• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏರೋ ಇಂಡಿಯಾ: ಕೆಂಪೇಗೌಡ ಏರ್‌ಪೋರ್ಟ್ ರನ್‌ ವೇ ಬಂದ್

|

ಬೆಂಗಳೂರು,ಜನವರಿ 28: ಏರೋ ಇಂಡಿಯಾ ಶೋ ಫೆಬ್ರವರಿ 3 ರಿಂದ 5ರವರೆಗೆ ನಡೆಯಲಿರುವ ಕಾರಣ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯನ್ನು ಮುಚ್ಚಲಾಗುತ್ತದೆ.

7 ದಿನಗಳ ಲೋಹದ ಹಕ್ಕಿಗಳ ಹಾರಾಟದಲ್ಲಿ ಬದಲಾವಣೆ ಆಗಿದೆ. ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ 2021 ನಡೆಯಲಿದೆ.ಜ.30 ಮತ್ತು 31ರವರೆಗೆ ಮಧ್ಯಾಹ್ನ 1.30ರಿಂದ ಸಂಜೆ 4 ರವರೆಗೆ ರನ್ ವೇ ಬಂದ್ ಆಗಲಿದೆ.

ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಸೂರ್ಯ ಕಿರಣ್ ಮತ್ತು ಸಾರಂಗ್ ಪ್ರದರ್ಶನಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಸೂರ್ಯ ಕಿರಣ್ ಮತ್ತು ಸಾರಂಗ್ ಪ್ರದರ್ಶನ

ಫೆ.1 ಬೆಳಿಗ್ಗೆ 10ರಿಂದ 12 ಹಾಗೂ ಮಧ್ಯಾಹ್ನ 2ರಿಂದ 5ರವರೆಗೆ ವಿಮಾನ ಹಾರಾಟ ಇರೋದಿಲ್ಲ. ಫೆ.2 ಮತ್ತು 3ರಂದು ಬೆಳಿಗ್ಗೆ 9 ರಿಂದ 12 ಹಾಗೂ ಮಧ್ಯಾಹ್ನ 2 ರಿಂದ 5ರವರೆಗೆ, ಫೆ.4 ಮತ್ತು 5ರಂದು ಬೆಳಿಗ್ಗೆ 10 ರಿಂದ 12 ಹಾಗೂ ಮಧ್ಯಾಹ್ನ 2 ರಿಂದ 5 ವಿಮಾನ ಹಾರಾಟ ಮಾಡಲ್ಲ.

ಏರೋ ಇಂಡಿಯಾ 2021 ಪೂರ್ವಾಭ್ಯಾಸ ಹಾಗೂ ಪ್ರದರ್ಶನಕ್ಕೆ ಕೆಐಎಎಲ್ ಸಹಕಾರ ನೀಡಲಿದೆ.ಪ್ರಯಾಣಿಕರಿಗೆ ಅನಾನುಕೂಲ ಆಗುವುದನ್ನು ತಪ್ಪಿಸುವುದಕ್ಕಾಗಿ, ಸಂಬಂಧಿತ ವಿಮಾನಯಾನ ಸಂಸ್ಥೆಗಳು ವಿಮಾನ ನಿಲ್ದಾಣದ ಕಾರ್ಯಾಚರಣೆ ಬದಲಾಗಿರುವ ಕುರಿತು ಕಾಲಕಾಲಕ್ಕೆ ಸೂಚನೆಗಳನ್ನು ನೀಡಲಿವೆ. ಜತೆಗೆ ಏರೋ ಇಂಡಿಯಾ ಪ್ರದರ್ಶನದ ಸಂದರ್ಭದಲ್ಲಿ ಪುನರ್‌ ಹೊಂದಿಕೆ ಮಾಡಲಾದ ಹಾರಾಟದ ಸಮಯದ ಬಗ್ಗೆ ಮುನ್ಸೂಚನೆ ನೀಡಲಿವೆ.

ವಾಣಿಜ್ಯ ವಿಮಾನ ಹಾರಾಟ ಬಂದ್

ವಾಣಿಜ್ಯ ವಿಮಾನ ಹಾರಾಟ ಬಂದ್

ವಾಣಿಜ್ಯ ವಿಮಾನ ಹಾರಾಟ ಕಾರ್ಯಾಚರಣೆಗಳನ್ನು ಭಾಗಶಃ ನಿಲ್ಲಿಸಲಿದೆ. ಏರೋ ಇಂಡಿಯಾ ಕಾರ್ಯಕ್ರಮದ ಅಭ್ಯಾಸ ಮತ್ತು ಪ್ರದರ್ಶನದ ದಿನಗಳಲ್ಲಿ ಹಾರಾಟದ ಪ್ರದರ್ಶನಕ್ಕಾಗಿ ಪರ್ಯಾಯ ವಿಮಾನ ನಿಲ್ದಾಣವಾಗಿ ಕೂಡ ಸಜ್ಜಾಗಿರಲಿದೆ.

ಏರ್‌ಪೋರ್ಟ್ ಟ್ಯಾಕ್ಸಿಗಳ ಸೇವೆ

ಏರ್‌ಪೋರ್ಟ್ ಟ್ಯಾಕ್ಸಿಗಳ ಸೇವೆ

ಏರ್‌ಪೋರ್ಟ್‌ ಟ್ಯಾಕ್ಸಿಗಳು ಮತ್ತು ಬಸ್‌ಗಳ ಹೆಚ್ಚುವರಿ ಸೇವೆ, ಪ್ರಯಾಣಿಕರ ಸಂಚಾರ ಹೆಚ್ಚಳ ನಿರೀಕ್ಷಿಸಿ ಅದಕ್ಕೆ ತಕ್ಕಂತೆ ಅವಕಾಶ ಮಾಡಿಕೊಡಲಾಗುವುದು. ವಿಮಾನ ನಿಲ್ದಾಣ ಕಾರ್ಯಾಚರಣೆ ಕುರಿತ ಮಾಹಿತಿ ಬಿಐಎಎಲ್‌ ವೆಬ್‌ಸೈಟ್‌ ನಲ್ಲಿಲಭ್ಯ. ಆಯಾ ವಿಮಾನಯಾನ ಸಂಸ್ಥೆಗಳ ವಿಮಾನ ಹಾರಾಟದ ಸ್ಥಿತಿಗತಿಗಳನ್ನು ಪರೀಕ್ಷಿಸಿಕೊಳ್ಳುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ.

ದಿನಾಂಕ, ವೈಮಾನಿಕ ಕಾರ್ಯ, ಸಮಯ, ನಿಲುಗಡೆ, ಉದ್ದೇಶ

ದಿನಾಂಕ, ವೈಮಾನಿಕ ಕಾರ್ಯ, ಸಮಯ, ನಿಲುಗಡೆ, ಉದ್ದೇಶ

*ಜ. 30 , 31 13:30-16:30 ಗಂಟೆ ಪೂರ್ವಾಭ್ಯಾಸ

*ಫೆ. 1 10:00-120:0 ಗಂಟೆ, 14:00-17:00ಗಂಟೆ ಪೂರ್ವಾಭ್ಯಾಸ

*ಫೆ. 2, 3 09:00-12:00 ಗಂಟೆ, 14:00-17:00ಗಂಟೆ ಉದ್ಘಾಟನಾ ಸಮಾರಂಭ ಮತ್ತು ವೈಮಾನಿಕ ಪ್ರದರ್ಶನ

*ಫೆ. 4, 5 10:00-12:00 ಗಂಟೆ, 14:00-17:00 ಗಂಟೆ ಏರೋ ಇಂಡಿಯಾ ಕಾರ್ಯಕ್ರಮ

ಡಿಜಿ ಯಾತ್ರಾ ಯೋಜನೆ

ಡಿಜಿ ಯಾತ್ರಾ ಯೋಜನೆ

ಏರೋ ಇಂಡಿಯಾ ಪ್ರದರ್ಶನ ನಡೆಯುವ ಸ್ಥಳದಲ್ಲಿ ಬಿಐಎಎಲ್‌, ಆದ್ಯಪ್ರವರ್ತಕ ಡಿಜಿ ಯಾತ್ರಾ ಯೋಜನೆಯನ್ನು ಪ್ರದರ್ಶಿಸಲಿದೆ. ವಿಮಾನ ನಿಲ್ದಾಣ ಪ್ರವೇಶಿಸುವ ಕಾರ್ಬ್‌ನಿಂದ ಹಿಡಿದು ವಿಮಾನ ಹತ್ತುವವರೆಗೆ ಸೀಮಾತೀತ, ತೊಂದರೆರಹಿತ ಮತ್ತು ಪೇಪರ್‌ರಹಿತ ಪ್ರಯಾಣಗಳಿಗಾಗಿ ಮುಖ ಗುರುತಿಸುವ ಪರಿಹಾರ ಈ ಡಿಜಿ ಯಾತ್ರಾ ಯೋಜನೆಯಾಗಿದೆ.

English summary
Just like previous Aero India editions, the Kempegowda International Airport will partially shut operations for a week due to the closure of airspace over Bengaluru. Beginning a few days before the show and till its conclusion, the airport will not operate flights for a total of 33 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X