Bengaluru Traffic Fine: ಇನ್ಮುಂದೆ ಇದಕ್ಕೆ ಟ್ರಾಫಿಕ್ ಫೈನ್ ಕಟ್ಟಂಗಿಲ್ಲ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ದು ಬಹುದೊಡ್ಡ ಸಮಸ್ಯೆ. ಅದರಲ್ಲೂ ಫೀಕ್ ಅವರ್‌ಗಳಲ್ಲಿ ಜನ ತಾಸುಗಟ್ಟಲ್ಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಎರಡು ಮೂರು ವರ್ಷಗಳ ಮುಂಚೆಗಿಂತ ಹೆಚ್ಚು ಟ್ರಾಫಿಕ್ ಜಾಮ್ ಆಗುತ್ತಿದೆ ಎನ್ನುವ ಆರೋಪಗಳೂ ಇವೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಬೆಂಗಳೂರು ಟ್ರಾಫಿಕ್ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಟ್ರಾಫಿಕ್‌ನಿಂದ ತುರ್ತು ಸಂದರ್ಭದಲ್ಲಿ ಸಮಸ್ಯೆಗಳಾಗುತ್ತಿವೆ.
ಇದೀಗ ಬೆಂಗಳೂರಿನಲ್ಲಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ದಿನ ನಿತ್ಯವೂ ಟ್ರಾಫಿಕ್‌ನಲ್ಲೇ ಅರ್ಧ ಜನ ಹೈರಾಣಾಗುತ್ತಾರೆ. ಇನ್ನು ತುರ್ತು ಸಂದರ್ಭಗಳಲ್ಲಿ ಹೇಳುವುದೇ ಬೇಡ. ಕೆಲವರು ಟ್ರಾಫಿಕ್ ತಪ್ಪಿಸುವ ಉದ್ದೇಶದಿಂದ ಪುಟ್‌ಪಾತ್‌ನ ಮೇಲೆ, ಸಿಗ್ನಲ್ ಜಂಪ್ ಮಾಡುವುದು ಹಾಗೂ ಒನ್‌ವೇನಲ್ಲಿ ಹೋಗುವುದೂ ಸಹ ಇದೆ. ಈ ರೀತಿ ನಿಯಮ ಉಲ್ಲಂಘನೆ ಮಾಡುವವರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಚುರುಕು ಮುಟ್ಟಿಸುತ್ತಿದ್ದಾರೆ. ಇದೀಗ ಬೆಂಗಳೂರು ಪೊಲೀಸರು ನಿರ್ದಿಷ್ಟ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಟ್ರಾಫಿಕ್ ರೂಲ್ಸ್‌ನಿಂದ ಎಕ್ಸ್‌ಕ್ಯೂಸ್ (ವಿನಾಯಿತಿ) ನೀಡಿದ್ದಾರೆ.

ಆಂಬ್ಯುಲೆನ್ಸ್ಗೆ ದಾರಿ ಬಿಟ್ಟರೆ ದಂಡವಿಲ್ಲ: ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎಂತಹ ಗಂಭೀರ ಸಮಸ್ಯೆ ಎಂದರೆ, ಟ್ರಾಫಿಕ್‌ನಲ್ಲಿ ಆಂಬ್ಯುಲೆನ್ಸ್ ಬಂದರೂ ಜನ ದಾರಿ ಬಿಡಲು ಹಿಂದೆ ಮುಂದೆ ನೋಡುತ್ತಾರೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ, ದಂಡ ಬೀಳುತ್ತದೆ ಎನ್ನುವ ಆತಂಕವೇ ಇದಕ್ಕೆ ಕಾರಣ. ಟ್ರಾಫಿಕ್ ಸಿಗ್ನಲ್ ಗ್ರೀನ್ ಆಗಲಿ ಎಂದು ವಾಹನ ಸವಾರರು ಕಾಯುತ್ತಿರುತ್ತಾರೆ. ಇದೀಗ ಈ ಬಗ್ಗೆ ಟ್ರಾಫಿಕ್ ಪೊಲೀಸರು ಗುಡ್‌ನ್ಯೂಸ್‌ವೊಂದನ್ನು ನೀಡಿದ್ದಾರೆ. ಆಂಬ್ಯುಲೆನ್ಸ್ ಹೋಗಲು ದಾರಿ ಬಿಟ್ಟುಕೊಟ್ಟರೆ ನೀವು ದಂಡ ಪಾವತಿಸಬೇಕಾಗಿಲ್ಲ ಎಂದಿದ್ದಾರೆ.
ಆಂಬ್ಯುಲೆನ್ಸ್ ಹೋಗುವ ಕಾರಣಕ್ಕೆ ನೀವು (ವಾಹನ ಸವಾರರು) ಟ್ರಾಫಿಕ್ ಜಂಪ್ ಅಥವಾ ನಿಯಮ ಉಲ್ಲಂಘನೆ ಮಾಡಿದ್ದರೆ, ದಂಡ ಕಟ್ಟಬೇಕಾಗಿಲ್ಲ. ಚಲನ್ ಆಗಿದ್ದರೂ, ದಾರಿ ಮಾಡಿಕೊಟ್ಟವರ ಟ್ರಾಫಿಕ್ ಫೈನ್ ಅನ್ನು ಮನ್ನಾ ಮಾಡುವುದಾಗಿ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್ ಅನುಚೇತ್ ಅವರು ಹೇಳಿದ್ದಾರೆ. ಈ ಮೂಲಕ ಜೀವ ಉಳಿಸಿವುದು ಮೊದಲ ಆದ್ಯತೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.
ವಾಹನ ಸವಾರರು ಯಾವುದೇ ಆತಂಕವಿಲ್ಲದೆ (ಟ್ರಾಫಿಕ್ ಫೈನ್‌ನ) ಆಂಬ್ಯುಲೆನ್ಸ್ ಹೋಗಲು ಅವಕಾಶ ಮಾಡಿಕೊಡಬಹುದಾಗಿದೆ. ಒಂದೊಮ್ಮೆ ಫೈನ್ ಬಿದ್ದರೂ, ಯಾವ ಕಾರಣಕ್ಕಾಗಿ ಸಿಗ್ನಲ್ ಬ್ರೇಕ್ ಮಾಡಬೇಕಾಯಿತು ಎಂದು ಹೇಳಿದರೆ ಸಾಕು. ಟ್ರಾಫಿಕ್ ಪೊಲೀಸರು ಆ ಫೈನ್ ಮನ್ನಾ ಮಾಡಲಿದ್ದಾರೆ. ಆದರೆ, ಇದು ನಿಖರವಾಗಿರಬೇಕು ಎಂದೂ ಹೇಳಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಟ್ರಾಫಿಕ್ ಕಂಟ್ರೋಲ್ ಮಾಡುವುದಕ್ಕೆ ಬೆಂಗಳೂರು ಟ್ರಾಫಿಕ್ ಪೊಲೀಸರು ಎಐ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಒಟ್ಟು 60 ಜಂಕ್ಷನ್ಗಳಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದ್ದು, ಇದು ಯಶಸ್ವಿಯಾಗಿದೆ. 165 ಜಂಕ್ಷನ್ಗಳಲ್ಲಿ ಎಐ ತಂತ್ರಜ್ಞಾನ ಅಳವಡಿಸಲಾಗಿದೆ. ಬೆಂಗಳೂರಿನಲ್ಲಿ ಶೇಕಡ 68 ರಷ್ಟು ಬೈಕ್‌ಗಳಿವೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.












Click it and Unblock the Notifications