Bengaluru Viral Video: ಮುಸ್ಲಿಂ ಕಂಡಕ್ಟರ್‌ ತಲೆ ಮೇಲಿನ ಕ್ಯಾಪ್‌ ತೆಗೆಸಿದ ಮಹಿಳೆ: ಬಿಎಂಟಿಸಿಯಲ್ಲಿ ನಡೆದ ಕೃತ್ಯಕ್ಕೆ ಆಕ್ರೋಶ

ಬೆಂಗಳೂರು, ಜುಲೈ 12: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ಸಿನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ. ಮುಸ್ಲಿಂ ಕಂಡಕ್ಟರ್‌ ತಲೆ ಮೇಲಿನ ಕ್ಯಾಪ್‌ ತೆಗೆಯುವಂತೆ ಮಹಿಳಾ ಪ್ರಯಾಣಿಕರೊಬ್ಬರು ಬಲವಂತವಾಗಿ ಒತ್ತಾಯಿಸಿದ ಪ್ರಕರಣ ನಡೆದಿದೆ. ಇದು ವಿಡಿಯೊದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಈ ಘಟನೆಯ ಕುರಿತು ವಿವರಗಳನ್ನು ಪಡೆಯಲು ನಗರ ಪೊಲೀಸರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

Bengaluru Viral Video: Muslim bus conductor forced to remove skullcap in BMTC Bus

ಮುಸ್ಲಿಂ ಸಮುದಾಯದ ಕಂಡಕ್ಟರ್ ಅನ್ನು ಗುರಿಯಾಗಿಸಿಕೊಂಡು ಮಹಿಳೆ ವಿಡಿಯೊ ಚಿತ್ರೀಕರಣ ಮಾಡಿದ್ದು ಟೀಕೆಗೆ ಗುರಿಯಾಗಿದೆ.

ಈ ಬೆಳವಣಗೆ ನಡುವೆಯೇ, ಘಟನೆಯ ಬಗೆಗಿನ ವೈರಲ್ ಟ್ವೀಟ್‌ಗೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಅಪರಿಚಿತ ಮಹಿಳೆಯು ಒಂದೂವರೆ ನಿಮಿಷದ ಕ್ಲಿಪ್ ಶೂಟ್ ಮಾಡಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿರುವ ಕಂಡಕ್ಟರ್‌ ಸಮವಸ್ತ್ರದಲ್ಲಿದ್ದಾರೆ.

ಸಮವಸ್ತ್ರದಲ್ಲಿ ಇರುವವರು ಸ್ಕಲ್‌ಕ್ಯಾಪ್ ( ಮುಸ್ಲಿಮರು ತಲೆಗೆ ಹಾಕಿಕೊಳ್ಳುವ ಟೊಪ್ಪಿಗೆ ) ಧರಿಸಬಹುದೇ ಎಂದು ಕಂಡಕ್ಟರ್‌ಗೆ ಮಹಿಳೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಡಕ್ಟರ್‌ ಬಹುಶಃ ಕ್ಯಾಪ್‌ ಅನ್ನು ಧರಿಸಬಹುದೆಂದು ಕಂಡಕ್ಟರ್ ಉತ್ತರಿಸಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

Bengaluru Viral Video: Muslim bus conductor forced to remove skullcap in BMTC Bus

'ನೀವು ಮನೆಯಲ್ಲಿ ನಿಮ್ಮ ಧರ್ಮವನ್ನು ಆಚರಿಸಿ. ಮಸೀದಿಯೊಳಗೆ ಟೊಪ್ಪಿಗೆಯನ್ನು ಹಾಕಿಕೊಳ್ಳಿ. ಸಮವಸ್ತ್ರದಲ್ಲಿರುವಾಗ ನೀವು ಟೊಪ್ಪಿಗೆಯನ್ನು ಧರಿಸಬಾರದು' ಎಂದು ಮಹಿಳೆ ಹೇಳುತ್ತಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕಂಡಕ್ಟರ್, 'ನಾನು ಅನೇಕ ವರ್ಷಗಳಿಂದ ಟೊಪ್ಪಿಗೆಯನ್ನು ಧರಿಸುತ್ತಿದ್ದೇನೆ ಮೇಡಮ್' ಎಂದು ಹೇಳುತ್ತಾರೆ

ಸಮವಸ್ತ್ರ ತೊಟ್ಟಕೊಂಡಿರುವಾಗ ಇದನ್ನು ಧರಿಸಬಹುದೇ ಎಂದು ಮಹಿಳೆ ಕೇಳುತ್ತಾರೆ. ಕ್ಯಾಪ್‌ ಅನ್ನು ತೆಗೆಯುವಂತೆ ಮಹಿಳೆ ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕಂಡಕ್ಟರ್‌ ಈ ವರೆಗೆ ಯಾರೂ ಆಕ್ಷೇಪಿಸಿಲ್ಲ. ಈ ಕಾರಣ ನಾನು ಕ್ಯಾಪ್‌ ಅನ್ನು ಧರಿಸುತ್ತಿದ್ದೇನೆ ಎಂದು ಕಂಡಕ್ಟರ್‌ ಹೇಳುತ್ತಾರೆ. ನಾನು ಈ ಬಗ್ಗೆ ನಮ್ಮ ಅಧಿಕಾರಿಗೆ ತಿಳಿಸುತ್ತೇನೆ. ಅದರು ಹೇಳಿದಂತೆ ಕೇಳುತ್ತೇನೆ ಎಂದು ಕಂಡಕ್ಟರ್‌ ಹೇಳುತ್ತಾರೆ.

Bengaluru Viral Video: Muslim bus conductor forced to remove skullcap in BMTC Bus

ಕಂಡಕ್ಟರ್ ತನ್ನ ಹಸಿರು ಕ್ಯಾಪ್ ಅನ್ನು ತೆಗೆದುಹಾಕಬೇಕು ಎಂದು ಮಹಿಳೆ ಮತ್ತೆ ಒತ್ತಾಯಿಸುತ್ತಾರೆ. 'ನೀವು ಅದನ್ನು ಮಸೀದಿ ಅಥವಾ ನಿಮ್ಮ ಮನೆಯಲ್ಲಿ ಧರಿಸಿದರೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ, ಕೆಲಸದಲ್ಲಿರುವು ಹಾಕಿಕೊಳ್ಳಬಾರದು. ಅದನ್ನು ತೆಗೆಯಿರಿ' ಎಂದು ಮಹಿಳೆ ಒತ್ತಾಯಿಸುತ್ತಾರೆ. ಆ ನಂತರ ಕಂಡಕ್ಟರ್ ಕ್ಯಾಪ್ ಅನ್ನು ತಲೆಯ ಮೇಲಿಂದ ತೆಗೆಯುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಹಲವಾರು ಟ್ವಿಟ್ಟರ್ ಬಳಕೆದಾರರು ಈ ಘಟನೆಯನ್ನು ಕಂಡಿಸಿದ್ದಾರೆ. ಕಂಡಕ್ಟರ್‌ ಅನ್ನು ಅವಮಾನ ಮಾಡಿದ್ದಕ್ಕಾಗಿ ಮಹಿಳೆಯನ್ನು ಟೀಕಿಸಿದ್ದಾರೆ. ಮಹಿಳೆಯರು ಕುಂಕುಮ ಹಾಗೂ ಬಳೆಗಳನ್ನು ತೊಡುತ್ತಾರೆ. ಅದನ್ನೂ ಇದೇ ರೀತಿಯಲ್ಲಿ ನೋಡಬಹುದೇ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಕೇಸರಿ ಸ್ಕಾರ್ಫ್ ಧರಿಸಿ, ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಆಚರಣೆ ಮಾಡಿದ್ದ ವಿವಾದಾತ್ಮಕ ವಿಡಿಯೊವನ್ನೂ ಕೆಲವರು ಶೇರ್‌ ಮಾಡಿದ್ದಾರೆ.

ವಿಡಿಯೊವನ್ನು ಶೇರ್‌ ಮಾಡಿಕೊಂಡಿರುವ ಟ್ವೀಟಿಗರೊಬ್ಬರು, 'ವಾಟ್ಸಾಪಲ್ಲಿ ನೋಡ್ದೆ. ಆ ಮಹಿಳೆಯ ಹೃದಯದಲ್ಲಿ ತುಂಬಿದ ಕೋಮು ವಿಷದ ತೀವ್ರತೆಯನ್ನು ಅಳೆಯುವ ಯಂತ್ರವೊಂದಿದ್ರೆ ಅದರ ಮುಳ್ಳುಗಳೇ ಒಡೆದುಹೋಗುತ್ತಿದ್ವೆನೋ? ಕುಂಕುಮ, ಮಾಲೆಗಳನ್ನು ಧರಿಸುವಂತೆ ಟೋಪಿಗೂ ಅವಕಾಶವಿದೆ ಎಂದಾಗಿದೆ ನನ್ನ ಭಾವನೆ. ಏನಿದ್ದರೂ ವಿಷ ಕಾರುತ್ತಿರುವ ಮಹಿಳೆಯ ಮುಂದೆಯೂ ಸೌಮ್ಯವಾಗಿ ನಡೆದುಕೊಂಡ ನಿರ್ವಾಹಕರಿಗೆ ನನ್ನದೊಂದು ಸಲಾಂ' ಎಂದು ಹೇಳಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿರೊಬ್ಬರು, 'ಇಂತಹ ವಿಡಿಯೋ ಮಾಡಿದ ಕೂಡ್ಲೇ ನಾನು ಸಮಾಜದಲ್ಲಿ ಹೀರೋ ಆಗಿಬಿಡ್ತೇನೆ ಎಂಬ ಯೋಚನೆ ಸಂಘಿಗಳದ್ದು. ಇಂಟರ್ ನೆಟ್ ಮತ್ತು ದ್ವೇಷ ಎರಡೂ ಫ್ರೀ ಆಗಿದೆ. ಆ ಟೋಪಿ ಹಾಕಿಕೊಂಡಿರುವುದು ಆತನ ವೈಯಕ್ತಿಕ ವಿಚಾರವಾಗಿದ್ರೂ ಆ ಮಹಿಳೆಯ ವರ್ತನೆಯಿಂದಾಗಿ ಆತ ಮುಜುಗರ ಪಡಬೇಕಾಯಿತು. ದ್ವೇಷವನ್ನು ಉಂಡು ಉಸಿರಾಡುವ ಇಂದಿನ ಸಮಯದಲ್ಲಿ ಇದೆಲ್ಲಾ ನಡಿತಾನೇ ಇರ್ತದೆ' ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+