ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ವಿಮಾನವೇರಲು ಆಧಾರ್ ಕಡ್ಡಾಯ !

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 09: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂದಿನ ವರ್ಷದಿಂದ ಸ್ಮಾರ್ಟ್ ಬೋರ್ಡಿಂಗ್ ವ್ಯವಸ್ಥೆ ಜಾರಿಗೆ ತರಲು ಬಿಐಎಎಲ್ ಯೋಜನೆ ಹಾಕಿಕೊಂಡಿದೆ.

ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ

ಪ್ರಾಯೋಗಿಕ ಹಂತವಾಗಿ ಎರಡು ತಿಂಗಳು ಈ ಯೋಜನೆ ಜಾರಿಗೆ ಬರಲಿದೆ. ಇದಾದ ಬಳಿಕ ಆಧಾರ್ ಆಧಾರಿತ ವ್ಯವಸ್ಥೆಯುಳ್ಳ ಮೊದಲ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ನಮ್ಮ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಲಿದೆ.

Bengaluru's Kempegowda International Airport to be Aadhaar-enabled by 2018?

ಭಾರತದಲ್ಲಿ ಇದೇ ಮೊದಲ ಬಾರಿಗೆ ಆಧಾರ್​ ಆಧಾರಿತ ಪ್ರವೇಶ ವ್ಯವಸ್ಥೆ ಮತ್ತು ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯುಳ್ಳ ವಿಮಾನ ನಿಲ್ದಾಣವಾಗುವತ್ತ ಕೆಐಎಎಲ್ ಸಾಗಿದೆ.

ಅಂಚೆ ಕಚೇರಿ ಠೇವಣಿ, ಕೆವಿಪಿ, ಪಿಪಿಎಫ್ ಗಳಿಗೂ ಆಧಾರ್ ಕಡ್ಡಾಯಅಂಚೆ ಕಚೇರಿ ಠೇವಣಿ, ಕೆವಿಪಿ, ಪಿಪಿಎಫ್ ಗಳಿಗೂ ಆಧಾರ್ ಕಡ್ಡಾಯ

ಯೋಜನೆಯ ರೂಪುರೇಷೆಗಳ ಪ್ರಕಾರ 2018 ಡಿಸೆಂಬರ್ ವೇಳೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಿದೆ. ಡಿಜಿಟಲ್ ಇಂಡಿಯಾ ಯೋಜನೆಗೆ ಅನುಗುಣವಾಗಿ ಸ್ಮಾರ್ಟ್​ ಏರ್​ಪೋರ್ಟ್​ ಮೇಲ್ದರ್ಜೆಗೇರಿಸಲಾಗುತ್ತಿದೆ.

ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?ಅಧಾರ್ ಹಾಗೂ ಡ್ರೈವಿಂಗ್ ಲೈಸನ್ಸ್ ಜೋಡಣೆ ಹೇಗೆ?

ಅಕ್ಟೋಬರ್​ 4, 2018ರಿಂದ ಈ ಹೊಸ ವ್ಯವಸ್ಥೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಜಾರಿಗೆ ಬರಲಿದ್ದು, ಡಿಸೆಂಬರ್​ 31,2018ರ ವೇಳೆಗೆ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲಿದೆ.

English summary
The Kempegowda International Airport (KIA) in Bengaluru will become the country's first airport to have completely Aadhaar-enabled entry and biometric boarding system as the Bangalore International Airport Limited (BIAL) has backed the plan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X