Bengaluru Traffic: ಬೆಂಗಳೂರಲ್ಲಿ ವಾಹನ ಸವಾರರು ಮಾಡುವ ಅಧಿಕ ತಪ್ಪು ಇದೇ!

ಬೆಂಗಳೂರು, ಸೆಪ್ಟೆಂಬರ್ 30: ಉದ್ಯಾನ ನಗರಿ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಬಹಳ ಖ್ಯಾತಿ ಪಡೆದಿದೆ. ನಗರದ ಸಂಚಾರ ದಟ್ಟಣೆ, ಸಂಚಾರಿ ನಿಯಮ ಉಲ್ಲಂಘನೆ, ರಸ್ತೆ ಅಪಘಾತಗಳು, ರಸ್ತೆಯಲ್ಲಿ ವಾಕ್ಸಮರ ಸಾಮಾನ್ಯ ಎಂಬುವಂತೆ ಆಗಿದೆ. ನಗರದಲ್ಲಿ ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಯಾವುವು? ಎಂಬ ಬಗ್ಗೆ ಅಂಕಿ ಅಂಶವೊಂದು ಬಿಡುಗಡೆಯಾಗಿದೆ. ಹೆಲ್ಮೆಟ್ ಇಲ್ಲದೇ ಪ್ರಯಾಣ ಎಂದು ನೀವು ಅಂದಾಜಿಸಿದ್ದರೆ ಊಹೆ ತಪ್ಪು.

ಬೆಂಗಳೂರು ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡಲು ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾ ಅಳವಡಿಸಲಾಗಿದೆ. ಇದರಲ್ಲಿ ದಾಖಲಾದ ಪ್ರಕಾರ ಮೇ ತಿಂಗಳಿನಿಂದ ಸೆಪ್ಟೆಂಬರ್ ತನಕ ಪ್ರತಿ ಗಂಟೆಗೆ 5,687 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಸಂಚಾರಿ ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದಾರೆ.

Bengaluru Traffic Rule Violations Wrong Way Driving Tops The List

ಮೇ 1 ರಿಂದ ಸೆಪ್ಟೆಂಬರ್ ತನಕ ನಗರದಲ್ಲಿ ಪ್ರತಿ ಗಂಟೆಗೆ ಎಷ್ಟು ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಎಐ ಕ್ಯಾಮೆರಾ ಮಾಹಿತಿ ಸಂಗ್ರಹ ಮಾಡಿದೆ. ಅದರಲ್ಲೂ ಮುಂಜಾನೆ 8 ರಿಂದ 9 ಗಂಟೆಯ ತನಕ ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ.

ಯಾವ ಉಲ್ಲಂಘನೆ ಹೆಚ್ಚು?; ಬೆಂಗಳೂರು ನಗರದಲ್ಲಿ ಯಾವ ಸಂಚಾರಿ ನಿಯಮಗಳನ್ನು ವಾಹನ ಸವಾರರು ಹೆಚ್ಚಾಗಿ ಉಲ್ಲಂಘನೆ ಮಾಡುತ್ತಾರೆ? ಎಂಬ ಪ್ರಶ್ನೆ ಸಹಜ. ಪೊಲೀಸರ ಮಾಹಿತಿ ಪ್ರಕಾರ ಒನ್ ವೇನಲ್ಲಿ ಸಂಚಾರ ನಡೆಸುವ ಪ್ರಕರಣಗಳೇ ನಗರದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಬಳಿಕ ಹೆಲ್ಮಟ್ ಇಲ್ಲದ ಪ್ರಯಾಣ ಸೇರಿದಂತೆ ಇತರ ನಿಯಮಗಳ ಉಲ್ಲಂಘನೆಗಳಿವೆ.

ಎಐ ಕ್ಯಾಮೆರಾಗಳು ಪ್ರತಿ ದಿನ 57,942 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದೆ. ಇವುಗಳಲ್ಲಿ ಪ್ರತಿ ಜಂಕ್ಷನ್‌ನಲ್ಲಿ 789 ನಿಯಮ ಉಲ್ಲಂಘನೆ ಪ್ರಕರಣ ನಡೆದಿವೆ. ಬೆಳಗ್ಗೆ 8 ರಿಂದ 9ರ ತನಕ 8,265 ರಿಂದ 9,134 ಸಂಚಾರಿ ನಿಯಮ ಉಲ್ಲಂಘನೆಗಳನ್ನು ಮಾಡಲಾಗಿದೆ.

ಒನ್‌ ವೇನಲ್ಲಿ ಸಂಚಾರ ನಡೆಸುವ 2,300 ಪ್ರಕರಣಗಳು ದಾಖಲಾಗಿದೆ. ಈ ನಿಯಮವನ್ನೇ ಅತಿ ಹೆಚ್ಚು ವಾಹನ ಸವಾರರು ಪಾಲಿಸುವುದಿಲ್ಲ. ಉಳಿದಂತೆ ರೆಡ್ ಲೈಟ್ ಹಾಕಿದ ಮೇಲೆಯೂ ಸಿಗ್ನಲ್ ಜಂಪ್ ಮಾಡುವುದು, ಹೆಲ್ಮೆಟ್ ಇಲ್ಲದೇ ವಾಹನ ಚಾಲನೆ, ಸೀಟ್ ಬೆಲ್ಟ್‌ ಇಲ್ಲದೇ ವಾಹನ ಚಾಲನೆ ನಿಯಮಗಳನ್ನು ಜನರು ಉಲ್ಲಂಘನೆ ಮಾಡುತ್ತಿದ್ದಾರೆ.

ನಗರದಲ್ಲಿ ಬಾಣಸವಾಡಿ, ಹಲಸೂರು, ಅಡುಗೋಡಿ, ಜಯನಗರ, ಮೈಕೋ ಲೇಔಟ್, ಆರ್‌. ಟಿ. ನಗರ, ವಿವಿ ಪುರಂ, ಸದಾಶಿವನಗರ, ಮಲ್ಲೇಶ್ವರ, ಬನಶಂಕರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ ನಗರದಲ್ಲಿ 50ಕ್ಕೂ ಅಧಿಕ ಜಂಕ್ಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾ ಅಳವಡಿಸಲಾಗಿದೆ. ವಾಹನ ಸವಾರರು ನಿಯಮ ಉಲ್ಲಂಘನೆ ಮಾಡಿದ ಬಳಿಕ ದಂಡ ಮೊತ್ತದ ಚಲನ್‌ ಅನ್ನು ಕಳಿಸಲಾಗುತ್ತದೆ. ಈ ಕ್ಯಾಮರಾಗಳು ನಿಖರವಾಗಿ ಸಂಚಾರ ನಿಯಮ ಉಲ್ಲಂಘನೆಯ ಚಿತ್ರವನ್ನು ತೆಗೆದು ನೋಟಿಸ್ ಜೊತೆ ಸವಾರರಿಗೆ ಕಳಿಸಲು ಸಹಾಯಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+