ಕಾಲ್ ಗರ್ಲ್ ಬುಕ್ ಮಾಡಲು ಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ
ಬೆಂಗಳೂರು, ಜನವರಿ 12: ಆನ್‌ಲೈನ್‌ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕೂಡ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಹೆಚ್ಚಾಗಿ ವಿದ್ಯಾವಂತರೇ ಇಂತಹ ಮೋಸದ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿರುವುದು ದುರಾದೃಷ್ಟಕರ. ಇದೇ ರೀತಿಯ ಮತ್ತೊಂದು ಘಟನೆ ನಡೆದಿದ್ದು, ಆನ್‌ಲೈನ್‌ನಲ್ಲಿ ಕಾಲ್ ಗರ್ಲ್ ಬುಕ್ ಮಾಡಲು ಹೋಗಿ ಬೆಂಗಳೂರಿನ ಟೆಕ್ಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
ವ್ಯಕ್ತಿಯೊಬ್ಬ ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡುವಾಗ ವಯಸ್ಕರ ವೆಬ್‌ಸೈಟ್‌ವೊಂದು ಕಾಣಿಸಿಕೊಂಡಿತ್ತು. ಈ ವೆಬ್ ಸೈಟ್‌ನಲ್ಲಿ ಹಲವು ಯುವತಿಯರ ನಗ್ನ ಚಿತ್ರಗಳು ಹಾಗೂ ವಿಡಿಯೋಗಳು ಇದ್ದವು. ಇವರ ಜೊತೆ ದೈಹಿಕ ಸಂಪರ್ಕ ಬೆಳೆಸಲು ಈ ಯುವತಿಯರನ್ನು ಬುಕ್ ಮಾಡಿಕೊಳ್ಳಬಹುದು ಎಂದು ಜಾಹಿರಾತು ನೀಡಿ ಅದರಲ್ಲಿ ಒಂದು ಮೊಬೈಲ್ ನಂಬರ್ ಕೂಡಾ ನೀಡಲಾಗಿತ್ತು.

ಇದನ್ನು ನೋಡಿ ಮರುಳಾದ ಟೆಕ್ಕಿ ಆ ನಂಬರ್ ಸಂಪರ್ಕಿಸಿದ್ದು ಆತನಿಗೆ ಕೂಡಲೇ ರಿಪ್ಲೇ ಬಂದಿದೆ. ಈ ವೇಳೆ ಯಾವುದೇ ಯುವತಿಯನ್ನು ಆಯ್ಕೆ ಮಾಡಿಕೊಂಡರೂ 5 ಸಾವಿರ ರೂಪಾಯಿ ದರ ನಿಗದಿ ಆಗಿದೆ ಎಂದು ವಂಚಕರು ತಿಳಿಸಿದ್ದಾರೆ. ಮೊದಲು ಟೆಕ್ಕಿಯನ್ನು ನಂಬುವಂತೆ ನಟಿಸಿದ ಆರೋಪಿಗಳು 5,000 ರೂ ಹಣವನ್ನು ಸೇವೆ ಪೂರ್ಣಗೊಂಡ ಬಳಿಕ ನೀಡಬಹುದು. ಮೊದಲಿಗೆ ಬುಕ್ ಮಾಡಲು 500 ರೂ. ಕೊಡಿ ಎಂದು ಮೆಸೇಜ್ ಮಾಡಿದ್ದಾನೆ.
ಟೆಕ್ಕಿ ಕೂಡ ಡಿಜಿಟಲ್ ಪೇಮೆಂಟ್ ಆಪ್ ಮೂಲಕ 500 ರೂ. ರವಾನಿಸಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಹೋಟೆಲ್ ಒಂದರ ಲೊಕೇಷನ್ ಕಳಿಸಿ, ಅಲ್ಲಿಗೆ ಬರಲು ಆರೋಪಿಗಳು ತಿಳಿಸಿದ್ದಾರೆ. ಶುಕ್ರವಾರ ಸಂಜೆ 7.30ರ ವ್ಯಕ್ತಿ ಆ ಹೋಟೆಲ್ ಬಳಿಗೆ ತೆರಳಿದ್ದಾರೆ. ಈ ವೇಳೆ ಆರೋಪಿಗಳು ಬಾಕಿ ಇರುವ 4,500 ರೂ ಹಣವನ್ನು ಈಗಲೇ ಪಾವತಿ ಮಾಡಿ ಎಂದು ಬೇಡಿಕೆ ಇಟ್ಟರು. ಕೂಡಲೇ ಹಣ ಪಾವತಿ ಮಾಡಲಾಗಿದೆ.

ಬಳಿಕ ಹೆಚ್ಚುವರಿಯಾಗಿ 8,900 ರೂ. ಹಣ ಪಾವತಿ ಮಾಡಿ ಎಂದರು ಬೇಡಿಕೆ ಇಟ್ಟರು. ಈ ಹಣ ಭದ್ರತಾ ಠೇವಣಿ ಆಗಿದ್ದು, ಕಾಲ್ ಗರ್ಲ್ ಜೊತೆ ದೈಹಿಕ ಸಂಪರ್ಕ ಬೆಳೆಸಿದ ನಂತರ ಈ ಹಣ ವಾಪಸ್ ಮಾಡುವುದಾಗಿ ಹೇಳಿದರು. ಆರೋಪಿಗಳ ಮಾತು ನಂಬಿದ್ದ ಟೆಕ್ಕಿ ವಂಚಕರು ಹೇಳಿದ ಹಾಗೆ ಮಾಡಿದ್ದಾನೆ.
ಬಳಿಕ ಆಧಾರ್ ಪರಿಶೀಲನೆ ನೆಪದಲ್ಲಿ ಮತ್ತೆ 13,500 ರೂ ಹಣ ಪಾವತಿಸುವಂತೆ ಕೇಳಿದರು. ಪರಿಶೀಲನೆ ಬಳಿಕ ತ್ವರಿತವಾಗಿ ಹಣ ವಾಪಸ್ ಮಾಡುತ್ತೇವೆ ಎಂದರು. ಆಗ ವ್ಯಕ್ತಿ ಅನುಮಾನ ಬಂತು. ಆದರೆ ಅಷ್ಟರಲ್ಲಾಗಲೇ ಸಾಕಷ್ಟು ಹಣ ಕೊಟ್ಟಿದ್ದ ಕಾರಣ ಮಿಕ್ಕ ಹಣವೂ ವಾಪಸ್ ಬರುವುದಿಲ್ಲ ಎನ್ನುವ ಕಾರಣಕ್ಕೆ ಆಧಾರ್ ಪರಿಶೀಲನೆಗೆ 13,500 ರೂ. ಕೊಟ್ಟದ್ದಾನೆ. ಬಳಿಕ ಯುವತಿಯ ಗುರುತಿನ ಚೀಟಿ ಪರಿಶೀಲನೆಗೂ ಆತನ ಬಳಿಯಲ್ಲೇ ಹಣ ಕೇಳಿದರು.
ಹೀಗೆ ಪದೇ ಪದೇ ಏನೇನೋ ಕಾರಣ ಹೇಳಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದರು. ನೀವು ಕಟ್ಟಿರುವ ಹಣದ ಮಾಹಿತಿ ನಮ್ಮಲ್ಲಿದೆ ಎಂದು ನಂಬಿಸಿದ ಕಿರಾತಕರು, ಇನ್‌ವಾಯ್ಸ್‌ನಲ್ಲಿ ಈವರೆಗೆ ನೀಡಿದ ಹಣದ ಸಂಪೂರ್ಣ ವಿವರ ನಮೂದಿಸಿದ್ದರು.ಇದಾದ ಬಳಿಕ ಕಾಲ್ ಗರ್ಲ್ ಬುಕ್ ಮಾಡುವ ಸಂಸ್ಥೆಯ ಹಣಕಾಸು ವಿಭಾಗದ ಮುಖ್ಯಸ್ಥ ಎಂದು ಪರಿಚಯಿಸಿಕೊಂಡ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಟೆಕ್ಕಿ ಕರೆಯನ್ನು ಸಂಪರ್ಕಿಸಿದರು.
ಆತ ಕೂಡಾ ಅಂತಿಮ ಹಂತದ ಪರಿಶೀಲನೆ ನೆಪದಲ್ಲಿ 19,500 ರೂ. ಹಣ ಕಟ್ಟಿಸಿಕೊಂಡಿದ್ದಾನೆ. ಕೂಡಲೇ ಅದನ್ನು ವಾಪಸ್ ಮಾಡಿದ ಕಿರಾತಕರು ಸುಮನ್‌ಗೆ ನಂಬಿಕೆ ಹುಟ್ಟಿಸಿ ಮತ್ತೆ 30 ಸಾವಿರ ರೂಪಾಯಿ ಹಣ ಪಾವತಿಸುವಂತೆ ಹೇಳಿದರು. ಇದಾದ ಬಳಿಕ ಟೆಕ್ಕಿ ತನ್ನ ಖಾತೆ ಪರಿಶೀಲಿಸಿದಾಗ ಒಟ್ಟಾರೆ ಒಂದೂವರೆ ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವುದು ಅರಿವಿಗೆ ಬಂದಿದೆ.
ತಾನು ಮೋಸ ಹೋಗಿರುವ ಬಗ್ಗೆ ಅರಿತ ಟೆಕ್ಕಿ ಕೂಡಲೇ ಸೈಬರ್ ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಬಗ್ಗೆ ಈ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications