19,320 ಕೋಟಿ ವೆಚ್ಚದ ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ ಯೋಜನೆ ಅಪ್ಡೇಟ್ಸ್
Bengaluru-Vijayawad Highway: ಅನುಮೋದನೆ ದೊರೆತು ಒಂದು ವರ್ಷದ ಬಳಿಕ ಪ್ರಧಾನಿ ಮೋದಿಯಿಂದ ಕಾಮಾಗಾರಿಗೆ ಚಾಲನೆ ಪಡೆದಿದ್ದ ಕರ್ನಾಟಕದ ಬೆಂಗಳೂರು-ವಿಜಯವಾಡ (ಆಂಧ್ರ ಪ್ರದೇಶ) ಎಕ್ಸ್‌ಪ್ರೆಸ್‌ವೇ ಯೋಜನೆಯು ಮಂದಗತಿಯಲ್ಲಿ ಸಾಗುತ್ತಿದೆ. 2023ರಲ್ಲಿ ಈಹೈವೇ ಯೋಜನೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅನುಮೋದನೆ ನೀಡಿದ್ದರು. ನಂತರ 2024ರಲ್ಲಿ ಮಾರ್ಚ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಮಗಾರಿ ಆರಂಭಕ್ಕೆ ಚಾಲನೆ ಕೊಟ್ಟಿದ್ದರು. ಅಲ್ಲಿಂದ ಈವರೆಗೆ ಎಷ್ಟು ಕಾಮಗಾರಿ ನಡೆದಿದೆ? ವಾಹನಗಳಿಗೆ ಯಾವಾಗ ಮುಕ್ತ?..
ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್ ಹೆದ್ದಾರಿ ಯೋಜನೆಯ ಕಾಮಗಾರಿಗಳ ವಿವಿಧ ಸ್ಥಳಕ್ಕೆ ಕೊಡೂರು ಜಿಲ್ಲಾಧಿಕಾರಿಗಳಾದ ಟಿ.ಎಸ್. ಚೇತನ್ ಅವರು ಭೇಟಿ ನೀಡಿದ್ದಾರೆ. ಕಾಮಗಾರಿ ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ತಡವಾಗುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ. ಕೊಡೂರು ತೋಪುವಿನ ರಾಷ್ಟ್ರೀಯ ಹೆದ್ದಾರಿ 44 (NH-44) ಜಂಕ್ಷನ್ ಬಳಿ ಈ ಎಕ್ಸ್‌ಪ್ರೆಸ್ ಯೋಜನೆಯ ಪ್ಯಾಕೇಜ್-1 ಕಾಮಗಾರಿಳನ್ನು ಕೂಲಂಕುಷವಾಗಿ ಅವರು ಪರಿಶೀಲಿಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ-544 (NH-544) ಕೆಎಂ 0+280 ನಲ್ಲಿರುವ ಟ್ರಂಪೆಟ್ ಇಂಟರ್‌ಚೇಂಜ್ ಕಾಮಗಾರಿ ಹಾಗೂ ಇಡಿ ಯೋಜನೆ ಕೆಲಸವನ್ನು ತ್ವರಿತಗೊಳಿಸಬೇಕು. ನಿಗದಿತ ಗಡುವಿನೊಳಗೆ ಮುಗಿಸುವಂತೆ ಸೂಚಿಸಿದರು.

ಈ ಬೆಂಗಳೂರು-ವಿಜಯವಾಡ ಆರ್ಥಿಕ ಕಾರಿಡಾರ್‌ನಲ್ಲಿ (ಕೊಡುರು ಜಿಲ್ಲೆಯಾದ್ಯಂತ) ನಿರ್ಮಿಸಲಾಗುತ್ತಿರುವ 'ಚಂದ್ರಶೇಖರ್ ಪುರಂ ನಿಂದ ಪೋಲವರಂವರೆಗಿನ' 32 ಕಿಲೋ ಮೀಟರ್ ಉದ್ದದ ಗ್ರೀನ್‌ಫೀಲ್ಡ್ ಯೋಜನೆ ನಿರ್ಮಾಣಕ್ಕೆ ವೇಗದ ನೀಡಬೇಕು ಎಂದು ಜಿಲ್ಲಾಧಿಕಾರಿ ಒತ್ತಿ ಹೇಳಿದರು. 1292 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತ್ ಮಾಲಾ ಪರಿಯೋಜನೆ ಅಡಿಯ ಈ ಗ್ರೀನ್ ಫ್ರೀಲ್ಡ್ ಹೆದ್ದಾರಿಗೆ ಚಾಲನೆ ನೀಡಲಾಗಿತ್ತು. ಒಟ್ಟು ಆರು ಪಥದಲ್ಲಿ ಈ ರಸ್ತೆ ಸಜ್ಜಾಗಲಿದೆ.
ಒಟ್ಟಾರೆ ಈ ಎಕ್ಸ್‌ಪ್ರೆಸ್ ವೇ ಯೋಜನೆಯು ಬೆಂಗಳೂರು ಹಾಗೂ ವಿಜಯವಾಡ ಮಧ್ಯೆ ಉತ್ತಮ ಸಾರಿಗೆ ಸಂಪರ್ಕ ಕಲ್ಪಿಸುತ್ತದೆ. ವಾಹನಗಳ ಪ್ರಯಾಣ ಸಮಯವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ. ಕೊಡೂರು ಸೇರಿದಂತೆ ಈ ಮಾರ್ಗದ ವಿವಿಧ ಜಿಲ್ಲೆಗಳು, ತಾಲೂಕು ಪ್ರದೇಶಗಳಲ್ಲಿ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
ಯೋಜನೆಗೆ 19,320 ಕೋಟಿ ರೂ. ಅಂದಾಜು ವೆಚ್ಚ
ಬೆಂಗಳೂರಿನಿಂದ ವಿಜಯವಾಡ ಮಧ್ಯೆ 518 ಕಿಲೋ ಮೀಟರ್ ಉದ್ದದ ಆರು ಪಥಗಳ ಹೈವೇ ಇದಾಗಿದೆ. ಆರಂಭದಲ್ಲಿ ಒಟ್ಟು 19,320 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಕ್ಕೆ ಕೈ ಹಾಕಲಾಗಿದೆ. ಸದ್ಯ ಯೋಜನೆಗೆ ಗಡುವು ಇದ್ದು, 2026 ಇಲ್ಲವೇ 2027ರ ಮಧ್ಯ ಭಾಗದಲ್ಲಿ ಪೂರ್ಣಗೊಳಿಸುವಂತೆ ಕೇಂದ್ರ ಹೆದ್ದಾರಿ ಸಚಿವಾಲಯದ ನಿರ್ದೇಶನವಿದೆ. ಆದ್ದರಿಂದ ಯಾವ ಭಾಗದಲ್ಲಿಯೂ ಕಾಮಗಾರಿ ವಿಳಂಬವಾಗದಂತೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳು ಆಗಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಗಡುವಿನೊಳಿಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ...












Click it and Unblock the Notifications