Bengaluru Viral Video: ದಂಪತಿ ವಾರ್ಷಿಕೋತ್ಸವಕ್ಕೆ ಮನೆ ಕೆಲಸದ ಮಹಿಳೆ ಕೊಟ್ಟ ಗಿಫ್ಟ್ ವಿಡಿಯೋ ವೈರಲ್
Bengaluru Viral Video: ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ವಿಚಾರದ ವಿಡಿಯೋಗಳೇ ವೈರಲ್ ಆಗುತ್ತಿವೆ. ಇದರ ನಡುವೆ ಇಂದು ಹೃದಯ ಸ್ಪರ್ಶಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮನೆ ಕೆಲಸದ ಮಹಿಳೆಯೊಬ್ಬರ ಮುಗ್ಧತೆ ಹಲವರ ಮನಸ್ಸು ಗೆದ್ದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.
ಬೆಂಗಳೂರಿನ ನಿವಾಸಿಗಳ ವಿವಾಹ ವಾರ್ಷಿಕೋತ್ಸವಕ್ಕೆ ಮನೆ ಕೆಲಸದ ಮಹಿಳೆಯೊಬ್ಬರು ಕೊಟ್ಟ ಸಣ್ಣ ಗಿಫ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬೆಂಗಳೂರಿನಲ್ಲಿ ವಾಸವಿರುವ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವದ ಬಗ್ಗೆ ತಮ್ಮ ಮನೆ ಕೆಲಸದ ಮಹಿಳೆಗೆ ತಿಳಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಆ ಮಹಿಳೆ ದಂಪತಿಗೆ ಸಣ್ಣ ಗಿಫ್ಟ್‌ವೊಂದನ್ನು ತಂದು ಕೊಟ್ಟಿದ್ದಾರೆ. ಈಗ ಆ ದೃಶ್ಯಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಇನ್‌ಸ್ಟಾಗ್ರಾಮ್ ಬಳಕೆದಾರರಾದ ನೇಹಾ ಹರ್‌ಚಂದಾನಿ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮನೆ ಕೆಲಸ ಮಾಡಿಕೊಡುವ ಮಹಿಳೆ / ಸಹಾಯಕ ಸಿಬ್ಬಂದಿಯು ಗುಲಾಬಿ ಹೂವು ಮತ್ತು ಚಾಕೊಲೇಟ್ ಆರ್ಡರ್ ಮಾಡಿರುವುದು ವೈರಲ್ ಆಗಿದೆ. ಅದರಲ್ಲೂ ಮಹಿಳೆಯು ತಮ್ಮ ಪತಿಯಿಂದಲೇ ಗುಲಾಬಿ ಹೂವು ಮತ್ತು ಚಾಕೊಲೇಟ್ ಅನ್ನು ಬ್ಲಿಂಕಿಟ್ ಮೂಲಕ ಆರ್ಡರ್ ಮಾಡುವಂತೆ ಕೇಳಿಕೊಂಡಿದ್ದರು ಎಂದು ನೇಹಾ ಅವರು ವೈರಲ್ ವಿಡಿಯೋದಲ್ಲಿ ಹೇಳಿದ್ದಾರೆ.
ಮನೆ ಕೆಲಸದವರೊಂದಿಗೆ ಮಾತನಾಡುವಾಗ ಇಂದು ನಮ್ಮ ವಿವಾಹ ವಾರ್ಷಿಕೋತ್ಸವ ಎಂದು ಹೇಳಿದ್ದೆವು. ಅವರು ನಮಗೆ ಬ್ಲಿಂಕಿಟ್‌ನಲ್ಲಿ ಸಣ್ಣ ಗಿಫ್ಟ್ ಕೊಟ್ಟಿದ್ದಾರೆ. ವೀಡಿಯೊದಲ್ಲಿ ಸೀರೆಯುಟ್ಟ ಮಹಿಳೆ ಚಾಕೊಲೇಟ್ ಪ್ಯಾಕ್ ಮತ್ತು ಗುಲಾಬಿಯನ್ನು ಹಿಡಿದಿರುವುದು ಇದೆ.
ನಾನು ಆಕಸ್ಮಿಕವಾಗಿ ನಮ್ಮ ವಾರ್ಷಿಕೋತ್ಸವದ ಬಗ್ಗೆ ನಮ್ಮ ಮನೆಯ ಸಹಾಯಕಿ ದೀದಿಗೆ ಹೇಳಿದೆ. ಅವರು ನಮಗೆ ಗುಲಾಬಿ ಮತ್ತು ಚಾಕೊಲೇಟ್ ತಂದುಕೊಟ್ಟರು. ಬ್ಲಿಂಕಿಟ್‌ನಿಂದ ಅದನ್ನು ಆರ್ಡರ್ ಮಾಡಲು ಅವರ ಪತಿಯನ್ನು ಕೇಳಿದರು. ಇದೊಂದು ಶುದ್ಧ ಪ್ರೀತಿ ಎಂದು ವೈರಲ್ ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ.
Bengaluru Viral Video ಅಚ್ಚರಿಗೆ ಕಾರಣವಾದ ವಿಡಿಯೋ
ಮನೆಯ ಸಹಾಯ ಸಿಬ್ಬಂದಿಯ ಸಣ್ಣ ಗಿಫ್ಟ್‌ಗೆ ದಂಪತಿ ಖುಷಿಯಾಗಿದ್ದಾರೆ. ದಂಪತಿಗೆ ವಾರ್ಷಿಕೋತ್ಸವದ ಉಡುಗೊರೆಯನ್ನು ಖರೀದಿಸಿದ್ದೇನೆ ಎಂದು ಹೇಳುವ ದೃಶ್ಯ ಹೃದಯ ಸ್ಪರ್ಶಿಯಾಗಿದೆ. ಆ ಕ್ಷಣ ನೇಹಾ ಮತ್ತು ಅವರ ಪತಿಗೆ ಆಶ್ಚರ್ಯವನ್ನುಂಟು ಮಾಡಿರುವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. "ದೀದಿ ಆಪ್ ಯೇ ಕ್ಯೂ ಲೇಕರ್ ಆಯೇ, ಕಿತ್ನಿ ಕ್ಯೂಟ್ ಹೈ" (ಅಕ್ಕ ನೀವು ಇದನ್ನು ಯಾಕೆ ಖರೀದಿ ಮಾಡಿದಿರಿ, ಇದು ಎಷ್ಟೊಂದು ಸುಂದರವಾಗಿದೆ) ಎಂದು ಹೇಳಿರುವುದು ವೈರಲ್ ವಿಡಿಯೋದಲ್ಲಿ ಇದೆ.
ನೆಟ್ಟಿಗರ ಪ್ರತಿಕ್ರಿಯೆ ಏನು
ಇನ್ನು ಈ ವೈರಲ್ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರು ಮನೆ ಕೆಲಸದ ಮಹಿಳೆಯ ಹೃದಯ ಸ್ಪರ್ಶಿ ಗಿಫ್ಟ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. ದಂಪತಿ ಸಹ ಮನೆ ಕೆಲಸದ ಮಹಿಳೆಯೊಂದಿಗೆ ನಡೆದುಕೊಂಡ ರೀತಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications