ಮಡಿವಾಳ ಬಾಲಮಂದಿರದಿಂದ ಐವರು ಬಾಲಾಪರಾಧಿಗಳು ಎಸ್ಕೇಪ್

ಬೆಂಗಳೂರು, ನವೆಂಬರ್ 3: ಹೋಮ್‌ಗಾರ್ಡ್ಸ್ ಮೇಲೆ ಹಲ್ಲೆ ನಡೆಸಿ ಐವರು ಬಾಲಾಪರಾಧಿಗಳು ಮಡಿವಾಳ ಬಾಲಾಪರಾಧಿ ಮಂದಿರದಿಂದ ಪರಾರಿಯಾಗಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಮಡಿವಾಳದ ಬಾಲಮಂದಿರದ ಹೋಮ್‌ ಗಾರ್ಡ್ ರಮೇಶ್ ಗಾಯಗೊಂಡವರು. ಬಾಲಾಪರಾಧಿಗಳು ಉಪಹಾರ ಸೇವಿಸಿ ಕೈ ತೊಳೆಯಲೆಂದು ಮಂದಿರದ ಮುಂಭಾಗಕ್ಕೆ ಬಂದಿದ್ದಾಗ ಒಬ್ಬರೇ ಹೋಮ್‌ಗಾರ್ಡ್ ಇರುವುದನ್ನು ಗಮನಿಸಿ 15 ಬಾಲಾಪರಾಧಿಗಳು ಹೋಮ್‌ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆ.

ಹೋಂಗಾರ್ಡ್​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ 15 ಬಾಲಾಪರಾಧಿಗಳು ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು 10 ಮಂದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿಸಿದ್ದಾರೆ. ಹಲ್ಲೆಯಿಂದ ಹೋಂಗಾರ್ಡ್ ರಮೇಶ್ ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೀಕ್ಷಿಸಿದ ಸ್ಥಳೀಯರು ಕೂಡಲೇ 10 ಮಂದಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳಿದ 5 ಮಂದಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

bengaluru: security personnel attacked and escape juvenile offenders

ಈ ಹಿಂದೆಯೂ ಹಲವು ಬಾರಿ ಬಾಲಪರಾಧಿ ಮಂದಿರದಿಂದ ಸಾಕಷ್ಟು ಬಾಲಪರಾಧಿಗಳು ಪರಾರಿಯಾಗಿದ್ದರು. ಎಷ್ಟೇ ಸೆಕ್ಯುರಿಟಿ ಇದ್ದರೂ ಬಾಲಾಪರಾಧಿಗಳು ಪರಾರಿಯಾಗಲು ಕಡಿವಾಣ ಹಾಕಲು ಸಿಬ್ಬಂದಿ ವಿಫಲವಾಗಿದೆ. ಸ್ಥಳಕ್ಕೆ ಮಡಿವಾಳ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+