ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಜ್ಜಾಲ: ಶೀಘ್ರ ತಲೆಯೆತ್ತಲಿದೆ ರೈಲ್ವೆ ವಿಪತ್ತು ನಿರ್ವಹಣಾ ಕೇಂದ್ರ

ಬೆಂಗಳೂರಿನ ಹೊರವಲಯದಲ್ಲಿ ತಲೆ ಎತ್ತಲಿರುವ ರೈಲ್ವೆ ವಿಪತ್ತು ನಿರ್ವಹಣಾ ಕೇಂದ್ರ. ಹೆಜ್ಜಾಲದ ಬಳಿ ಸುಮಾರು 3.32 ಚದುರ ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಕೇಂದ್ರ. ಮುಂದಿನ ವರ್ಷ ಡಿಸೆಂಬರ್ ನಲ್ಲಿ ಕಾರ್ಯರಂಭ ಮಾಡುವ ಸಾಧ್ಯತೆ.

|
Google Oneindia Kannada News

ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ವಿಪತ್ತು ನಿರ್ವಹಣಾ ತರಬೇತಿ ಕೇಂದ್ರವು ಮುಂದಿನ ವರ್ಷ ಡಿಸೆಂಬರ್ ನಲ್ಲಿ ಕಾರ್ಯಾರಂಭ ಮಾಡಲಿದೆ.

ಅ.18ರಿಂದ ಬೈಯಪ್ಪನಳ್ಳಿ-ವೈಟ್‌ಫೀಲ್ಡ್‌ ಸಬ್ ಅರ್ಬನ್ ರೈಲು ಸಂಚಾರಅ.18ರಿಂದ ಬೈಯಪ್ಪನಳ್ಳಿ-ವೈಟ್‌ಫೀಲ್ಡ್‌ ಸಬ್ ಅರ್ಬನ್ ರೈಲು ಸಂಚಾರ

ಎಲ್ಲಿದೆ ಈ ಕೇಂದ್ರ?
ಬೆಂಗಳೂರಿನ ಹೊರವಲಯದಲ್ಲಿರುವ ಹೆಜ್ಜಾಲದಲ್ಲಿ, ಸುಮಾರು 3.33 ಚದುರ ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿಈ ಕೇಂದ್ರವು ನಿರ್ಮಾಣವಾಗುತ್ತಿದ್ದು, ಸುಮಾರು 44.42 ಕೋಟಿ ರು.ಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ.

BENGALURU TO GET INDIA’S FIRST DISASTER VILLAGE

ತರಬೇತಿ ಹೇಗೆ?
ರೈಲು ದುರಂಗಳಾದ ಸಂದರ್ಭಗಲ್ಲಿ ಸ್ಥಳಕ್ಕೆ ದೌಡಾಯಿಸುವ ರೈಲ್ವೇ ಸುರಕ್ಷಾ ದಳದ ಸಿಬ್ಬಂದಿಗೆ ಪ್ರಯಾಣಿಕರನ್ನು ರಕ್ಷಿಸಲು ಸೂಕ್ತ ರೀತಿಯಲ್ಲಿ ತರಬೇತಿ ನೀಡುವ ವಿಶೇಷ ಕೇಂದ್ರ ಇದಾಗಿದ್ದು, ಇದರಲ್ಲಿ ನೈಜರೀತಿಯಲ್ಲೇ ಸಂದರ್ಭಗಳಲ್ಲಿ ಸೃಷ್ಟಿಸಿ ಅಂಥ ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಕಾಪಾಡುವ ಕುರಿತಂತೆ ಸಿಬ್ಬಂದಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ವಿಪತ್ತು ನಿರ್ವಹಣಾ ಪಡೆಗಳಿಗೆ ವಿಶೇಷ ತರಬೇತಿ ನೀಡುವ ಮಾದರಿಯಲ್ಲೇ ರೈಲ್ವೇ ವಿಪತ್ತು ನಿರ್ವಹಣಾ ಸಿಬ್ಬಂದಿಗೂ ತರಬೇತಿ ನೀಡಲಾಗುತ್ತದೆಂದು ಮೂಲಗಳು ತಿಳಿಸಿವೆ.

English summary
Trains falling into rivers and coaches catching fire will be common sights in the country’s first ‘Railways disaster management village’ expected to come up on the outskirts of Bengaluru by December next year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X