1.5 ಕೋಟಿ ಐಷಾರಾಮಿ ಫ್ಲಾಟ್ ಖರೀದಿಸಿದ ಬಳಿಕ ಶಾಕ್: ಟೆಕ್ಕಿ ಹೇಳಿದ ಕಹಿ ಅನುಭವ ವೈರಲ್

ಬೆಂಗಳೂರು ನಗರದಲ್ಲಿ ಮನೆ ಖರೀದಿಸಬೇಕು ಎನ್ನುವುದು ಎಲ್ಲರ ಕನಸು, ಅದೇಷ್ಟೊ ಜನಕ್ಕೆ ಮನೆ ಖರೀದಿಸಿದ ಬಳಿಕ ಎದುರಾಗುವ ಸಮಸ್ಯೆಗಳು ಹಲವರನ್ನು ತುಂಬಾ ನಿರಾಶೆಗೊಳಿಸುತ್ತಿವೆ. ದುಬಾರಿ EMI, ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಮತ್ತು ಮೂಲಸೌಕರ್ಯ ಸಮಸ್ಯೆಗಳ ನಡುವೆಯೇ ಅನೇಕ ಮನೆ ಮಾಲೀಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರು 1.5 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಆದರೆ ಮನೆ ಖರೀದಿಸಿ ನಂತರ ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣ Grapevine ನಲ್ಲಿ ಬರೆದುಕೊಂಡಿದ್ದು, ಅದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Bengaluru

ಫೋನ್‌ಪೇನಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿಯೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡು, "1.5 ಕೋಟಿ ರೂ. ವೆಚ್ಚದಲ್ಲಿ ಫ್ಲಾಟ್ ಖರೀದಿಸಿದ್ದರೂ ಪ್ರತೀ ತಿಂಗಳು 8,000 ರೂಪಾಯಿ ನಿರ್ವಹಣಾ ಶುಲ್ಕವನ್ನು ಪಾವತಿಸಬೇಕಾಗಿದೆ" ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 1.4 ಕೋಟಿ ಕೊಟ್ಟು 33 ವರ್ಷದ ಹಳೇ ಅಪಾರ್ಟ್ಮೆಂಟ್ ಖರೀದಿಸುವುದು ಸೇಫಾ? ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ
ಬೆಂಗಳೂರಿನಲ್ಲಿ 1.4 ಕೋಟಿ ಕೊಟ್ಟು 33 ವರ್ಷದ ಹಳೇ ಅಪಾರ್ಟ್ಮೆಂಟ್ ಖರೀದಿಸುವುದು ಸೇಫಾ? ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆ

ಇದಲ್ಲದೆ, "ಐಷಾರಾಮಿ ಜೀವನಶೈಲಿಯ ಭರವಸೆ ನೀಡಿ ಮನೆಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ವಾಸ್ತವದಲ್ಲಿ ಗೋಡೆಗಳಲ್ಲಿ ನೀರು ಸೋರಿಕೆ, ಟ್ರಾಫಿಕ್‌ ಶಬ್ದ, ಆಗಾಗ್ಗೆ ವಿದ್ಯುತ್‌ ಕಡಿತದಂತಹ ಮೂಲಭೂತ ಸಮಸ್ಯೆಗಳನ್ನೇ ಎದುರಿಸಬೇಕಾಗಿದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಪಾರ್ಟ್‌ಮೆಂಟ್‌ ಹೊರನೋಟಕ್ಕೆ ಅತ್ಯಾಧುನಿಕ ಹಾಗೂ ಐಷಾರಾಮಿ ವಸತಿ ಸಮುಚ್ಚಯದಂತೆ ಕಂಡರೂ, ನಿವಾಸಿಗಳು ದೈನಂದಿನ ಜೀವನದಲ್ಲಿ ಹಲವು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಟೆಕ್ಕಿ ಹೇಳಿದ್ದಾರೆ. "ಕುಡಿಯುವ ನೀರಿನ ಪೂರೈಕೆಗೆ ಟ್ಯಾಂಕರ್‌ಗಳ ಮೇಲೆಯೇ ಅವಲಂಬಿಸಬೇಕಾಗಿದ್ದು, ಇದಕ್ಕಾಗಿ ನಿವಾಸಿಗಳ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ" ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್‌
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್‌

ಅಷ್ಟೇ ಅಲ್ಲದೆ, ಗೃಹಸಾಲದ EMI ಮತ್ತು ಮಾಸಿಕ ನಿರ್ವಹಣಾ ವೆಚ್ಚಗಳ ಹೊರತಾಗಿಯೂ, ಪಾರ್ಕಿಂಗ್ ಸೌಲಭ್ಯ, ಕ್ಲಬ್‌ಹೌಸ್ ಸದಸ್ಯತ್ವ, ಜನರೇಟರ್ ಬಳಕೆ, ಸ್ಥಳಾಂತರ ಅನುಮತಿ ಹಾಗೂ ಸಾಕುಪ್ರಾಣಿಗಳಿಗೆ ಸಂಬಂಧಿಸಿದ ಸೇವೆಗಳಿಗಾಗಿ ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗುತ್ತದೆ ಎಂದು ಅವರು ದೂರಿದ್ದಾರೆ. ಇದರಿಂದ ಮನೆ ಖರೀದಿಸುವ ಮೊದಲು ನಿರೀಕ್ಷಿಸಿದ್ದ ವೆಚ್ಚಕ್ಕಿಂತ ಹೆಚ್ಚುವರಿ ಆರ್ಥಿಕ ಹೊರೆ ಎದುರಾಗುತ್ತಿದೆ ಎಂದು ಹೇಳಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಗಮನ ಸೆಳೆದಿದ್ದು, ಹಲವರು ತಮ್ಮದೇ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವು ಬಳಕೆದಾರರು "ಮನೆ ಖರೀದಿಸುವ ಮೊದಲು ಯೋಜನೆಯ ಗುಣಮಟ್ಟ, ನಿರ್ವಹಣೆ ಮತ್ತು ಮೂಲಸೌಕರ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಅಗತ್ಯ" ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತಷ್ಟು ಜನರು ದುಬಾರಿ ಅಪಾರ್ಟ್‌ಮೆಂಟ್‌ಗಳಲ್ಲಿಯೂ ಮೂಲಭೂತ ಸೌಲಭ್ಯಗಳ ಸಮಸ್ಯೆ ಸಾಮಾನ್ಯವಾಗುತ್ತಿದೆ ಎಂದು ಹೇಳಿದ್ದಾರೆ.

ಈ ಚರ್ಚೆ ಬೆಂಗಳೂರಿನ ವಸತಿ ಕ್ಷೇತ್ರದ ವಾಸ್ತವ ಸ್ಥಿತಿಯತ್ತ ಮತ್ತೊಮ್ಮೆ ಗಮನ ಸೆಳೆದಿದೆ. ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಮನೆ ಖರೀದಿಸಿದರೂ ನೀರಿನ ಸಮಸ್ಯೆ, ಟ್ರಾಫಿಕ್‌ ಕಿರಿಕಿರಿ, ಹೆಚ್ಚುವರಿ ನಿರ್ವಹಣಾ ವೆಚ್ಚ ಮತ್ತು ಮೂಲಸೌಕರ್ಯಗಳ ಕೊರತೆಯಂತಹ ಸವಾಲುಗಳನ್ನು ನಿವಾಸಿಗಳು ಎದುರಿಸುತ್ತಿದ್ದಾರೆ. ಪರಿಣಾಮವಾಗಿ, ಐಷಾರಾಮಿ ಮನೆ ಎಂಬ ಕಲ್ಪನೆ ಮತ್ತು ನೈಜ ಅನುಭವದ ನಡುವಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+