Marriage: 70 ಲಕ್ಷ ಸಂಬಳ ಪಡೆದರೂ ಹುಡುಗನಿಗೆ ಮರ್ಯಾದೆಯೇ ಇಲ್ಲ! ಹುಡುಗಿ ಅಪ್ಪ ಹೇಳಿದ್ದೇನು?
ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ! ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಕೇಳಿಬರುತ್ತಿರುವ ದೂರು. ಸಾಮಾನ್ಯವಾಗಿ ಬೇಸಾಯ ಮಾಡುವ ಹುಡುಗರಿಗೆ ಹೆಣ್ಣು ಕೊಡುತ್ತಿಲ್ಲ ಎನ್ನುವ ದೂರು ಕೇಳಿದ್ದೇವೆ, ಆದರೆ 70 ಲಕ್ಷ ರೂಪಾಯಿ ಸಂಬಳ ಪಡೆಯುವ ಹುಡುಗನಿಗೂ ಹುಡುಗಿಯ ಕಡೆಯವರು ಮರ್ಯಾದೆ ಕೊಡಲಿಲ್ಲ ಎಂದು ನಂಬುತ್ತೀರಾ?
ವಧು-ವರರ ಹುಡುಕಾಟಕ್ಕೆ ಇರುವ ಶಾದಿ ಡಾಟ್ ಕಾಮ್‌ನಲ್ಲಿ ಮಹಿಳೆಯೊಬ್ಬರ ಪ್ರೊಫೈಲ್ ಮೆಚ್ಚಿಕೊಂಡ ವ್ಯಕ್ತಿಯೊಬ್ಬ ಸಂದೇಶ ಕಳುಹಿಸಿದ್ದು, ಆ ಕಡೆಯಿಂದ ಬಂದ ಉತ್ತರ ನೋಡಿ ಶಾಕ್ ಆಗಿದ್ದಾರೆ.

ಮಗಳ ಮದುವೆಗಿಂತ ಕ್ರಿಕೆಟ್ ಮುಖ್ಯ!
ಬೆಂಗಳೂರಿನ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಗೆ ಸಂದೇಶ ಕಳುಹಿಸಿದಾಗ. ಹುಡುಗಿಯ ತಂದೆ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ. ತಂದೆ ಕ್ರಿಕೆಟ್ ಪ್ರೇಮಿಯಾಗಿದ್ದು, ಪಂದ್ಯದ ವೇಳೆ ಹುಡುಗ ಸಂದೇಶ ಕಳುಹಿಸಿದ್ದು, ಮಗಳ ಮದುವೆಗಿಂತ ಕ್ರಿಕೆಟ್ ಪಂದ್ಯದ ಬಗ್ಗೆ ತಂದೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಂಡಿದೆ.
ಬೆಂಗಳೂರಿನ 28 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ರಾಹುಲ್, ಪ್ರಿಯಾಂಕಾ ಎಂಬ ಮಹಿಳೆಗೆ ಶಾದಿ ಡಾಟ್ ಕಾಮ್‌ನಲ್ಲಿ ಸಂದೇಶ ಕಳುಹಿಸಿದ್ದಾರೆ. ತನ್ನನ್ನು ಪರಿಚಯಿಸಿಕೊಂಡ ನಂತರ, ರಾಹುಲ್ ತನಗೆ ವಾರ್ಷಿಕ ₹ 70 ಲಕ್ಷ ಸಂಬಳ ಬರುತ್ತದೆ ಎಂದು ಹೇಳಿದ್ದಾರೆ. "ನನಗೆ 70 ಲಕ್ಷ ರೂಪಾಯಿ ಸಂಬಳ, ನಮ್ಮಿಬ್ಬರಿಗೂ ಹೊಂದಾಣಿಕೆಯಾಗುತ್ತದೆ ಎಂದು ನನಗೆ ಅನಿಸುತ್ತಿದೆ"ಎಂದು ಸಂದೇಶದಲ್ಲಿ ಹೇಳಿದ್ದಾರೆ.
ಇದಕ್ಕೆ ಉತ್ತರ ನೀಡಿದ ಪ್ರಿಯಾಂಕ ತಂದೆ, "ಹಲೋ, ಧನ್ಯವಾದಗಳು! ನಾನು ಪ್ರಿಯಾಂಕಾ ಅವರ ತಂದೆ. ಪಂದ್ಯದ ನಂತರ ಮಾತನಾಡೋಣ" ಎಂದು ಉತ್ತರ ನೀಡಿದ್ದು, ಹುಡುಗನನ್ನು ದಂಗಾಗಿಸಿದೆ.
ಎಕ್ಸ್‌ಚೇಂಜ್‌ನ ಸ್ಕ್ರೀನ್‌ಶಾಟ್ ಅನ್ನು ರಾಹುಲ್ ಸೋದರಸಂಬಂಧಿ ನೈನಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ, ಇದನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ, ಅನೇಕ ರೀತಿಯ ಪ್ರತಿಕ್ರಿಯೆ ಪಡೆದುಕೊಂಡಿದೆ.
"ಅಂಕಲ್ ಅವರ ಆದ್ಯತೆಗಳು ಸ್ಪಷ್ಟವಾಗಿವೆ. ಭಾರತವು ಇಂಗ್ಲೆಂಡ್ ಅನ್ನು ಸೋಲಿಸಿದ ನಂತರ ಮಾತನಾಡಬಹುದು" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಭಾರತ ಆ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್‌ಗಳಿಂದ ಗೆದ್ದು ಬೀಗಿತ್ತು.
ಮದುವೆಗಳು ನಡೆಯುತ್ತಲೇ ಇರುತ್ತವೆ, ಪಂದ್ಯಕ್ಕೆ ಯಾವುದೂ ಅಡ್ಡಿಯಾಗಬಾರದು ಎಂದು ಮತ್ತೊಬ್ಬರು ತಮಾಶೆಯಾಗಿ ಕಮೆಂಟ್ ಮಾಡಿದ್ದಾರೆ.
ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಅಂತಿಮ ಪಂದ್ಯ ಮುಗಿದ ನಂತರ ಭಾರತ ಟ್ರೋಫಿ ಎತ್ತಿದ ನಂತರವೇ ರಾಹುಲ್ ಮತ್ತು ಪ್ರಿಯಾಂಕಾ ಅವರ ಮದುವೆ ಮಾತುಕತೆ ನಡೆಯಬಹುದು ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.












Click it and Unblock the Notifications