತೆ ಇಬ್ಬರು ಮಧ್ಯೆ ಸಂಬಂಧ, ಸಲುಗೆ ಬೆಳೆದಿದೆ. ಇದು ಸಹೋದರಿಗೂ ಗೊತ್ತಿತ್ತು.

ಇವರಿಬ್ಬರು ಕಾಲ ಕಳೆಯಲೆಂದೆ ಸರ್ವೀಸ್‌ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ. ಆಕೆಯನ್ನು ಕೊಲ್ಲಲೆಂದೆ ಆರೋಪಿಯು ಆನ್‌ಲೈನ್‌ನಲ್ಲಿ ನೈಲಾನ್ ಹಗ್ಗ ಖರೀದಿಸಿದ್ದಾನೆ. ಚಾಕು ಸಮೇತ ಮನೆಗೆ ಆಗಮಿಸಿದ್ದಾನೆ. ಮೃತ ಯುವತಿ ಮಾಯಾಳ ಜೊತೆಗೆ ಸಮಯ ಕಳೆದ ಬಳಿಕ ಆಕೆಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ಭಾನುವಾರ ರಾತ್ರಿ ಘಟನೆ ನಡೆದ ಶಂಕೆ

ಬಳಿಕ ಎರಡು ದಿನಗಳ ಕಾಲ ಆಕೆಯೊಂದಿಗೆ ಕಾಲ ಕಳೆದಿದ್ದಾನೆ. ಶವದ ಸುತ್ತ ಆತ ಸಿಗರೇಟ್ ಸೇದುತ್ತಾ ಕುಳಿತಿದ್ದಾನೆ, ಓಡಾಡಿದ್ದಾನೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.

ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಅರೋಪಿ ಬುಕ್ ಮಾಡಿದ ಕ್ಯಾಬ್, ಆತ ಅಪಾರ್ಟ್‌ಮೆಂಟ್‌ನಿಂದ ಕೂಲ್ ಆಗಿ, ಏನು ಆಗಿಲ್ಲ ಎಂಬಂತೆ ಹೊರಗೆ ಹೋದ ದೃಶ್ಯ ಪರಿಶೀಲಿಸಿದ್ದಾರೆ. ನವೆಂಬರ್ 23 ರಂದು ಮಾಯಾ ಮತ್ತು ಆರವ್ ಅಪಾರ್ಟ್‌ಮೆಂಟ್‌ಗೆ ತೆರಳಿದ್ದ ದೃಶ್ಯಗಳು ಪತ್ತೆ ಆಗಿವೆ. ಸದ್ಯ ಕೊಲೆಗೆ ಕಾರಣಗಳು ಏನೆಂದು ತಿಳಿಯಲು, ಆರೋಪಿ ಬಂಧಿಸಲು ತನಿಖೆ ಚುರುಕುಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+