ಬೆಂಗಳೂರು ಉಪನಗರ ರೈಲು ಯೋಜನೆ ಅಪ್‌ಡೇಟ್: ಕನಕ ಕಾರಿಡಾರ್‌ನಲ್ಲಿ ಮಹತ್ವದ ಹಂತ ಪೂರ್ಣ

ಬೆಂಗಳೂರು: ಬೆಂಗಳೂರು ಸಂಚಾರ ದಟ್ಟಣೆ ಕಡಿಮೆ ಮಾಡುವುದು, ಜನರಿಗೆ ಕಡಿಮೆ ದರದಲ್ಲಿ ವಿಶ್ವಾಸಾರ್ಹ ಸಾರಿಗೆ ಸೇವೆ ಒದಗಿಸುವ ಉದ್ದೇಶದಿಂದ ಬೆಂಗಳೂರು ಉಪನಗರ ಸಾರಿಗೆ ಯೋಜನೆ (BSRP) ಅನುಷ್ಠಾನಗೊಳಿಸಲಾಗುತ್ತಿದೆ. 'ಕನಕ ಹಾಗೂ ಮಲ್ಲಿಗೆ' ಕಾಮಗಾರಿಗಳಿಗೆ ವೇಗ ನೀಡಿದ್ದು, ಇದೀಗ ಕನಕ ಮಾರ್ಗ (ಕಾರಿಡಾರ್-4ಎ) ಮಹತ್ವ ಉದ್ದದ ಗರ್ಡರ್ ಯಶಸ್ವಿ ಸ್ಥಾಪನೆ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದೆ ಎಂದು K-RIDE ತಿಳಿಸಿದೆ.

ಬಿಎಸ್ಆರ್ ಪಿ ಕಾರಿಡಾರ್-4ಎ ಕಾಮಗಾರಿಯಲ್ಲಿ 15.45 ಮೀಟರ್ ಉದ್ದದ ಮೊದಲ ಟಿ-ಗಿರ್ಡರ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ ಎಂದು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಅದರ ಪ್ರಕಾರ, ರಂದು ಹುಸ್ಕೂರು ನಿಲ್ದಾಣದಲ್ಲಿ ಜುಲೈ 31, 2026ರಂದು ಕಾರಿಡಾರ್-4ಎ ಅಡಿಯಲ್ಲಿ ಮೊದಲ ಟಿ-ಗಿರ್ಡರ್ ಸ್ಥಾಪಿಸಲಾಗಿದ್ದು, ಇದರಿಂದ ಕಾಮಗಾರಿಯ ಮಹತ್ವದ ಹಂತ ಪೂರ್ಣಗೊಳಿಸಿದಂತಾಗಿದೆ.

Bengaluru Suburban Rail

ಹೀಲಲಿಗೆ- ಕಗ್ಗದಾಸಪುರದವರೆಗೆ ಕನಕ ಮಾರ್ಗ (ಕಾರಿಡಾರ್-4ಎ) ನಿರ್ಮಾಣವಾಗುತ್ತಿದೆ. ಈ ಮಾರ್ಗದಲ್ಲಿ ಎಂಟು ನಿಲ್ದಾಣಗಳು ಮತ್ತು ಒಂದು ಎತ್ತರದ ಕಾರಿಡಾರ್ ನಿಲ್ದಾಣ ಸ್ಥಾಪನೆ ಆಗಲಿವೆ. ಯೋಜನೆಯಡಿ ರೈಲ್ವೆ ಮೂಲಸೌಕರ್ಯ ನಿರ್ಮಾಣಕ್ಕಾಗಿ ಪ್ರಿಕಾಸ್ಟ್ ಟಿ-ಗರ್ಡರ್‌ಗಳನ್ನು ಸ್ಥಾಪಿಸಬೇಕಾಗಿದೆ. ಈ ಹಿಂದೆಯು ಕೆಲವು ಗರ್ಡರ್ ನಿರ್ಮಿಸಿದ್ದ ಗುತ್ತಿಗೆದಾರರು ಇದೀಗ 15.45 ಮೀಟರ್ ಉದ್ದದ ಮತ್ತೊಂದು ಗರ್ಡರ್ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ವರ್ಧಿತ ಗುಣಮಟ್ಟ ಮತ್ತು ಸುಧಾರಿತ ಸುರಕ್ಷತೆಗೆ ಆದ್ಯತೆ ನೀಡಿದ್ದೇವೆ ಎಂದು ಕೆ-ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷಣ್ ಸಿಂಗ್ ತಿಳಿಸಿದ್ದಾರೆ.

ನವೀನ ತಂತ್ರಜ್ಞಾನ, ಕಾರ್ಯ ವಿಧಾನ

ಕನಕ ಮಾರ್ಗದಲ್ಲಿ ಆಧುನಿಕ ನಿರ್ಮಾಣ ತಂತ್ರಜ್ಞಾನ ಬಳಸಲಾಗುತ್ತಿದೆ. ಪ್ರಿಕಾಸ್ಟ್ ಎಂಜಿನಿಯರಿಂಗ್ ಪರಿಹಾರಗಳು ಮತ್ತು ನವೀನ ಕಾರ್ಯಗತಗೊಳಿಸುವ ವಿಧಾನ ಒಳಗೊಂಡಿವೆ. ಗುಣಮಟ್ಟ, ಬಾಳಿಕೆ ಮತ್ತು ಸುರಕ್ಷತೆಯ ಅತ್ಯುನ್ನತ ಮಾನದಂಡಗಳನ್ನು ಕಾಮಗಾರಿಯಲ್ಲಿ ಬಳಸಲಾಗಿದೆ. ಇದೆಲ್ಲ ಕಾರಣಗಳಿಂದ ತ್ವರಿತ ನಿರ್ಮಾಣ ಕಾರ್ಯ ನಡೆಯುತ್ತಿದೆ. ಭವಿಷ್ಯದಲ್ಲಿ ಬೆಂಗಳೂರಿಗೆ ವಿಶ್ವ ದರ್ಜೆಯ ಉಪನಗರ ರೈಲು ವ್ಯವಸ್ಥೆಗೆ ಸಾಕ್ಷಿಯಾಗಲಿದೆ. ಇಲ್ಲಿ ಬಳಕೆಯಾದ ಸುಧಾರಿತ ಎಂಜಿನಿಯರಿಂಗ್ ಕಾರ್ಯಗಳು ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಟಿ-ಗಿರ್ಡರ್ ನಿರ್ಮಾಣಕ್ಕೂ ಮುನ್ನ ಉದ್ದೇಶಿತ ಎಲ್ಲ ಎಂಜಿನಿಯರಿಂಗ್ ಮಾನದಂಡಗಳು, ಗುಣಮಟ್ಟದೊಂದಿಗೆ ರಾಜಿ ಇಲ್ಲದೇ, ಅಗತ್ಯ ಎಲ್ಲ ಸುರಕ್ಷತಾ ನಿಯಮ ಅನುಸರಿಸಿ ನಡೆಸಲಾಗಿದೆ. ನಿರ್ಮಾಣ ಕೆಲಸ ಯಶಸ್ವಿ ಪೂರ್ಣಗೊಳ್ಳುವ ಮೂಲಕ ಕಾರಿಡಾರ್-4ಎ ನಲ್ಲಿ ಮತ್ತೊಂದು ಮಹತ್ವದ ಪ್ರಗತಿ ಸಾಧಿಸಿದಂತಾಗಿದೆ.

ಸ್ಥಾಪಿತ ಗರ್ಡರ್ ಮುಖ್ಯಾಂಶಗಳು

ಕೆ-ರೈಡ್ ಮತ್ತು ಜನರಲ್ ಕನ್ಸಲ್ಟೆಂಟ್ (ಜಿಸಿ) ಮೇಲ್ವಿಚಾರಣೆಯಲ್ಲಿ ಯೋಜನಾ ಗುತ್ತಿಗೆದಾರರಾದ ಮೆಸ್ಸರ್ಸ್ ಆರ್‌ವಿಎನ್‌ಎಲ್-ರಿತ್ವಿಕ್ (ಆರ್‌ಪಿಪಿಎಲ್) ಅವರ ನೇತೃತ್ವದಲ್ಲಿ ಗರ್ಡರ್ ಸ್ಥಾಫನೆಯಾಗಿದೆ. ಈ ಗರ್ಡರ್ ಹೆಚ್ಚಿನ ಮಾಹಿತಿ ನೋಡುವುದಾದರೆ ಪ್ರತಿ ಗಿರ್ಡರ್‌ಗೆ ಅಗತ್ಯವಿರುವ ಕಾಂಕ್ರೀಟ್: 17 ಘನ ಮೀಟರ್, ಕಾಂಕ್ರೀಟ್ ದರ್ಜೆ: M50 ಇದೆ. ಒಟ್ಟು ಗರ್ಡರ್ ತೂಕ 47 ಟನ್ ಇದ್ದು, ಭಾರತೀಯ ರೈಲ್ವೆ ಮತ್ತು ಮೆಟ್ರೋ ಕೋಡಲ್ ನಿಬಂಧನೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

ಕನಕ ಜೊತೆಗೆ ಮಲ್ಲಿಗೆ ಕಾರಿಡಾರ್ ಕಾಮಗಾರಿ ಪ್ರಗತಿಯಲ್ಲಿ. ಸಂಪಿಗೆ ಹಾಗೂ ಪರಿಜಾತ ಕಾರಿಡಾರ್ ಮಾರ್ಗಗಳ ಭೂಮಿ ಸ್ವಾಧೀನ, ಸಮೀಕ್ಷೆ ಕಾರ್ಯಗಳು ನಡೆದಿವೆ. ಅಗತ್ಯ ಅನುದಾನ ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಬೆಂಗಳೂರು ಉಪನಗರ ಸಾರಿಗೆ ಯೋಜನೆಗೆ (BSTP) ಉತ್ತೇಜ ನೀಡಿದೆ.

ಬೆಂಗಳೂರಿಗೆ ಆಧುನಿಕ, ದಕ್ಷ, ಸುರಕ್ಷಿತ ಮತ್ತು ಸುಸ್ಥಿರ ಉಪನಗರ ರೈಲು ಜಾಲವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಭೂಸ್ವಾಧೀನ, ಗುತ್ತಿಗೆದಾರರ ಬದಲಾವಣೆ, ಕಾನೂನು ಕಾರಣದಿಂದ ಯೋಜನೆ ವಿಳಂಬವಾಗಿದ್ದು, ಇತ್ತೀಚೆಗೆ ಅಧಿಕಾರಿಗಳು ಕಾಮಗಾರಿಗೆ ವೇಗ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+