Bengaluru Toll Hike: ನಗರದ ವಾಹನ ಸವಾರರಿಗೆ ಶಾಕ್: ನೈಸ್ ರಸ್ತೆ, ಇ-ಸಿಟಿ ಎಕ್ಸ್‌ಪ್ರೆಸ್‌ವೇ ಟೋಲ್ ದರ ಭಾರೀ ಹೆಚ್ಚಳ
Bengaluru Toll Hike: ಬೆಂಗಳೂರಿನ ವಾಹನ ಸವಾರಿಗೆ ಜುಲೈ ಮೊದಲ ವಾರದಲ್ಲೇ ಸಂಕಷ್ಟ ಎದುರಾಗಿದೆ. ವಿವಿಧ ರಸ್ತೆಗಳ ಟೋಲ್ ದರವು ಶೇ.10ರಷ್ಟು ಹೆಚ್ಚಳವಾಗಿದೆ. ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ರಸ್ತೆಗಳ ಮಾರ್ಗಗಳ ಮೂಲಕ ಸಂಚರಿಸುವ ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಲಿದೆ. ಜುಲೈ 2ರಿಂದ ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ ಎಕ್ಸ್‌ಪ್ರೆಸ್ ವೇ ಹಾಗೂ ಹೊಸೂರು ರಸ್ತೆ ಮಾರ್ಗಗಳ ಟೋಲ್ ದರಗಳನ್ನು ಶೇ.10ರಷ್ಟು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರಗಳು ಈಗಾಗಲೇ ಜಾರಿಯಲ್ಲಿವೆ.
ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (ನೈಸ್) ಟೋಲ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ. ಬೆಂಗಳೂರು - ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆಯ ಪೆರಿಫೆರಲ್ ರಸ್ತೆ ಮತ್ತು ಲಿಂಕ್ ರಸ್ತೆ ಘಟಕಗಳ ಟೋಲ್ ದರ ಹೆಚ್ಚಳ ಅಥವಾ ಪರಿಷ್ಕರಣೆ ಮಾಡುವುದಾಗಿ ಹೇಳಲಾಗಿದೆ. ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುವ ಸುಮಾರು 40.8 ಕಿ.ಮೀ. ಉದ್ದದ ಪೆರಿಫೆರಲ್ ರಸ್ತೆಯ ಜೊತೆಗೆ 8.1 ಕಿ.ಮೀ. ಉದ್ದದ ಲಿಂಕ್ ರಸ್ತೆಯಲ್ಲೂ ಹೊಸ ದರ ಅನ್ವಯವಾಗಲಿದೆ. ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಚಲಿಸುವ ಮತ್ತು ರಸ್ತೆಯ ಆಧಾರದ ಮೇಲೆ ಕನಿಷ್ಠ ಶೇ 10ರಷ್ಟು ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಈ ಮೂಲಕ ಈ ಮಾರ್ಗಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಹೊಸ ಶಾಕ್ ಹಾಗೂ ಬೆಲೆ ಏರಿಕೆಯ ಬಿಸಿ ಮುಟ್ಟಿದಂತೆ ಆಗಿದೆ.

Bengaluru Toll Hike: ಬಿಎಂಟಿಸಿ ಬಸ್: ಟಿಕೆಟ್ ಬೆಲೆ ಹೆಚ್ಚಳ ಸಾಧ್ಯತೆ
ಇನ್ನು ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ ಎಕ್ಸ್‌ಪ್ರೆಸ್ ವೇ ಹಾಗೂ ಹೊಸೂರು ರಸ್ತೆಯ ಟೋಲ್ ದರವನ್ನು ಶೇ.10ರಷ್ಟು ಹೆಚ್ಚಳವಾಗಿರುವುದು ಮುಂದಿನ ದಿನಗಳಲ್ಲಿ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟುವ ಸಾಧ್ಯತೆ ಇದೆ. ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಮಾರ್ಗಗಳ ಟೋಲ್ ಬೆಲೆ ಹೆಚ್ಚಳವಾಗಿದೆ. ಇದರಿಂದ ಬನಶಂಕರಿ, ತಾವರೆಕೆರೆ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ಹಲವು ಪ್ರದೇಶಗಳನ್ನು ಸಂಪರ್ಕಿಸುವ ನೈಸ್ ರಸ್ತೆಯ ಮೂಲಕ ಸೇವೆ ನೀಡುವ ಬಿಎಂಟಿಸಿಯೂ ದರ ಏರಿಸುವ ಸಾಧ್ಯತೆ ಇದೆ. ಟೋಲ್ ವೆಚ್ಚ ಹೆಚ್ಚಳದ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಬಿಎಂಟಿಸಿ ಪ್ರಯಾಣ ದರ ಪರಿಷ್ಕರಣೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ಇ-ಸಿಟಿ ಫ್ಲೈಓವರ್ ಟೋಲ್ ದರವೂ ಹೆಚ್ಚಳ: ಅಲ್ಲದೆ ಬೆಂಗಳೂರು ಎಲಿವೇಟೆಡ್ ಟೋಲ್‌ವೇ ಪ್ರೈವೇಟ್ ಲಿಮಿಟೆಡ್ (ಬಿಇಟಿಪಿಎಲ್) ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಸಂಪರ್ಕಿಸುವ 9.98 ಕಿ.ಮೀ. ಎಕ್ಸ್‌ಪ್ರೆಸ್ ವೇಯಲ್ಲೂ ಟೋಲ್ ದರ ಪರಿಷ್ಕರಿಸಲು ನಿರ್ಧರಿಸಲಾಗಿದೆ. ಇದರಿಂದ ಈ ಭಾಗದ ವಾಹನ ಸವಾರರಿಗೂ ಟೋಲ್ ಬಿಸಿ ಮುಟ್ಟಲಿದೆ.












Click it and Unblock the Notifications