ಬೆಂಗಳೂರಿನ ಭಯಾನಕ ಟ್ರಾಫಿಕ್‌: 4 ವರ್ಷದಲ್ಲಿ ಸತ್ತವರೆಷ್ಟು?

ಬೆಂಗಳೂರು, ಜು.30: ಹೆಲ್ಮೆಟ್‌ ಹಾಕಿಕೊಂಡು ಬೈಕ್‌ ಓಡಿಸಿ, ಅತಿಯಾದ ವೇಗದಲ್ಲಿ ವಾಹನ ಚಲಾಯಿಸಬೇಡಿ ಎಂದು ಎಷ್ಟು ಹೇಳಿದರು ಜನರು ತಲೆ ಕೆಡಿಸಿಕೊಳ್ಳುವುದಿಲ್ಲ, ಆ ಸಮಯಕ್ಕೆ ತಮಗೆ ಏನು ತೋಚುತ್ತದೆಯೋ ಅದನ್ನೇ ಮಾಡುತ್ತಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಎಷ್ಟು ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದರೆ ದಿಗ್ಭ್ರಮೆಯಾಗುತ್ತದೆ.

ಬೆಂಗಳೂರಲ್ಲೊಂದೇ 2014-18ರವರೆಗೆ ರಸ್ತೆ ಅಪಘಾತದಲ್ಲಿ 3250 ಮಂದಿ ಬಲಿಯಾಗಿದ್ದು, 18,694 ಮಂದಿ ಗಾಯಗೊಂಡಿದ್ದಾರೆ, ನಗರದಲ್ಲಿ ದ್ವಿಚಕ್ರ ವಾಹನ ಅಪಘಾತಗಳು ಹೆಚ್ಚುತ್ತಿವೆ, ಹೆಲ್ಮೆಟ್‌ ಇಲ್ಲದೆ ಹಿಂಬದಿ ಸವಾರರು ಹೆಚ್ಚು ಸಾವನ್ನಪ್ಪುತ್ತಿದ್ದಾರೆ. ಟ್ರಾಫಿಕ್‌ ನಿಯಮ ಪಾಲಿಸುವಂತೆ ಸಂಚಾರ ಪೊಲೀಸರುಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.

Bengaluru traffic claims 3,250 lives in the last four years

511 ಕಾರು, 477 ಮಂದಿ ಲಾರಿ, 458 ಮಂದಿ ಬೈಕ್‌, 352 ಅಪರಿಚಿತ ವಾಹನ ಅಪಘಾತಗಳಿಂದ ಮೃತಪಟ್ಟಿದ್ದಾರೆ. 2014-15ರಲ್ಲಿ 740, 2016-17ರಲ್ಲಿ 642, 2018 ಜೂನ್‌ವರೆಗೆ 338 ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬೆಂಗಳೂರು ಟ್ರಾಫಿಕ್‌ ಪೊಲೀಸರ ದಾಖಲೆ ತಿಳಿಸಿದೆ.

ಎಲ್ಲ ಚಾಲಕರು ಟ್ರಾಫಿಕ್‌ ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ಟ್ರಾಫಿಕ್‌ ವಿಭಾಗದ ಹೆಚ್ಚುವರಿ ಆಯುಕ್ತ ಹಿತೇಂದ್ರ ಹೇಳಿದ್ದಾರೆ. ಈ ವರ್ಷ ಇಲ್ಲಿವರೆಗೆ 1,660 ಅಪಘಾತಗಳಲ್ಲಿ ಯಾರೂ ಮೃತಪಟ್ಟಿಲ್ಲ, 2,102 ಮಂದಿ ಗಾಯಗೊಂಡಿದ್ದಾರೆ. ಉಳಿದ 330 ಅಪಘಾತಗಳಲ್ಲಿ 338 ಪ್ರಾ ಣ ಕಳೆದುಕೊಂಡಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+