ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಗೆ ನಿರೀಕ್ಷಣಾ ಜಾಮೀನು

ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಆಪ್ತ ಸಹಾಯಕ ಸಂತೋಷ್ ಗೆ ಜಾಮೀನು. ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಮೇಲೆ ಹಲ್ಲೆ, ಕಿಡ್ನಾಪ್ ಯತ್ನ ಪ್ರಕರಣದಲ್ಲಿ ಜಾಮೀನು.

ಬೆಂಗಳೂರು, ಆಗಸ್ಟ್ 5: ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಅವರಿಗೆ ಇಲ್ಲಿನ 62ನೇ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ಈಶ್ವರಪ್ಪ ಅವರ ಪಿಎ ವಿನಯ್ ಅವರ ಮೇಲೆ ಹಲ್ಲೆ ಹಾಗೂ ಅಪಹರಣ ಯತ್ನದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಂತೋಷ್ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

Bengaluru session court grats bail to BS Yeddyurappa's personal assistant Santhosh

ಶನಿವಾರ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್ ಎ ಚಿಕ್ಕೋರ್ಡೆ, ಸಂತೋಷ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರಲ್ಲದೆ ಕೆಲವಾರು ನಿಬಂಧನೆಗಳನ್ನೂ ವಿಧಿಸಿದರು.

ಆ ನಿಬಂಧನೆಗಳು ಹೀಗಿವೆ:
- ತನಿಖಾಧಿಕಾರಿ ಕರೆದಾಗ ತನಿಖೆಗೆ ಸಹಕರಿಸಬೇಕು.
- ತನಿಖಾಧಿಕಾರಿಗಳಿಗೆ ವಿಳಾಸ ನೀಡಬೇಕು.
- ಸಾಕ್ಷ್ಯಾಧಾರ ನಾಶಪಡಿಸಲು ಪ್ರಯತ್ನಿಸಕೂಡದು.
- ಅನುಮತಿಯಿಲ್ಲದೆ ಬೆಂಗಳೂರು ಬಿಟ್ಟು ಎಲ್ಲೂ ಹೋಗಕೂಡದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+