• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಡ್ಡಾದಿಡ್ಡಿ ವಾಹನ ಚಲಾವಣೆಯಲ್ಲಿ ಬೆಂಗಳೂರು ನಂ.1

By Vanitha
|

ಬೆಂಗಳೂರು, ಜುಲೈ, 21 : ಯಾವಾಗಲೂ ನಂಬರ್ ಒನ್ ಸ್ಥಾನ ಪಡೆಯಲು ಹವಣಿಸುವ ಸಿಲಿಕಾನ್ ಸಿಟಿ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ ಸಂಭವಿಸುವ ಅಪಘಾತ ಸಂಖ್ಯೆಯಲ್ಲಿಯೂ ಮೂಂಚೂಣಿ ಸ್ಥಾನ ಪಡೆದುಕೊಂಡಿದೆ.

ನಗರದಲ್ಲಿ ವಾಹನ ದಟ್ಟಣೆ ಏರಿದಂತೆ ಅಪಘಾತಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ವಾಹನ ಚಲಾಯಿಸುವಿಕೆಯಲ್ಲಿ ಜನರು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಮನಸ್ಸಿಗೆ ಬಂದಂತೆ ಸವಾರಿ ಮಾಡುವುದು ಅಪಘಾತ ಸಂಭವಿಸಲು ಪ್ರಮುಖ ಕಾರಣ ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ(NCRB) ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.[ಅಪಘಾತ ತಡೆಯಲು ಎಚ್ ಡಿ ಕ್ಯಾಮರ ಅಳವಡಿಸಿದ ಪೊಲೀಸರು]

ವಾಹನ ಚಲಾವಣೆ ವೇಳೆ ಸವಾರರು ಮೊಬೈಲ್ ಬಳಕೆ ಮಾಡುವುದು, ಮದ್ಯ ಸೇವಿಸಿರುವುದು, ಟ್ರಾಫಿಕ್ ಸಿಗ್ನಲ್ ನಲ್ಲಿ ಶಿಸ್ತಿನ ಕ್ರಮ ಅನುಸರಿಸದಿರುವುದು, ಅತಿ ವೇಗವಾಗಿ, ತಪ್ಪು ಮಾರ್ಗದಲ್ಲಿ ವಾಹನ ಓಡಿಸುವುದು, ಒನ್ ವೇ ಯಲ್ಲಿ ವಾಹನಗಳ ನಡುವೆ ಅಂತರ ಕಾಯ್ದುಕೊಳ್ಳದಿರುವುದು ಇವೆಲ್ಲವೂ ಅಪಘಾತ ಹೆಚ್ಚಳಕ್ಕೆ ಮುಖ್ಯ ಕಾರಣ ಎಂದು ನಗರ ಟ್ರಾಫಿಕ್ ಪೊಲೀಸ್ ಹೇಳಿದ್ದಾರೆ.

ಅಪಘಾತಗಳ ವಿವರ ಇಂತಿದೆ:

2014ರಲ್ಲಿ ಸುಮಾರು 90% ನಷ್ಟು ಅಂದರೆ ಸುಮಾರು 5,004 ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 4,004 ಮಂದಿ ವೇಗವಾಗಿ ವಾಹನ ಓಡಿಸಿ ಅಪಘಾತಕ್ಕೆ ಒಳಗಾದವರು. ಇವರಲ್ಲಿ 626 ಮಂದಿ ಮೃತಪಟ್ಟಿದ್ದು, 2,707 ಮಂದಿ ನೋವಿನಿಂದ ನರಳುತ್ತಿದ್ದಾರೆ. ಅಪಘಾತಗಳ ಸರಣಿಯಲ್ಲಿ ಬೆಂಗಳೂರು ನಗರ ಪ್ರಥಮ ಸ್ಥಾನ ಪಡೆದುಕೊಂಡರೆ, ಕಲ್ಕತ್ತಾ 2ನೇ ಸ್ಥಾನದಲ್ಲಿದೆ.

ನಗರದ ರಾಷ್ಟ್ರೀಯ ಹೆದ್ದಾರಿಗಳಾದ ಬಳ್ಳಾರಿ (122) ಹೊಸೂರು (107) ಹಳೆ ಮದ್ರಾಸ್ ರಸ್ತೆ (104) ಗಳಲ್ಲಿ ಅಪಘಾತಗಳು ಹೆಚ್ಚು ಸಂಭವಿಸಲಿದ್ದು ಅನುಕ್ರಮವಾಗಿ 1ನೇ, 2ನೇ,3ನೇ ಸ್ಥಾನವನ್ನು ಪಡೆದುಕೊಂಡಿದೆ.

-
ಅಪಘಾತಗಳ ಸಂಖ್ಯೆ ಸಾವಿನ ಸಂಖ್ಯೆ ಗಾಯಾಳುಗಳ ಸಂಖ್ಯೆ 2014 5,004 729 4,098 ರಾಷ್ಟ್ರೀಯ ಹೆದ್ದಾರಿ 847 169 1,194 ರಾಜ್ಯ ಹೆದ್ದಾರಿ 266 34 261 ಎಕ್ಸ್ ಪ್ರೆಸ್ ದಾರಿ 24
4 6

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore have taken 1st place on reckless driving.National Crime Records Bureau(NCRB)conducted study and submitted data.The city has seen the highest number of deaths due to reckless driving.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more