ಬೆಂಗಳೂರು ವಿಜ್ಞಾನಿಗೆ ಇನ್ಫೋಸಿಸ್ ಫೌಂಡೇಷನ್ ಪ್ರಶಸ್ತಿ
ಬೆಂಗಳೂರು, ನವೆಂಬರ್, 16 : ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯ ಬೆಂಗಳೂರು ಮೂಲದ ವಿಜ್ಞಾನಿ ಉಮೇಶ್ ವಾಘ್ ಮರ್ ಅವರು ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಪ್ರಶಸ್ತಿ-2015 ಗೆ ಭಾಜನರಾಗಿದ್ದಾರೆ.
ಇನ್ಫೋಸಿಸ್ ಫೌಂಡೇಷನ್ ಪ್ರಶಸ್ತಿಗೆ ಉಮೇಶ್ ವಾಘ್ ಮರ್ (ಇಂಜಿನಿಯರಿಂಗ್) ಜೊತೆಗೆ, ಪ್ರೊ ಜೊನಾರ್ಡನ್ ಗಾಣೇರಿ (ಮಾನವೀಯತೆ), ಅಮಿತ್ ಶರ್ಮ(ಜೀವನ ವಿಜ್ಞಾನ), ಪ್ರೊ. ಮಹಾನ್ ಮಹಾರಾಜ್ (ಗಣಿತ ವಿಜ್ಞಾನ), ಪ್ರೊ. ಜಿ ರವೀಂದ್ರ ಕುಮಾರ್ (ಭೌತವಿಜ್ಞಾನ), ಶ್ರೀನಾಥ್ ರಾಘವನ್ (ಸಮಾಜ ವಿಜ್ಞಾನ) ಆಯ್ಕೆಯಾಗಿದ್ದಾರೆ.[ರಾಷ್ಟ್ರಪ್ರಶಸ್ತಿ, ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿ ವಿಜೇತರು]

ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಪ್ರಶಸ್ತಿಯು ೬೫ ಲಕ್ಷ ನಗದು ಬಹುಮಾನ ಹಾಗೂ 22 ಕ್ಯಾರಟ್ ಬಂಗಾರದ ಪದಕವನ್ನು ಒಳಗೊಂಡಿದೆ. ಪ್ರಶಸ್ತಿ ಸ್ಪರ್ಧೆಗೆ ಬೇರೆ ಬೇರೆ ವಿಭಾಗದಲ್ಲಿ ಸಾಧನೆ ಮಾಡಿದ ಸುಮಾರು 206 ಮಂದಿ ತಮ್ಮ ಹೆಸರನ್ನು ಸೂಚಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 13 2016ರಲ್ಲಿ ನಡೆಯಲಿದೆ.
ಇನ್ಫೋಸಿಸ್ ಅಧ್ಯಕ್ಷ ಎನ್ ಆರ್ ನಾರಾಯಣ ಮೂರ್ತಿ ಅವರು, 'ಈ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಂದಿ ಗುರುತಿಸಿ ನೀಡಲಾಗುತ್ತದೆ. ವಿಜೇತರು ಇನ್ನು ಉತ್ತಮವಾಗಿ ತಮ್ಮ ಕ್ಷೇತ್ರದಲ್ಲಿ ತೊಡಗಿಕೊಳ್ಳಲಿ ಎಂಬುದೇ ಇದರ ಮುಖ್ಯ ಉದ್ದೇಶ' ಎಂದು ಹೇಳಿದರು.












Click it and Unblock the Notifications