ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಡ್ಯಾನ್ಸ್ ಅಧ್ಯಾಪಕನಿಂದ ಅತ್ಯಾಚಾರ

ಮದುವೆಯಾಗುವುದಾಗಿ ನಂಬಿಸಿ 23 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 35 ವರ್ಷದ ನೃತ್ಯ ಅಧ್ಯಾಪಕ ಕ್ರಿಸ್ಟೋಫರ್ ರನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 4: ಮದುವೆಯಾಗುವುದಾಗಿ ನಂಬಿಸಿ 23 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದಿದೆ.

35 ವರ್ಷ ನೃತ್ಯ ಅಧ್ಯಾಪಕ ಕ್ರಿಸ್ಟೋಫರ್ ತನ್ನಲ್ಲಿಗೆ ತರಗತಿಗೆ ಬರುತ್ತಿದ್ದ ವಿದ್ಯಾರ್ಥಿಯನ್ನು ಮದುವೆಯಾಗುವುದಾಗಿ ಹೇಳಿ ತನ್ನ ಕುಕೃತ್ಯಕ್ಕೆ ಬಳಸಿಕೊಂಡಿದ್ದ. ಇದೀಗ ಯುವತಿ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಕ್ರಿಸ್ಟೋಫರ್ ನನ್ನು ಬಂಧಿಸಿದ್ದಾರೆ.[ಎಸ್ಸೆಂ ಕೃಷ್ಣರನ್ನು ಲೇವಡಿ ಮಾಡಿದ ಇಬ್ರಾಹಿಂಗೆ ಜಗ್ಗೇಶ್ ತಿರುಗೇಟು]

Bengaluru: Student raped by dance teacher

ಕ್ರಿಸ್ಟೋಫರ್ ಕೇರಳ ಮೂಲದವನಾಗಿದ್ದು ಕ್ರಿಸ್ಟಿ ಮತ್ತು ಕ್ರಿಸ್ಟಿನೋ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದ. ಅತ್ಯಾಚಾರಕ್ಕೆ ಒಳಗಾದ ಯುವತಿಯೂ ಡಾನ್ಸ್ ಅಧ್ಯಾಪಕಿಯಾಗಿದ್ದು ಏರೋಬಿಕ್ಸ್ ನೃತ್ಯ ಕಲಿಯಲು 2014ರಲ್ಲಿ ಕ್ರಿಸ್ಟೋಫರ್ ಬಳಿ ಹೋಗಿದ್ದರು.[ಬೆಂಗಳೂರಿನಲ್ಲಿ ವಿಧವೆಯ ಮೇಲೆ ಸಾಮೂಹಿಕ ಅತ್ಯಾಚಾರ]

ಮುಂದಿನ ಎರಡು ವರ್ಷದ ತರಬೇತಿ ವೇಳೆ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು. ಈ ವೇಳೆ ನಿನ್ನನ್ನು ಮದುವೆಯಾಗುವುದಾಗಿ ಕ್ರಿಸ್ಟೋಫರ್ ಹೇಳುತ್ತಿದ್ದ. ಮುಂದೆ "2017ರ ಹೊತ್ತಿಗೆ ಕ್ರಿಸ್ಟೋಫರ್ ನನ್ನನ್ನು ದೂರ ಸರಿಸಲು ಯತ್ನಿಸುತ್ತಿದ್ದ," ಎಂದು ಯುವತಿ ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+