''ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಮೆಟ್ರೋ ವಿಸ್ತರಣೆ ಬೇಡ: ಆರ್‌ಆರ್‌ಟಿಎಸ್ ಸಾರಿಗೆಯೇ ಉತ್ತಮ ಪರಿಹಾರ''
ಬೆಂಗಳೂರು: ರಾಜಧಾನಿ ಬೆಂಗಳೂರು ಮೇಲಿನ ವಾಹನಗಳು ಮತ್ತು ಜನದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಮಹಾನಗರ ಅಕ್ಕಪಕ್ಕದ ಜಿಲ್ಲೆಗಳಿಗೂ ನಮ್ಮ ಮೆಟ್ರೋ ವಿಸ್ತರಣೆಗೆ ನಿರ್ಧರಿಸಿದೆ. ಈಗಾಗಲೇ ತುಮಕೂರು, ರಾಮನಗರ, ದೇವನಹಳ್ಳಿವರೆಗೆ ಮೆಟ್ರೋ ವಿಸ್ತರಿಸಲು ಮುಂದಾಗಿದೆ. ಇದನ್ನು ಆಕ್ಷೇಪಿಸಿರುವ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಪ್ರಾದೇಶಿಕ ಕ್ಷಿಪ್ತ ಸಾರಿಗೆ ವ್ಯವಸ್ಥೆ (RRTS) ಕಾರಿಡಾರ್ ನಿರ್ಮಿಸುವುದೇ ಈ ಸಮಸ್ಯೆಗಳಿಗೆ ಪರಿಹಾರವೆಂದು ತಿಳಿಸಿದ್ದಾರೆ.
ಉದ್ದೇಶಿತ ನಮ್ಮ ಮೆಟ್ರೋ ವಿಸ್ತರಣೆ ಯೋಜನೆ ಬದಲಿಗೆ ಆರ್‌ಆರ್‌ಟಿಎಸ್ ಕಾರಿಡಾರ್ ಯೋಜನೆ ಕೈಗೆತ್ತಿಕೊಳ್ಳುವುದು ಉತ್ತಮ ಪರಿಹಾರ ಎಂದಿದ್ದಾರೆ. ಅಲ್ಲದೇ ಡಿಸೆಂಬರ್ 8 ರಂದು ಲೋಕಸಭೆಯಲ್ಲಿ ನಿಯಮ 377 ರ ಅಡಿಯಲ್ಲಿ ನೋಟಿಸ್ ಸಲ್ಲಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಶನಿವಾರ (ಡಿಸೆಂಬರ್ 27) ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಿಂದ ತುಮಕೂರು, ಕೋಲಾರ, ದೇವನಹಳ್ಳಿ, ರಾಮನಗರ ಮತ್ತು ಮಂಡ್ಯಕ್ಕೆ ಮೆಟ್ರೋ ಸಾರಿಗೆಗೆ ಪಾರ್ಯಾಯವಾಗಿ ಕಡಿಮೆ ಖರ್ಚಿನ ಹಾಗೂ ತ್ವರತ ಸೇವೆ ನೀಡುವ ಆರ್‌ಆರ್‌ಟಿಎಸ್ ಕಾರಿಡಾರ್ ನಿರ್ಮಿಸಬೇಕು. ಇದರಿಂದ ಬೆಂಗಳೂರು ಮೇಲಿರುವ ದಟ್ಟಣೆ ತ್ವರಿತ ತಗ್ಗಿಸಲು, 15-20 ಲಕ್ಷ ದೈನಂದಿನ ಪ್ರಯಾಣಿಕರ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ನೀಡದಂತಾಗುತ್ತದೆ ಎಂದು ಅವರು ಒತ್ತಾಯಿಸಿದ್ದಾರೆ. ಗಂಟೆಗೆ 50 ರಿಂದ 100 ಕಿ.ಮೀ ವೇಗದಲ್ಲಿ ಚಲಿಸುವ ನಮ್ಮ ಮೆಟ್ರೋಗಿಂತ ಪ್ರಾದೇಶಿಕ ಮಾರ್ಗಗಳಿಗೆ 160 ಕಿಲೋ ಮೀಟರ್ ವೇಗದಲ್ಲಿ ಸಂಪರ್ಕ ಕಲ್ಪಿಸುವ ಸಾಮರ್ಥ್ಯ ಇರುವ ಆರ್‌ಆರ್‌ಟಿಎಸ್ ಯೋಜನೆ ಜಾರಿಗೊಳಿಸುವುದು ಸೂಕ್ತವೆಂದು ಪ್ರತಿಪಾದಿಸಿದ್ದಾರೆ.
ಸಂಸದರು ಈ ಹಿಂದೆಯು ಹೇಳಿದಂತೆ ಬೆಂಗಳೂರಿನ ಮೆಟ್ರೋ ಹಸಿರು ಮಾರ್ಗ (Bengaluru Metro Green Line Extension) ಮಾದಾವರ-ತುಮಕೂರುವರೆಗೆ (59ಕಿ.ಮೀ.) ವಿಸ್ತರಿಸುವ ಯೋಜನೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ದಪಡಿಸಲು ಆರ್ವೀ ಕಂಪನಿಯನ್ನು ಟೆಂಡರ್‌ನಲ್ಲಿ ಬಿಎಂಆರ್‌ಸಿಎಲ್ ಅಂತಿಮಗೊಳಿಸಿದೆ. ಈ 1.26ಕೋಟಿ ರೂ. ವೆಚ್ಚದ ಈ ಡಿಪಿಆರ್ ಗುತ್ತಿಗೆಯನ್ನು ರದ್ದುಗೊಳಿಸುವಂತೆ ಸಂಸದರು ಆಗ್ರಹಿಸಿದ್ದಾರೆ.
ಡಿಕೆಶಿ ಕೇಂದ್ರ ಸಚಿವರ ಭೇಟಿ ಬೆನ್ನಲ್ಲೆ ಸಂಸದರ ಒತ್ತಾಯ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇತ್ತೀಚೆಗೆ ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿದ್ದರು. ಆಗ 'ಬಿಡದಿ-ಮೈಸೂರು, ಹಾರೋಹಳ್ಳಿ-ಕನಕಪುರ, ನೆಲಮಂಗಲ-ತುಮಕೂರು, ವಿಮಾನ ನಿಲ್ದಾಣ-ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆ-ಕೋಲಾರ' ನಡುವಿನ ಆರ್‌ಆರ್‌ಟಿಎಸ್ ಕಾರಿಡಾರ್‌ಗಳನ್ನು ಯೋಜನೆ ಅನುಮೋದನೆ ನೀಡುವುದನ್ನು ತ್ವರಿತಗೊಳಿಸುವಂತೆ ಕೋರಿದ್ದೇನೆ. ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕ ಸ್ಪಂದನೆ ನೀಡುವುದಾಗಿ ತಿಳಿಸಿದ್ದಾರೆಂದು ಅವರು ಹೇಳಿದ್ದರು. ಇದರ ಬೆನ್ನಲ್ಲೆ ಮೆಟ್ರೋ ವಿಸ್ತರಣೆ ಮಾಡಬೇಕೆಂದುಕೊಂಡ ಇತರ ಜಿಲ್ಲೆಗಳಿಗೂ ಇದೇ ಆರ್‌ಆರ್‌ಟಿಎಸ್ ಕಾರಿಡಾರ್ ಸ್ಥಾಪನೆಗೆ ಸರ್ಕಾರ ಗಮನಹರಿಸುವಂತೆ ಪಿ.ಸಿ.ಮೋಹನ್ ತಿಳಿಸಿದ್ದಾರೆ.
ಮೆಟ್ರೋ ಯೋಜನೆಗಳಿಗೆ ಹೋಲಿಸಿದರೆ ಆರ್‌ಆರ್‌ಟಿಎಸ್ ರೈಲಿನ ವೇಗ ಹೆಚ್ಚು. ಯೋಜನೆ ಜಾರಿಗೆ ಮೆಟ್ರೋಗಿಂತ ವೆಚ್ಚ ಕಡಿಮೆ ಆಗುತ್ತದೆ. ತ್ವರಿತವಾಗಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಬೆಂಗಳೂರು-ತುಮಕೂರು ಸೇರಿ ಉದ್ದೇಶಿತ ಮಾರ್ಗದಲ್ಲಿ ಆರ್‌ಆರ್‌ಟಿಎಸ್ ಕಾರಿಡಾರ್ ಸ್ಥಾಪನೆ ಗುರಿ ಇಟ್ಟಿಕೊಳ್ಳಬೇಕೆಂದು ಅವರು ಇತ್ತೀಚೆಗೆ ಅಭಿಪ್ರಾಯ ಹೊರ ಹಾಕಿದ್ದರು. ಇದೀಗ ಆ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.
Raised a Notice under Rule 377 in the Lok Sabha seeking RRTS corridors around Bengaluru covering Tumakuru, Hosur, Kolar, Ramanagara and Mandya. @OfficialBMRCL must cancel the ₹1.2 Cr DPR for Metro to Tumakuru. Metro is inefficient for regional travel; RRTS is the only solution⚠️ pic.twitter.com/eznE0nz4z4
— P C Mohan (@PCMohanMP) December 26, 2025
ಏನಿದು ಆರ್‌ಆರ್‌ಟಿಎಸ್ ಯೋಜನೆ?
ಸಾರಿಗೆ ಮೂಲಸೌಕರ್ಯದ ಮೇಲಿನ ಒತ್ತಡ ಕಡಿಮೆ ಮಾಡಲು, ನಗರ ಪ್ರದೇಶದಿಂದ ಹತ್ತಿರದ ಸ್ಥಳೀಯ ಪ್ರದೇಶಗಳಿಗೆ ವೇಗದ ಸಂಪರ್ಕ ಕಲ್ಪಿಸುವ ಸಾರಿಗೆ ಯೋಜನೆ ಆಗಿದೆ. ಉದಾಹರಣೆಗೆ ದೆಹಲಿ-ಮೀರತ್ ಮಧ್ಯದ 103 ಕಿಲೋ ಮೀಟರ್ ಉದ್ದದ ಮಾರ್ಗವನ್ನು ರಸ್ತೆ ಮೂಲಕ ಕ್ರಮಿಸಲು ಗಂಟೆಗಳ ಸಮಯ ಹಿಡಿಯುತ್ತದೆ. ಅದೇ ರೈಲು ಮಾರ್ಗವಾಗಿ 83 ಕಿಲೋ ಮೀಟರ್ ದೂರವಿದೆ. ಈ ಎರಡು ನಗರಗಳ ಮಧ್ಯ ಗಂಟೆಗೆ 160ಕಿಲೋ ಮೀಟರ್ ವೇಗದ ಈ ಆರ್‌ಆರ್‌ಟಿಎಸ್ ರೈಲು ಬರೀ 60 ನಿಮಿಷದಲ್ಲಿ ತುಲುಪುತ್ತದೆ. ಈ ಯೋಜನೆಯನ್ನು ಅಲ್ಲಿ ಪರಿಚಯಿಸಲಾಗಿದೆ. ಇದರಿಂದ ಸಮಯ ಉಳಿತಾಯ, ವೇಗದ ಸಾರಿಗೆ ಸಿಕ್ಕಂತಾಗಿ ಮಹಾನಗರದ ಮೇಲಿನ ದಟ್ಟಣೆ ಕಡಿಮೆ ಆಗುತ್ತದೆ. ಇಂತಹ ಯೋಜನೆ ಬೆಂಗಳೂರಿನಲ್ಲೂ ಪರಿಚಯಿಸಬೇಕೆಂದು ಸಂಸದರು ಮನವಿ ಮಾಡಿದ್ದಾರೆ.
-
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್












Click it and Unblock the Notifications